ನವದೆಹಲಿ:ಕೈಮೇಲೆ, ಎದೆಮೇಲೆ, ಕುತ್ತಿಗೆಯ ಮೇಲೆ, ಹೊಟ್ಟೆಮೇಲೆ, ಬೆನ್ನಮೇಲೆ ಹೀಗೆ ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ತನ್ನ ಪ್ರಿಯಕರನನ್ನು ಮೆಚ್ಚಿಸಲು ಹಣೆಯ ಮೇಲೆ ಟ್ಯಾಟು ಹಾಕಿಸಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾಳೆ.
ಎನಾ ಸ್ಟ್ಯಾನ್ಸ್‌ಕೊವ್ಸ್ಕಿ ತನ್ನ ಪ್ರಿಯಕರ ಕೆವಿನ್​ ಹೆಸರನ್ನು ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡ ಯುವತಿ. ಈಕೆ ಇನ್‌ಸ್ಟಾಗ್ರಾಮ್​ನ ಕಂಟೆಂಟ್ ಕ್ರಿಯೇಟರ್​ ಆಗಿದ್ದಾಳೆ. ತನ್ನ ಹಣೆಯ ಮೇಲೆ ‘ಕೆವಿನ್’ ಎಂದು ಶಾಯಿಯಿಂದ ಬರೆಸಿಕೊಂಡಿದ್ದಾಳೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿಭಿನ್ನವಾಗಿ ಕಾಮೆಂಟ್​​ ಮಾಡುತ್ತಿದ್ದಾರೆ.
A post shared by Ana Stanskovsky-Content creator (@ana_stanskovsky)
ವಿಡಿಯೋದಲ್ಲಿ ಏನಿದೆ?: ಯುವತಿಯಹಣೆಯ ಮೇಲೆ ಕೆವಿನ್​ ಹೆಸರನ್ನು ಹಚ್ಚೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.  ಹಚ್ಚೆ ಹಾಕಿದ ನಂತರ ಯುವತಿ ಕುಣಿದು ಕುಪ್ಪಳಿಸಿರುವುದು ವಿಡಿಯೋದಲ್ಲಿ ಸರೆಯಾಗಿದೆ.
ಅತ್ಯಂತ ಮೂರ್ಖತನಕ ವಿಡಿಯೋ… ಇದು ನಿಜವಾದ ಇಂಕ್​? ಪ್ರಿಯಕರನನ್ನು ಮೆಚ್ಚಿಸಲು ತಮಾಷೆ ಮಾಡುತ್ತಿದ್ದಾಳೆ. ಇದು ನಕಲಿ ಶಾಯಿ ಅಲ್ಲ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.
ಟೀಕೆಗೆ ಪ್ರತಿಕ್ರಿಯಿಸಿರುವ ಸ್ಟಾನ್ಸ್ಕೊವ್ಸ್ಕಿ ಹಚ್ಚೆ ಹಿಂದಿನ ಕಾರಣವನ್ನು ವಿವರಿಸುವ ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ.ತನ್ನ ಸಂಗಾತಿಯನ್ನು ಪ್ರೀತಿಸುತ್ತೇನೆ. ಹಚ್ಚೆ ಅವನ ಮೇಲಿನ ಪ್ರೀತಿಯನ್ನು ತೋರಿಸುವ ಒಂದು ಮಾರ್ಗವಾಗಿದೆ. ಇದು ನಿಜವಾದ ಟ್ಯಾಟೂ ಎಂದು ಹೇಳಿದ್ದಾಳೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − two =
Remember me
