ನವದೆಹಲಿ:ವೈರಲ್​ ಟಿಕ್​ಟಾಕ್​ ವಿಡಿಯೋ ನೋಡಿ ಮೊಟ್ಟೆ ಬೇಯಿಸಲು ಪ್ರಯತ್ನಿಸಿದ ಮಹಿಳೆಯೊಬ್ಬಳು ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾಳೆ. ಇಂದು ಬಹುತೇಕರು ಅಡುಗೆ ಮಾಡಲು ಜಾಲತಾಣ ಮೊರೆ ಹೋಗಿರುವ ಸಂದರ್ಭದಲ್ಲಿ ಈ ಮಹಿಳೆಗಾದ ಅನುಭವ ಎಲ್ಲರಿಗೂ ಒಂದು ಎಚ್ಚರಿಕೆಯ ಸಂದೇಶವಾಗಿ ಪರಿಣಮಿಸಿದೆ.
ಮೊಟ್ಟೆ ಬೇಯಿಸುವಾಗ ಮೊಟ್ಟೆ ಸ್ಫೋಟಗೊಂಡು 37 ವರ್ಷದ ಶಾಫಿಯಾ ಬಶೀರ್​ ಎಂಬುವರ ಮುಖದ ಚರ್ಮ ಕಿತ್ತು ಬಂದಿದೆ ಎಂದು ಇಂಡಿಪೆಂಡೆಟ್​ ಎಂಬ ಮಾಧ್ಯಮ ವರದಿ ಮಾಡಿದೆ. ಇದೀಗ ಸಂತ್ರಸ್ತ ಮಹಿಳೆ ಜಾಲತಾಣವನ್ನು ನೋಡಿ ಪ್ರಯೋಗ ಮಾಡಲು ಹೋಗಬೇಡಿ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಬಿ ದಯಾನಂದ ನೇಮಕ
ಮಹಿಳೆ ಮೊಟ್ಟೆಗಳನ್ನು ಕುದಿಯುವ ನೀರಿನಿಂದ ತುಂಬಿದ ಮಗ್​ನಲ್ಲಿ ಹಾಕಿ ನಂತರ ಅದನ್ನು ಮೈಕ್ರೋವೇವ್​ನಲ್ಲಿ ಒಂದೆರಡು ನಿಮಿಷಗಳ ಕಾಲ ಇರಿಸಿದಳು. ಬಳಿಕ ತಣ್ಣನೆಯ ಚಮಚದಿಂದ ಮೊಟ್ಟೆಯನ್ನು ಹೊರ ತೆಗೆದಾಗ ಅದು ಸ್ಫೋಟಗೊಂಡಿದೆ. ಇದರಿಂದ ಆಕೆಯ ಮುಖದ ಬಲಭಾಗ ಸುಟ್ಟಿದೆ. ಇದು ತನ್ನ ಜೀವನದ “ಅತ್ಯಂತ ಅಸಹನೀಯ” ನೋವು ಎಂದು ಸಂತ್ರಸ್ತೆ ಬಶೀರ್ ಹೇಳಿದ್ದಾರೆ.

ಬೇರೆ ಯಾರೂ ಕೂಡ ಈ ರೀತಿಯ ಪ್ರಯತ್ನಕ್ಕೆ ಕೈ ಹಾಕಬೇಡಿ ಎಂದು ಬಶೀರ್​ ಅವರು ಸಲಹೆ ನೀಡಿದ್ದಾರೆ. ಘಟನೆಯ ನಂತರ, ಆಸ್ಪತ್ರೆಯಲ್ಲಿ ತುರ್ತು ವಿಭಾಗಕ್ಕೆ ಭೇಟಿ ಚಿಕಿತ್ಸೆ ಪಡೆಸುಕೊಂಡಿದ್ದಾರೆ. ನನ್ನ ಮುಖವು ಈಗ ವಾಸಿಯಾಗಿದೆ. ಅದೃಷ್ಟವಶಾತ್ ಯಾವುದೇ ಗುರುತುಗಳಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ದೆಹಲಿ ಕೋರ್ಟ್

ಅಕ್ರಮ ಸಂಬಂಧ; ಪ್ರೀತಿಸಿ ಮದುವೆಯಾದವಳನ್ನೇ ಕೊಚ್ಚಿ ಕೊಲೆಗೈದ ಪತಿ

ನವಜಾತ ಹೆಣ್ಣು ಮಗುವಿಗೆ ವಿಷದ ಇಂಜೆಕ್ಷನ್​ ಚುಚ್ಚಿದ ತಂದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − one =
Remember me
