ಉತ್ತರಪ್ರದೇಶ:ಆಕೆ ವೈದ್ಯರನ್ನು ನೋಡಲೆಂದು ಆಸ್ಪತ್ರೆಗೆ ಹೋಗಿದ್ದಳು. ಆದರೆ ಅಲ್ಲಿ ಆಕೆಗೊಂದು ಭಾರಿ ಅಚ್ಚರಿ ಎದುರಾಗಿತ್ತು. ಏಕೆಂದರೆ ಹತ್ತು ವರ್ಷಗಳ ಹಿಂದೆ ಕಾಣೆಯಾಗಿದ್ದ ಪತಿಯೇ ಕಣ್ಣೆದುರಿಗೆ ಇರುವುದು ಕಂಡುಬಂದಿತ್ತು. ಇಂಥದ್ದೊಂದು ವಿಸ್ಮಯ ಉತ್ತರಪ್ರದೇಶದಲ್ಲಿ ನಡೆದಿದೆ.
ಮೋತಿಚಂದ್ ವರ್ಮಾ (44) ಉತ್ತರಪ್ರದೇಶದ ಸುಖ್​ಪುರ ಪ್ರದೇಶದ ದೇವ್​ಕಳಿ ಗ್ರಾಮದ ನಿವಾಸಿಯಾಗಿದ್ದು, ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ. ಆದರೆ ವೈದ್ಯರನ್ನು ನೋಡಲೆಂದು ಆಸ್ಪತ್ರೆಗೆ ತೆರಳಿದ್ದ ಪತ್ನಿ ಜಾನಕಿದೇವಿಗೆ ಆಶ್ಚರ್ಯ ಎಂಬಂತೆ ಅಲ್ಲಿ ಪತಿಯ ದರ್ಶನವಾಗಿದೆ.
ಇದನ್ನೂ ಓದಿ:35 ವರ್ಷಗಳ ಬಳಿಕ ಅಮ್ಮ-ಮಗನನ್ನು ಒಂದುಗೂಡಿಸಿದ ಪ್ರವಾಹ!
ಕಳೆದ ಶುಕ್ರವಾರ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಜಾನಕಿದೇವಿಗೆ ಅಲ್ಲಿನ ಗೇಟ್ ಬಳಿ ವ್ಯಕ್ತಿಯೊಬ್ಬ ಕೂತಿರುವುದು ಕಾಣಿಸಿತ್ತು. ಹತ್ತಿರ ಹೋಗಿ ನೋಡಿದಾಗ ಆತ ಆಕೆಯ ಪತಿಯೇ ಎಂಬುದು ಖಚಿತವಾಗಿತ್ತು. ಹತ್ತು ವರ್ಷಗಳಿಂದ ನಾಪತ್ತೆಯಾಗಿ ಉದ್ದ ಕೆದರಿದ ಕೂದಲು, ಗಡ್ಡದ ಮೂಲಕ ಮತ್ತೆ ಮೋತಿಚಂದ್ ಸಿಕ್ಕಿ ಇಬ್ಬರ ಪುನರ್ಮಿಲನದ ದೃಶ್ಯದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಇಬ್ಬರಿಗೂ ಮದುವೆಯಾಗಿ 22 ವರ್ಷಗಳಾಗಿವೆ. ಆದರೆ ಮದುವೆಯಾಗಿ 12 ವರ್ಷಗಳಾಗುತ್ತಿದ್ದಂತೆ ವರ್ಮಾ ನಾಪತ್ತೆ ಆಗಿದ್ದು, ಆತನಿಗಾಗಿ ಜಾನಕಿ ತುಂಬಾ ಹುಡುಕಾಡಿದ್ದಳು. ಅದಾಗ್ಯೂ ಆತನ ಪತ್ತೆ ಆಗಿರಲಿಲ್ಲ. ಆದರೆ ಹತ್ತು ವರ್ಷಗಳ ಬಳಿಕ ಪತಿ ತಾನಾಗೇ ಸಿಕ್ಕಿದ್ದು, ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತಡವಿಕೊಂಡಂತಾಗಿದೆ.
In UP’s Ballia, a woman was reunited with her husband who had gone missing 10 years ago. The woman claimed she bumped into her missing husband while she was on her way to hospital.pic.twitter.com/eNGrih1p52
— Piyush Rai (@Benarasiyaa)July 29, 2023

ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!

ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − five =
Remember me
