ಬಡ್ಜ್:ವಯಸ್ಸಾಗುತ್ತಿದ್ದಂತೆ ಕೂದಲು-ಹಲ್ಲು ಉದುರಿಹೋಗುವುದು ಸರ್ವೇಸಾಮಾನ್ಯ. ಮಾತ್ರವಲ್ಲ, ಹಾಗೇ ಹೋದ ಕೂದಲು-ಹಲ್ಲು ಮರಳಿ ಬರುವುದು ಅತ್ಯಪರೂಪ ಎಂದರೂ ಸರಿಯೇ. ಅಂಥ ಒಂದು ಅತ್ಯಪರೂಪದ ವಿದ್ಯಮಾನಕ್ಕೆ ಶತಾಯುಷಿ ಮಹಿಳೆಯೊಬ್ಬರು ನಿದರ್ಶನವಾಗಿದ್ದಾರೆ.
ಅಂದರೆ ಇಲ್ಲೊಬ್ಬರು 110 ವರ್ಷದ ಮಹಿಳೆಗೆ ಹೊಸದಾಗಿ ಕೂದಲು ಬಂದಿದೆ. ಮಾತ್ರವಲ್ಲ, ಹೊಸದಾಗಿ ಹಲ್ಲು ಕೂಡ ಬಂದಿದೆ. ಇವೆರಡರ ಮರುಹುಟ್ಟನ್ನು ಈ ಮಹಿಳೆ ಮತ್ತು ಮನೆಯವರು ಸಂಭ್ರಮಿಸಿದ್ದಾರೆ. ಪಶ್ಚಿಮಬಂಗಾಳದ ಬಡ್ಜ್ ಎಂಬಲ್ಲಿ ಇಂಥದ್ದೊಂದು ಬೆಳವಣಿಗೆ ನಡೆದಿದೆ.
ಸಖಿಬಾಲಾ ಮೊಂಡಲ್ ಎಂಬಾಕೆ ಈ ವಿಶೇಷಕ್ಕೆ ಸಾಕ್ಷಿಯಾಗಿದ್ದಾರೆ. ಹೊಸ ಕೇಶ, ಹೊಸ ದಂತದ ಹುಟ್ಟನ್ನು ಸಖಿಬಾಲಾ ಮೊಂಡಲ್ ತನ್ನ 80 ವರ್ಷದ ಪುತ್ರಿ, ಮೊಮ್ಮಕ್ಕಳೊಂದಿಗೆ ಆಚರಣೆ ಮಾಡಿಕೊಂಡಿದ್ದಾರೆ. ತೀರಾ ವಯಸ್ಸಾದ ಮೇಲೆ ಹೀಗೆ ಹೊಸದಾಗಿ ಕೇಶ-ದಂತ ಬರುವುದು ಅತ್ಯಪರೂಪದ ಸಂಗತಿ ಎಂದು ವೈದ್ಯರೂ ಅಭಿಪ್ರಾಯಪಟ್ಟಿದ್ದಾರೆ.
ತನ್ನ ನೆಚ್ಚಿನ ನಾಯಕ ಸಿಎಂ ಆಗಲೆಂದು 25 ವರ್ಷದಿಂದ ಗಡ್ಡ ಬಿಟ್ಟ ಅಭಿಮಾನಿ!

ಸಿನಿಮಾ ಹೀರೋಯಿನ್​ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − 3 =
Remember me
