ನವದೆಹಲಿ:ಯಾರ್ಯಾರೋ ಯಾವ್ಯಾವುದೋ ತಪ್ಪಿಗೆ ದಂಡ ತೆರಬೇಕಾಗುತ್ತದೆ. ಆದರೆ ಇಲ್ಲೊಬ್ಬ ಮಾಡಿದ ತಪ್ಪಿಗೆ ಬರೋಬ್ಬರಿ 90 ಲಕ್ಷ ರೂ. ಕಳೆದುಕೊಳ್ಳುವಂತಾಗಿದೆ. ಅಷ್ಟಕ್ಕೂ ಆತ ಮಾಡಿದ್ದೇನೆಂದರೆ ಯುವತಿಯೊಬ್ಬಳ ನಿತಂಬದ ಮೇಲೆ ಸ್ಕೇಲ್​ನಿಂದ ಹೊಡೆದಿದ್ದು.
ಐರ್ಲೆಂಡ್​ನ ಕಂಪನಿಯೊಂದರಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಮಹಿಳಾ ಉದ್ಯೋಗಿಯೊಬ್ಬಳು ತನ್ನ ಬಾಸ್ ವಿರುದ್ಧವೇ ಆರೋಪ ಹೊರಿಸಿ, ದಂಡ ತೆರುವಂತೆ ಮಾಡಿದ್ದಾಳೆ. ಕಚೇರಿಯಲ್ಲಿ ಬಾಸ್​ ನನ್ನ ನಿತಂಬದ ಮೇಲೆ ಸ್ಕೇಲ್​ನಿಂದ ಹೊಡೆದಿದ್ದು, ಅದರಿಂದ ನನಗೆ ತೀವ್ರ ಮುಜುಗರವಾಗಿದೆ. ಮಾತ್ರವಲ್ಲ, ಲೈಂಗಿಕವಾಗಿ ಕಿರುಕುಳಕ್ಕೆ ಒಳಗಾದಂತಾಗಿದೆ ಎಂದು ಆಕೆ ಆರೋಪಿಸಿದ್ದಳು.
ಈ ಬಗ್ಗೆ ಮೇಲಿನವರಿಗೆ ತಿಳಿಸಿದರೆ, ತನ್ನ ಉಡುಗೆ-ವರ್ತನೆಯೇ ಪ್ರಚೋದಕ ಎಂಬ ಆರೋಪ ಹೊರಿಸಲಾಗಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ನಂತರ ಈಕೆ ಈ ವಿಷಯವನ್ನು ನಾರ್ಥರ್ನ್ ಐರ್ಲೆಂಡ್ ಇಕ್ವ್ಯಾಲಿಟಿ ಕಮಿಷನ್ ಮುಂದೆ ಕೊಂಡೊಯ್ದಿದ್ದು, ಅಲ್ಲಿ ಆಕೆಗೆ ಪರಿಹಾರವಾಗಿ 90 ಲಕ್ಷ ರೂ. ನೀಡುವಂತೆ ಬಾಸ್​ಗೆ ಕಮಿಷನ್ ಸೂಚಿಸಿದ್ದನ್ನು ಅಲ್ಲಿನ ಮಾಧ್ಯಮ ವರದಿ ಮಾಡಿದೆ. –ಏಜೆನ್ಸೀಸ್
ಸಂಬಂಧಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದು ಪೀಸ್​ಪೀಸ್ ಮಾಡಿದ; ಒಂದೊಂದು ತುಂಡನ್ನು ಒಂದೊಂದು ಕಡೆ ಎಸೆದ!

ಸಾಲ ತೀರಿಸಿಲ್ಲ ಅಂತ ಆಟೋಚಾಲಕನ ಪತ್ನಿ ಮೇಲೆ ಅತ್ಯಾಚಾರ; ದೇವಸ್ಥಾನಕ್ಕೆ ಕರೆದೊಯ್ದು ಹಣೆಗೆ ಸಿಂಧೂರ ಹಚ್ಚಿ ಹೆಂಡ್ತಿ ಎಂದ!

ಗಡಿ’ಬಿಡಿ’ಯಲ್ಲಿ ಕಾವೇರಲಿದೆ ಚಳಿಗಾಲದ ಅಧಿವೇಶನ; ನಡೆಯಲಿದ್ಯಾ ಮಹಾಮೇಳದ ‘ಧೈರ್ಯ’ ಪ್ರದರ್ಶನ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + twelve =
Remember me
