ಕೊಲ್ಲಂ:ನಡುರಸ್ತೆಯಲ್ಲಿ ಮಹಿಳೆಯರು ಜಗಳ ಆಡುವುದನ್ನು ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ಆಟೋ ಚಾಲಕನ ಮೇಲೆ ದಾಳಿ ಮಾಡಿದ ಮಹಿಳೆಯೊಬ್ಬರು ಚಾಲಕನ ಕೈ ಮುರಿದಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.
ಕೊಲ್ಲಂನ ಕಡಕ್ಕಲ್​ ಮೂಲದ ವಿಜಿತ್, ಕೈ ಮುರಿತಕ್ಕೆ ಒಳಗಾದ ವ್ಯಕ್ತಿ. ಕಳೆದ ಮಂಗಳವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಾಂಗಲುಕಾಡು ಮೂಲದ ಅನ್ಸಿಯಾ ಎಂಬುವರು ಕಬ್ಬಿಣದ ಸಲಾಕೆಯಿಂದ ವಿಜಿತ್​ ಮೇಲೆ ಹಲ್ಲೆ ಮಾಡಿದ್ದರು. ಆಕೆಯ ವಿರುದ್ಧ ಜಾಮೀನು ರಹಿತ ಸೆಕ್ಷನ್​ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ​
ಇದನ್ನೂ ಓದಿ:ಬಿಜೆಪಿ ನಡತೆಯಿಂದ ಪ್ರಜಾಪ್ರಭುತ್ವಕ್ಕೆ ಪ್ರತಿನಿತ್ಯ ಕರಾಳ ದಿನವಾಗಿದೆ; ಡಿ‌ ಕೆ ಶಿವಕುಮಾರ್
ಪಾಂಗಲುಕಾಡು ಎಂಬಲ್ಲಿ ಟೈಲರಿಂಗ್ ಘಟಕ ನಡೆಸುತ್ತಿರುವ ಅನ್ಸಿಯಾ ಹಾಗೂ ಇತರ ಇಬ್ಬರು ಮಹಿಳೆಯರು ನಡುರಸ್ತೆಯಲ್ಲಿ ಜಗಳವಾಡುತ್ತಿದ್ದರು. ಮಹಿಳೆಯರು ನಿಂದಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದ್ದು, ಕಲ್ಲು ತೂರಾಟವೂ ನಡೆದಿದೆ. ದಾಳಿಯ ವಿಡಿಯೋವನ್ನು ವಿಜಿತ್​ ರೆಕಾರ್ಡ್ ಮಾಡಿದ್ದಾನೆ ಎಂದು ಶಂಕಿಸಿದ ಅನ್ಸಿಯಾ, ಆಟೋ ನಿಲ್ದಾಣಕ್ಕೆ ಬಂದು ವಿಡಿಯೋ ರೆಕಾರ್ಡ್​ ಬಗ್ಗೆ ಪ್ರಶ್ನಿಸಿದ್ದಾರೆ. ವಿಡಿಯೋ ರೆಕಾರ್ಡ್​ ಮಾಡಿಲ್ಲ ಅಂತ ವಿಜಿತ್​ ಹೇಳಿದರೂ ಕೇಳದ ಅನ್ಸಿಯಾ, ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿ, ಅಲ್ಲಿಂದ ಪರಾರಿಯಾಗಿದಳು. ಘಟನಾ ಸ್ಥಳದಲ್ಲಿದ್ದವರು ಕೂಡಲೇ ವಿಜಿತ್​ನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ಅನ್ಸಿಯಾರೊಂದಿಗೆ ಜಗಳವಾಡಿದ ಇಬ್ಬರು ಮಹಿಳೆಯರ ದೂರಿನ ಆಧಾರದ ಮೇಲೆ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಅನ್ಸಿಯಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.(ಏಜೆನ್ಸೀಸ್​)
ಇಂದು ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ IPL ಟ್ರೋಫಿ ಪ್ರದರ್ಶನ: ಎಲ್ಲೆಲ್ಲಿ? ಎಷ್ಟೊತ್ತಿಗೆ? ಇಲ್ಲಿದೆ ಮಾಹಿತಿ…

ಮಂಗಳಮುಖಿಯರ ಮೊಟ್ಟ ಮೊದಲ ಸಲೂನ್ ಕಾರ್ಯಾರಂಭ!

ಜುಲೈನಲ್ಲಿ ಧನುಷ್​ ಜತೆ ಮದುವೆ! ನಟಿ ಮೀನಾ ಕೊಟ್ಟ ಪ್ರತಿಕ್ರಿಯೆ ಹೀಗಿದೆ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
