ಕಾನ್ಪುರ:ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಮದುವೆಯಾದ ಕೇವಲ 10 ದಿನಗಳಲ್ಲೇ ನವವಿವಾಹಿತ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ.
ಕಾನ್ಪುರದ ರೂರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಧುವಿನ ಹೆಸರನ್ನು ಕಾರಣಾಂತರಗಳಿಂದ ಬಹಿರಂಗಪಡಿಸಿಲ್ಲ. ಭೋಗಾನಿಪುರದ ಯುವಕನೊಬ್ಬ ರೂರಾ ಗ್ರಾಮದ ದಲಿತ ಯುವತಿಯನ್ನು ವಿವಾಹವಾಗಿದ್ದ. ಮದುವೆಯಾದ 10 ದಿನಕ್ಕೆ ಯುವತಿಯು ತೀವ್ರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದ ವೇಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮಗು ಜನನದ ವೇಳೆಯೇ ಅಸುನೀಗಿತ್ತು.
ಇದನ್ನೂ ಓದಿ:ಎನ್‌ಇಪಿ ರದ್ದುಗೊಳಿಸಬೇಡಿ: ಸರ್ಕಾರದ ಶಿಕ್ಷಣ ಸುಧಾರಣೆಗಳ ಮಾಜಿ ಸಲಹೆಗಾರ ದೊರೆಸ್ವಾಮಿ ಒತ್ತಾಯ
ಆಗ ಯುವತಿಯ ಅತ್ತೆ ಹಾಗೂ ಗಂಡ ಆಕೆಯನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದಾಗ ಆಕೆ ಎಲ್ಲ ಘಟನೆಯನ್ನು ಬಾಯಿಬಿಟ್ಟಿದ್ದಾಳೆ. ವಾಸ್ತವದಲ್ಲಿ ಆಕೆಯ ಮೇಳೆ ಅರುಣ್​ ಪಾಲ್​ ಹಾಗೂ ವಿನಯ್​ ಪಾಲ್​ ಎಂಬುವರು ಅತ್ಯಾಚಾರವೆಸಗಿ ಕೊಲೆ ಬೆದರಿಕೆ ಹಾಕಿದ್ದರು. ಇದರಿಂದ ಭಯಬೀತಳಾಗಿದ್ದ ಯುವತಿಯು ಇದನ್ನು ಮುಚ್ಚಿಟ್ಟಿದ್ದಳು.
ಆದರೆ ಯುವತಿಯು ಜೂನ್ 6ರಂದು ಅರುಣ್ ಪಾಲ್ ಮತ್ತು ವಿನಯ್ ಪಾಲ್ ವಿರುದ್ಧ ಬಲವಂತವಾಗಿ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ್ದಕ್ಕಾಗಿ ಪೊಲೀಸರಿಗೆ ದೂರು ನೀಡಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಸಾಮೂಹಿಕ ಅತ್ಯಾಚಾರ ಹಾಗೂ ಇತರ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 5 =
Remember me
