ಶಿಮ್ಲಾ: ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂಥ ಪೈಶಾಚಿಕ ಕೃತ್ಯ ಹಿಮಾಚಲ ಪ್ರದೇಶದ ಕಂಗ್ರಾ ಎಂಬಲ್ಲಿಂದ ವರದಿಯಾಗಿದೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಏಳು ಆರೋಪಿಗಳನ್ನು ಗಗಾಲ್ ಗಂಜ್​ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಂಗ್ರಾದ ಬನೋಯಿ ಪ್ರದೇಶದಲ್ಲಿರುವ ಬಸ್​ನಿಲ್ದಾಣದಲ್ಲಿ 32 ವರ್ಷದ ಮಹಿಳೆ ಬಸ್​ಗಾಗಿ ಕಾಯುತ್ತಿದ್ದರು. ಆಗ ಅಲ್ಲಿಗೆ ಬಂದ ಆರೋಪಿಗಳು, ಲಿಫ್ಟ್​ ಕೊಡ್ತೇವೆ ಬಾ ಎಂದು ವಾಹನಕ್ಕೆ ಹತ್ತಿಸಿಕೊಂಡಿದ್ದರು. ವಾಹನದಲ್ಲಿ ಏಳು ಜನರಿದ್ದರು. ಅವರು ಆಕೆಯನ್ನು ಸಲೋಲ್ ಪ್ರದೇಶದಲ್ಲಿರುವ ಪೌಲ್ಟ್ರಿ ಫಾರಂಗೆ ಕರೆದೊಯ್ದರು. ಅಲ್ಲಿ ಗ್ಯಾಂಗ್ ರೇಪ್ ನಡೆಸಿದ ಬಳಿಕ, ಮಕ್ಲಿಯೋದ್ ಗಂಜ್​ನ ಹೋಟೆಲ್​ಗೆ ಕರೆದೊಯ್ದು ಅಲ್ಲಿ ಮತ್ತೊಂದು ಬಾರಿ ರೇಪ್ ಮಾಡಿದ್ದರು.
ಇದನ್ನೂ ಓದಿ:ಲವರ್​ ಅನ್ನು ಮದುವೆ ಆಗೋಕೆ ಅದೇನೆಲ್ಲಾ ಡ್ರಾಮಾ ಮಾಡಿದ್ಳು ಕಿರಾತಕಿ!
ಈ ಘಟನೆಯ ನಂತರ ಮಹಿಳೆಯನ್ನು ಬಿಟ್ಟಿದ್ದರು. ಸಂತ್ರಸ್ತೆ ಮೂರು ಮಕ್ಕಳ ತಾಯಿಯಾಗಿದ್ದು, ಪತಿಯಿಂದ ಬೇರ್ಪಟ್ಟು 5 ವರ್ಷಗಳಿಂದ ಪ್ರತ್ಯೇಕ ವಾಸವಿದ್ದರು. ಈಕೆ ನೀಡಿದ ದೂರಿನ ಪ್ರಕಾರ, ಹೋಟೆಲ್ ಮಾಲೀಕನನ್ನೂ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)
ಕುಡಿತದ ಮತ್ತು ತಂದ ಆಪತ್ತು: ಮಗ ಕೊಟ್ಟ ಏಟಿಗೆ ಪ್ರಾಣವನ್ನೇ ಬಿಟ್ಟ ಅಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
