ರಾಯ್​ಪುರ:ಹೆಂಡತಿಯೊಬ್ಬಳು ಗಂಡನನ್ನು ಕೊಂದು, ಮೂರು ಮಕ್ಕಳನ್ನು ಬಾವಿಗೆ ನೂಕಿ, ತಾನೂ ಬಾವಿಗೆ ಹಾರಿರುವ ಘಟನೆ ಚತ್ತೀಸ್​ಗಢದ ಜಿಪಿಎಂ ಜಿಲ್ಲೆಯಲ್ಲಿ ನಡೆದಿದೆ. ತನಿಖೆ ನಡೆಸಿದಾಗ ಘಟನೆಯ ನಿಜ ವಿಚಾರ ಹೊರಗೆ ಬಿದ್ದಿದೆ.
ಇದನ್ನೂ ಓದಿ:ಬೀದಿನಾಯಿ ಕಚ್ಚಿದ್ರೂ ಸುಮ್ನಿರ್ಬೇಕಂತೆ; ಇಲ್ಲಂದ್ರೆ ಮೇನಕಾ ಗಾಂಧಿ ಫೋನ್​ ಮಾಡಿ ಬೆದರಿಕೆ ಹಾಕ್ತಾರೆ!
ಸೋಮವಾರದಂದು ಮನೆಯವರೆಲ್ಲರೂ ಮಲಗಿದ್ದ ಸಮಯವನ್ನು ನೋಡಿ, ಮುಂಜಾನೆ 4 ಗಂಟೆ ಹೊತ್ತಿಗೆ ಎದ್ದ ಮಹಿಳೆ, ಮನೆಯಲ್ಲಿದ್ದ ಕೊಡಲಿಯಿಂದ ಗಂಡನ ಕುತ್ತಿಗೆಗೆ ಹೊಡೆದಿದ್ದಾಳೆ. ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ನಂತರ ತನ್ನ 1 ವರ್ಷದ ಮಗು, ಎರಡೂವರೆ ಮತ್ತು 4 ವರ್ಷದ ಇಬ್ಬರು ಮಕ್ಕಳನ್ನು ಮನೆಯಿಂದ ಹೊರಗೆ ಎಳೆತಂದಿದ್ದಾಳೆ. ಮನೆಯ ಬಳಿ ಇದ್ದ ಬಾವಿಯ ಬಳಿಗೆ ಹೆಣ್ಣು ಮಕ್ಕಳನ್ನು ಎಳೆದೊಯ್ದು ಒಬ್ಬರಾದ ಮೇಲೆ ಒಬ್ಬರನ್ನು ಬಾವಿಯೊಳಗೆ ನೂಕಿದ್ದಾಳೆ. ಮೂರು ಮಕ್ಕಳನ್ನು ನೂಕಿದ ನಂತರ ತಾನೂ ಬಾವಿಗೆ ಹಾರಿದ್ದಾಳೆ.
ಮುಂಜಾನೆ ವೇಳೇಲಿ ಬಾವಿಯಲ್ಲಿ ಸದ್ದು ಕೇಳಿದ ಸ್ಥಳೀಯರು ಎದ್ದು ಬಂದು ಹೊರಗೆ ನೋಡಿದಾಗ ಮಹಿಳೆ ಈ ರೀತಿ ಮಾಡುತ್ತಿರುವುದು ಕಂಡುಬಂದಿದೆ. ಬಾವಿಗೆ ಬಿದ್ದ ಮಹಿಳೆಯನ್ನು ಮತ್ತು ಮಕ್ಕಳನ್ನು ಸ್ಥಳೀಯರು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದ ಅದೇ ಕಾರಣದಿಂದಾಗಿ ಈ ರೀತಿ ಮಾಡಿರುವುದಾಗಿ ಕುಟುಂಬಸ್ಥರು ಮತ್ತು ಸ್ಥಳೀಯರು ತಿಳಿಸಿದ್ದಾರೆ. ಆಕೆಯನ್ನು ಎಲ್ಲರೂ ಹುಚ್ಚಿಯೆಂದೇ ಕರೆಯುತ್ತಿದ್ದರು ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಪಿಯು ಪಾಸಾದ ಬಾಲಕಿಯರಿಗೆ ಸ್ಕೂಟರ್ ಗಿಫ್ಟ್​ ಕೊಡಲು ಮುಂದಾದ ರಾಜ್ಯ ಸರ್ಕಾರ! ಶಾಲೆಗೆ ಹೋದರೆ ಸಿಗುತ್ತೆ ದುಡ್ಡು!
ಮೂರು ಮಕ್ಕಳು ಮತ್ತು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಗೆ ಮಾನಸಿಕ ಚಿಕಿತ್ಸೆ ಕೊಡಿಸುವುದಾಗಿಯೂ ತಿಳಿಸಲಾಗಿದೆ. ಮಹಿಳೆಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)
ಮಾರಣಾಂತಿಕ ಎಬೋಲಾ ಪತ್ತೆಹಚ್ಚಿದ ವೈದ್ಯನಿಂದ ಇಡೀ ಮನುಕುಲವೇ ಬೆಚ್ಚಿಬೀಳುವಂತಹ ಎಚ್ಚರಿಕೆ!

‘ಸಿದ್ದರಾಮಯ್ಯನವರು ನಮ್ಮೂರಿಗೆ ಏನೂ ಮಾಡಿಲ್ಲ’ ಸಿದ್ದರಾಮಯ್ಯ ಎದುರೇ ಅಸಮಾಧಾನ ತೋಡಿಕೊಂಡ ಗ್ರಾ.ಪಂ ಸದಸ್ಯ! ವೇದಿಕೆಯಿಂದ ಕೆಳಕ್ಕೆ ನೂಕಿದ ಸಿದ್ದರಾಮಯ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
