ತೆಲಂಗಾಣ:ಅನಾರೋಗ್ಯದ ಕಾರಣಕ್ಕಾಗಿ ಆಸ್ತಿ-ಮನೆ ಮಾರಾಟ ಮಾಡಿದವರಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಮಗನ ಚಿಕಿತ್ಸೆಗಾಗಿ ಇನ್ನೊಬ್ಬ ಮಗನನ್ನೇ ಮಾರಾಟ ಮಾಡಲು ಯತ್ನಿಸಿದ ಪ್ರಕರಣ ನಡೆದಿದೆ. ಆದರೆ ಈ ವಿಷಯ ಗೊತ್ತಾದ ಪತ್ನಿ, ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.
ತೆಲಂಗಾಣದ ವಾರಂಗಲ್​ನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಇಲ್ಲಿನ ಕರೀಮಬಾದ್ ನಿವಾಸಿ ಮಸೂದ್ ಎಂಬಾತನೇ ಮಗನನ್ನು ಮಾರಾಟ ಮಾಡಲು ಯತ್ನಿಸಿದ್ದ ವ್ಯಕ್ತಿ. ಈತ ತನ್ನ ಕಿರಿಯ ಮಗನ ಚಿಕಿತ್ಸೆಗಾಗಿ ಅವನಿಗಿಂತ ಹಿರಿಯ ಅಂದರೆ 4 ವರ್ಷದ ಪುತ್ರನನ್ನು ಮಾರಾಟ ಮಾಡಲು ಮುಂದಾಗಿದ್ದ.
ಇದನ್ನೂ ಓದಿ:‘ಪಾದಯಾತ್ರೆ ಅಷ್ಟೇ ಅಲ್ಲ, ತೀರ್ಥಯಾತ್ರೆಗೂ ಸಜ್ಜಾಗಿ’: ಕಾಂಗ್ರೆಸ್ ವಿರುದ್ಧ ಏನಿದು ಬಿಜೆಪಿಯ ಹೊಸ ಪ್ಲ್ಯಾನ್?
ಕಿರಿಯ ಮಗನನ್ನು ಇಲ್ಲಿನ ಎಂಜಿಎಂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆ ಖರ್ಚನ್ನು ಭರಿಸಲಾಗದೆ ಚಿಂತಿತನಾಗಿದ್ದ. ಅದಕ್ಕಾಗಿ ತನ್ನ 4 ವರ್ಷದ ಪುತ್ರ ಅಯನ್​ ಎಂಬಾತನನ್ನು ಮಾರಾಟ ಮಾಡಲು ನಿರ್ಧರಿಸಿದ್ದ. ತಾನು ಪುತ್ರನನ್ನು ತನ್ನ ಸಹೋದರಿಯ ಮನೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಪತ್ನಿ ಬಳಿ ಹೇಳಿ ಕರೆದೊಯ್ದಿದ್ದ.
ಇದನ್ನೂ ಓದಿ:ಪತಿಗಿಂತ ಪತ್ನಿಗೇ ಹೆಚ್ಚು ಸಂಪಾದನೆ; ಜೀವನಾಂಶ ನೀಡಲಾಗದು ಎಂಬುದನ್ನು ಎತ್ತಿ ಹಿಡಿದ ಕೋರ್ಟ್
ಆದರೆ ಈ ವಿಷಯ ಪತ್ನಿಗೆ ಗೊತ್ತಾಗಿ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತನ್ನ ಸಹೋದರನೊಂದಿಗೆ ಮತ್ತೆವಾಡಾ ಪೊಲೀಸ್ ಠಾಣೆಗೆ ತೆರಳಿ ಈ ಮಹಿಳೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. –ಏಜೆನ್ಸೀಸ್
ರಾಜ್ಯಕ್ಕೆ ಮಾನ್ಸೂನ್ ಆಗಮನ ಯಾವಾಗ?; ಇಲ್ಲಿದೆ ಹವಾಮಾನ ಇಲಾಖೆ ಮಾಹಿತಿ

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಯೋಜನೆ, ಎರಡು ರೀತಿಯ ವಿಸ್ತರಣೆಗೆ ಪ್ರಸ್ತಾವನೆ: ಇಲ್ಲಿದೆ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − nine =
Remember me
