ಕೋಲ್ಕತ:ತಾಯಿ ದೇವರು ಎನ್ನುತ್ತಾರೆ. ಆದರೆ ಅದೇ ತಾಯಿ ದೆವ್ವವಾಗಿ ಮಗನನ್ನೇ ಕೊಂದುಬಿಟ್ಟರೆ. ಮಗನ ತಲೆಯನ್ನು ಜಜ್ಜಿ ಅದಕ್ಕೆ ಉಪ್ಪು, ಕಾರ, ತುಪ್ಪ ಹಾಕಿ ಬೇಯಿಸಿದರೆ? ವಿಚಿತ್ರವೆನಿಸಿದರೂ ಇದು ಸತ್ಯ. ಪಶ್ಚಿಮ ಬಂಗಾಳದಲ್ಲಿ ಇಂತದ್ದೊಂದು ಘಟನೆ ನಡೆದಿದೆ.
ಇದನ್ನೂ ಓದಿ:ನಾಯಿಯನ್ನು ಕಾರಿನ ಹಿಂದೆ ಕಟ್ಟಿ ರಸ್ತೆಯಲ್ಲಿ ಧರಧರನೆ ಎಳೆದೊಯ್ದ ದುಷ್ಟ! ಕಾರಣ ಕೇಳಿದರೆ ಗಾಬರಿಯಾಗುತ್ತೀರ
ಅಪ್ಪ ಅಮ್ಮ ಇಬ್ಬರು ಗಂಡು ಮಕ್ಕಳ ಸುಂದರ ಕುಟುಂಬ. ಆದರೆ ಮೊದಲನೇ ಮಗ ಅರ್ಜುನ್​ಗೆ (25) ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿತ್ತು. ಆತ ಯಾವಾಗಲೂ ಅನಾರೋಗ್ಯದಿಂದಲೇ ಬಳಲುತ್ತಿದ್ದ. ಕಳೆದ ವರ್ಷ ದಂಪತಿ ನಡುವೆ ಯಾವುದೋ ವಿಚಾರದಲ್ಲಿ ಜಗಳವಾಗಿದ್ದು, ಗಂಡ ಮನೆ ಬಿಟ್ಟು ಹೋಗಿದ್ದಾನೆ. ಇಬ್ಬರು ಮಕ್ಕಳೊಂದಿಗೆ ಬದುಕುತ್ತಿದ್ದ ತಾಯಿ ಇತ್ತೀಚೆಗೆ ಮಾಡಬಾರದ ತಪ್ಪು ಮಾಡಿಬಿಟ್ಟಿದ್ದಾಳೆ.
ತಾಯಿ ಗೀತಾ, ಅರ್ಜುನ್​ನ ತಲೆಗೆ ಗ್ರೈಂಡರ್​ನ ಕಲ್ಲಿನಿಂದ ಜೋರಾಗಿ ಹೊಡೆದಿದ್ದಾಳೆ. ಮಗನ ತಲೆಯನ್ನು ಜಜ್ಜಿ ಅದಕ್ಕೆ ತುಪ್ಪ, ಕಾರದ ಪುಡಿ, ಉಪ್ಪು ಹಾಕಿ ಬೇಯಿಸಿದ್ದಾಳೆ. ನಂತರ ಉಳಿದ ದೇಹವನ್ನು ಮನೆಯ ಮೂಲೆಯೊಂದರಲ್ಲಿ ಟವಲ್​ನಲ್ಲಿ ಸುತ್ತಿಡಲಾಗಿದೆ.
ಕೆಲ ದಿನಗಳಿಂದ ಮಗ ಕಾಣಿಸಿಲ್ಲ ಎನ್ನುವ ವಿಚಾರ ತಂದೆ ಅನಿಲ್​ಗೆ ಗೊತ್ತಾಗಿದೆ. ಹೆಂಡತಿ ಮೇಲೆ ನಂಬಿಕೆ ಇರದ ಆತ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾನೆ. ಪೊಲೀಸರು ಮನೆಗೆ ಬಂದು ಪರಶೀಲಿಸಿದಾಗ ಅರ್ಜುನ್​ನ ದೇಹದ ಕೆಲ ಭಾಗಗಳು ಪತ್ತೆಯಾಗಿವೆ. ತಕ್ಷಣವೇ ತಾಯಿ ಗೀತಾ ಮತ್ತು ತಮ್ಮ ವಿಧುರನನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಎರಡು ತಿಂಗಳ ಹಿಂದೆ ಮೂರು ಮಕ್ಕಳ ಜತೆ ಕಾಣೆಯಾಗಿದ್ದ ತಾಯಿ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ!
ವಿಚಾರಣೆ ವೇಳೆ ಗೀತಾ ನಡೆದ ವಿಚಾರವನ್ನು ಬಾಯಿಬಿಟ್ಟಿದ್ದಾಳೆ. ತಾನು ಮಂತ್ರ ತಂತ್ರವನ್ನು ನಂಬುವವಳಾಗಿದ್ದು, ಅದರ ಪೂಜೆಗೆಂದು ಮಗನನ್ನು ಬಲಿ ಕೊಟ್ಟೆ. ವಾಸನೆ ಬರಬಾರದು ಎಂದು ಅವನ ತಲೆಯನ್ನು ಜಜ್ಜಿ ಅದಕ್ಕೆ ತುಪ್ಪ ಹಾಕಿ ಬೇಯಿಸಿದೆ ಎಂದು ಆಕೆ ಹೇಳಿದ್ದಾಳೆ. ಗೀತಾ ಪರವಾಗಿ ವಾದ ಮಾಡಲು ಮುಂದಾಗಿರುವ ವಕೀಲರು ಆಕೆಗೆ ಜಾಮೀನು ಕೋರುವ ಬದಲು ಆಕೆಯನ್ನು ಮಾನಸಿಕ ರೋಗಿಗಳ ಆಸ್ಪತ್ರೆಗೆ ದಾಖಲಿಸಲು ಕೋರಿದ್ದಾರೆ. (ಏಜೆನ್ಸೀಸ್​)
8 ವರ್ಷ ಪ್ರೀತಿಸಿ ಮದುವೆಯಾದ ತಂಗಿ; ಮನೆಗೆ ಕರೆಸಿದ ಅಣ್ಣ ಎಂತಹ ಗಿಫ್ಟ್​ ಕೊಟ್ಟ ಗೊತ್ತಾ?

ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 6 =
Remember me
