ಅಹಮದಾಬಾದ್​:ವಿಚಿತ್ರ ಘಟನೆಯೊಂದರಲ್ಲಿ ಕೌಟುಂಬಿಕ ಕಲಹ ಪ್ರಕರಣದಲ್ಲಿ ಪತ್ನಿಯೇ ಪತಿಯ ವಿರುದ್ಧ ದೂರು ನೀಡಿ ಬಳಿಕ ಆತನಿಗೆ ಜಾಮೀನು ಕೊಡಿಸಿರುವ ಘಟನೆ ಗುಜರಾತಿನ ಮೆಹಸಾನಾ ಜಿಲ್ಲೆಯಲ್ಲಿ ನಡೆದಿದೆ. ಪ್ರೇಮ್​ಚಂದ್​ ಮಾಲಿ ಮತ್ತು ಅವರ ಪತ್ನಿ ಸೋನು ಈ ರೀತಿಯ ವಿಚಿತ್ರ ವರ್ತನೆಗೆ ಹೆಸರುವಾಸಿಯಾಗಿರುವ ದಂಪತಿ.
ಪ್ರೇಮ್​ಚಂದ್​ ಮಾಲಿ ಮತ್ತು ಸೋನು ದಂಪತಿಗಳು 2001ರಲ್ಲಿ ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ 13 ವರ್ಷಗಳ ಬಳಿಕ ದಾಂಪತ್ಯದಲ್ಲಿ ಕಲಹ ಉಂಟಾಗಿ ಪತ್ನಿಗೆ ತಿಂಗಳು ಎರಡು ಸಾವಿರ ರೂಪಾಯಿ ಮಾಸಾಶಾನ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು.
ವೃತ್ತಿಯಲ್ಲಿ ದಿನಗೂಲಿ ನೌಕರನಾಗಿರುವ ಪ್ರೇಮ್​ಚಂದ್​ ನ್ಯಾಯಾಲಯದ ಆದೇಶವನ್ನು ಪಾಲಿಸುವಲ್ಲಿ ವಿಫಲರಾಗಿ ಜೈಲು ಸೇರಿದ್ದರು. ತನ್ನ ಪತಿ ಜೈಲಿನಲ್ಲಿರುವ ವಿಚಾರ ಅರಿತ ಪತ್ನಿ ನ್ಯಾಯಾಲಯಕ್ಕೆ ಅಲೆದಾಡಿ ಆತನಿಗೆ ಜಾಮೀನು ಕೊಡಿಸಿದ್ದಾಳೆ. ಗಂಡ-ಹೆಂಡತಿ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಸಹ ಇಬ್ಬರ ನಡುವಿನ ಸಾಮರಸ್ಯ ಮಾತ್ರ ಕದಡಿರಲಿಲ್ಲ.
ಇದನ್ನೂ ಓದಿ:ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿ ಮುಖಕ್ಕೆ ಆ್ಯಸಿಡ್​ ಎರಚಿದ ದುರುಳ
ಇದೇ ರೀತಿ 2016 ರಿಂದ 2020ರವರೆಗೂ ಪ್ರೇಮ್​ಚಂದ್​ ನ್ಯಾಯಾಲಯದ ಆದೇಶವನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆಂಬ ಕಾರಣಕ್ಕೆ ಅವರನ್ನು ಜೈಲಿಗೆ ಹಾಕಲಾಗಿತ್ತು. ಆದರೆ, ಪ್ರತಿ ಬಾರಿಯೂ ಅತನ ಪತ್ನಿ ನ್ಯಾಯಾಲಯದ ಮೊರೆ ಹೋಗಿ ಜಾಮೀನು ಕೊಡಿಸುತ್ತಿದ್ದಳು. ಇದೇ ರೀತಿ ಜುಲೈ 4ರಂದು ಗಂಡ-ಹೆಂಡತಿ ನಡುವೆ ವಿಚಾರಕ್ಕೆ ಒಂದಕ್ಕೆ ಜಗಳ ಶುರುವಾಗಿದ್ದು, ಆಗಲೂ ಸಹ ಇದೇ ರೀತಿ ಮಾಡಲಾಗಿದೆ.
ಈ ರೀತಿ 10 ವರ್ಷಗಳಲ್ಲಿ ಏಳು ಬಾರಿ ಪ್ರೇಮ್​ಚಂದ್​ಗೆ ಆತನ ಪತ್ನಿ ದೂರು ನೀಡಿ ಜಾಮೀನು ಕೊಡಿಸಿದ್ದಾಳೆ. ಇದನ್ನು ಕಂಡು ಬೇಸತ್ತಿದ್ದ ಪತಿ ಪ್ರೇಮ್​ಚಂದ್​ ಪತ್ನಿ ಹಾಗೂ ಪುತ್ರನ ವಿರುದ್ಧ ಹಲ್ಲೆ ಹಾಗೂ ಕೊಲೆ ಯತ್ನ ದೂರು ದಾಖಲಿಸಿ ತನ್ನ ತಾಯಿಯ ಜೊತೆ ವಾಸಿಸುವುದಾಗಿ ಹೇಳಿ ಹೊರಟು ಹೋಗಿದ್ದಾರೆ. ಇದೀಗ ಈ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಇದನ್ನು ಕಂಡು ಜನ ಪರ-ವಿರೋಧದ ಕುರಿತು ಮಾತನಾಡುತ್ತಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine − two =
Remember me
