ನವದೆಹಲಿ:ಮೊನ್ನೆಮೊನ್ನೆಯಷ್ಟೇ ಅಲ್ಹಾನನ್ನು ಮೆಚ್ಚಿಸಲು ಆರು ವರ್ಷದ ಮಗನನ್ನು ತಾಯಿಯೊಬ್ಬಳು ಭೀಕರವಾಗಿ ಕೊಂದಿರುವುದು ವರದಿಯಾಗಿತ್ತು. ಇದೀಗ ಮಹಿಳೆಯೊಬ್ಬಳು ಶಿವನನ್ನು ಮೆಚ್ಚಿಸುವ ಸಲುವಾಗಿ ಮನೆ ಮುಂದೆಯೇ ಜೀವಂತ ಸಮಾಧಿಯಾಗಲು ಯತ್ನಿಸಿದ ಪ್ರಕರಣವೊಂದು ವರದಿಯಾಗಿದೆ.
ಉತ್ತರಪ್ರದೇಶದ ಘಟಮ್​ಪುರದ ಸಜೇಟಿ ಎಂಬಲ್ಲಿನ 50 ವರ್ಷದ ಮಹಿಳೆ ಗೋಮತಿ ದೇವಿ ಎಂಬಾಕೆ ಇಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದರು. ಈಕೆಯ ಪತಿ ರಾಮ್​ ಸಜೀವನ್​ ಶಿವಭಕ್ತನಾಗಿದ್ದು, ಕನಸಿನಲ್ಲಿ ತನಗೆ ಶಿವ ಪ್ರತ್ಯಕ್ಷನಾಗಿ ದರ್ಶನ ನೀಡಿದ್ದಾನೆ ಎಂದು ಬುಧವಾರ ಬೆಳಗ್ಗೆ ಗೋಮತಿ ದೇವಿ ಕೆಲವರಲ್ಲಿ ಹೇಳಿಕೊಂಡಿದ್ದರು. ಮಾರನೆಯ ದಿನ ಎಂದರೆ ಇಂದು ಬೆಳಗ್ಗೆ ತನ್ನ ಮನೆ ಮುಂದೆ ಗುಂಡಿ ತೆಗೆಸಿದ್ದ ಗೋಮತಿ, ತನ್ನನ್ನು ಜೀವಂತ ಹೂತು ಬಿಡುವಂತೆ ಮನೆಯವರಲ್ಲಿ ಕೋರಿಕೊಂಡಿದ್ದರು.
ಇದನ್ನೂ ಓದಿ:ಮೆಸೇಜ್​ ಮಾಡುವಾಗ ಹುಷಾರು.. ಆ ಒಂದು ಪದ ಬಳಸಿದ್ದಕ್ಕೆ ಆಕೆಗೆ 2 ವರ್ಷ ಜೈಲು!
ಮನೆಯವರು ಭಜನ್​-ಕೀರ್ತನ್ ಮೂಲಕ ಈಕೆಯನ್ನು ಸಮಾಧಿ ಮಾಡಲು ಮುಂದಾಗಿದ್ದರು. ಸ್ಥಳೀಯರನೇಕರು ಕೂಡ ಇದಕ್ಕೆ ಕೈಜೋಡಿಸಿದ್ದರು. ಗುಂಡಿಯಲ್ಲಿ ಮಂಚ ಇಟ್ಟು ಅದರ ಮೇಲೆ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತ ಗೋಮತಿ ಮೇಲೆ ಜನರು ಭಜನ್​-ಕೀರ್ತನ್ ಜತೆಗೆ ಹೂವಿನ ದಳಗಳನ್ನು ಸುರುವಿ ಮಣ್ಣು ಹಾಕಿ ಸಮಾಧಿ ಮಾಡಲು ಮುಂದಾಗಿದ್ದರು. ಇದನ್ನು ನೋಡಿ ಆಕ್ಷೇಪ ವ್ಯಕ್ತಪಡಿಸಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಗೋಮತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ವಲ್ಪ ಅಸ್ವಸ್ಥಗೊಂಡಿರುವ ಗೋಮತಿಗೆ ಚಿಕಿತ್ಸೆ ನಡೆಸಲಾಗುತ್ತಿದ್ದು, ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಅಲ್ಹಾನನ್ನು ಮೆಚ್ಚಿಸಲು ಆರು ವರ್ಷದ ಸ್ವಂತ ಮಗುವನ್ನು ಭೀಕರವಾಗಿ ಕೊಂದ ಗರ್ಭಿಣಿ ಶಿಕ್ಷಕಿ!

ಈ ಥರ ಸಾಯಿಸೋ ಪ್ರಯತ್ನ ಇದುವರೆಗೂ ಯಾರೂ ಮಾಡಿರ್ಲಿಲ್ಲ! ಖತರ್ನಾಕ್​ ಸೇಲ್ಸ್​ಮ್ಯಾನ್​ ಕೊನೆಗೂ ಫೇಲಾದ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − fourteen =
Remember me
