ಶ್ರೀನಗರ:ತೊಟ್ಟಿಲು ತೂಗುವ ಕೈ ಲೋಕವನ್ನೇ ಆಳಬಹುದು ಎನ್ನುತ್ತಾರೆ. ಪೂರ್ತಿ ಕುಟುಂಬದ ಜವಾಬ್ದಾರಿ ಹೊರುವ ಶಕ್ತಿ ಹೆಣ್ಣಿಗಿದ್ದೇ ಇದೆ. ಕೆಲಸ ಕಳೆದುಕೊಂಡ ಅಪ್ಪನನ್ನು ಕಂಡು ತಾನೇ ಆಟೋ ಡ್ರೈವರ್ ಸೀಟಲ್ಲಿ ಕುಳಿತು ಜೀವನದ ಬಂಡಿ ಸಾಗಿಸುತ್ತಿರುವ ಯುವತಿಯ ಕಥೆ ಇದು.
ಇದನ್ನೂ ಓದಿ:ಅತಿದೊಡ್ಡ ಮಾರುಕಟ್ಟೆಯಿಂದ ಹೊರಬಿತ್ತು ಹಕ್ಕಿಜ್ವರದ ರಿಪೋರ್ಟ್‌- ಚಿಕನ್‌ ಪ್ರಿಯರಿಗೆ ಸಿಕ್ತು ಗುಡ್‌ನ್ಯೂಸ್‌
ಜಮ್ಮು ಕಾಶ್ಮೀರದಲ್ಲಿ ದ್ವಿತೀಯ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ ಬಂಜೀತ್​ ಕೌರ್​ (21) ತಂದೆ ಶಾಲೆಯ ಬಸ್ಸೊಂದಕ್ಕೆ ಚಾಲಕನಾಗಿ ಕೆಲಸ ಮಾಡುತ್ತಿದ್ದನಂತೆ. ಆದರೆ ಕರೊನಾ ಲಾಕ್​ಡೌನ್​ ಬಂದ ನಂತರ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಆಟೋ ತೆಗೆದುಕೊಂಡು ಅದರ ಚಾಲಕನಾಗಿ ಕೆಲಸ ಮಾಡಲಾರಂಭಿಸಿದನಾದರೂ ಅದು ಆತನಿಂದ ಸಾಧ್ಯವಾಗಲಿಲ್ಲವಂತೆ. ಇದನ್ನೆಲ್ಲ ನೋಡಿದ ಬಂಜೀತ್​ ತಾನು ಆಟೋ ಕಲಿಯುವ ಹಠ ಕಟ್ಟಿ, ಅಪ್ಪನ ಸಹಾಯದಿಂದ ಆಟೋ ಓಡಿಸುವುದು ಕಲಿತಿದ್ದಾಳೆ. ನಂತರ ಅದನ್ನೇ ತನ್ನ ಕೆಲಸವನ್ನಾಗಿಸಿಕೊಂಡು ಜೀವನ ಆರಂಭಿಸಿದ್ದಾಳೆ. ಇದೀಗ ಪೂರ್ತಿ ಕುಟುಂಬದ ಆರ್ಥಿಕತೆಯನ್ನು ಆಕೆಯೇ ನೋಡಿಕೊಳ್ಳುತ್ತಿದ್ದಾಳಂತೆ.
ಇದನ್ನೂ ಓದಿ:ಈ ಬಾರಿ ಗವಿಗಂಗಾಧರೇಶ್ವರ ಸ್ವಾಮಿಗಿಲ್ಲ ಸೂರ್ಯರಶ್ಮಿ! ಶಿವಲಿಂಗವನ್ನ ಸ್ಪರ್ಶಿಸದೆ ಪಥ ಬದಲಿಸಿದ ಭಾಸ್ಕರ
ನಾವು ಹೆಣ್ಣು ಮಕ್ಕಳು ಏನನ್ನಾದರೂ ಮಾಡಬಲ್ಲವೆ. ಅದರೆ ನಮ್ಮ ಗಡಿಯನ್ನು ದಾಟಿ ಯೋಚನೆ ಮಾಡುವ ಸಾಮರ್ಥ್ಯ ನಮಗಿರಬೇಕಷ್ಟೇ ಎನ್ನುತ್ತಾರೆ ಬಂಜೀತ್​. ನನ್ನ ಮಗಳು ಆಟೋ ಕಲಿಸಿಕೊಡಿ ಎಂದಾಗ ಮುಂದೆ ಆಕೆಯೇ ನಮ್ಮ ಕುಟುಂಬಕ್ಕೆ ಆಧಾರವಾಗುತ್ತಾಳೆ ಎನ್ನುವ ನಂಬಿಕೆ ನನಗಿರಲಿಲ್ಲ. ಆದರೆ ಈಗ ಅವಳನ್ನು ನೋಡಿದರೆ ಹೆಮ್ಮೆಯಾಗುತ್ತದೆ ಎನ್ನುತ್ತಾರೆ ಆಕೆಯ ತಂದೆ. ಕೇವಲ ಕುಟುಂಬಸ್ಥರು ಮಾತ್ರವಲ್ಲದೆ ಪೂರ್ತಿ ರಾಜ್ಯವೇ ಬಂಜೀತ್​ಳನ್ನು ಹೆಮ್ಮೆಯಿಂದ ನೋಡಲಾರಂಭಿಸಿದೆ. (ಏಜೆನ್ಸೀಸ್​)
ಸ್ಟಾರ್ ಹೋಟೆಲ್​ನಲ್ಲಿ ಕಲರ್-ಕಲರ್ ಕಾಗೆ ಹಾರಿಸೋದೇ ಈತನ ಟ್ಯಾಲೆಂಟ್‌! ಹಣಕ್ಕಾಗಿ ಹೀಗಾ ಮಾಡೋದು?

ಚಿಂತೆ, ಒತ್ತಡದಲ್ಲಿದ್ದರೆ ಕರೊನಾ ಲಸಿಕೆಯೂ ಕೆಲಸ ಮಾಡುವುದಿಲ್ಲ! ವಿಜ್ಞಾನಿಗಳ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + one =
Remember me
