ಚಂಡೀಗಢ:ಗಂಡನೊಂದಿಗೆ ಮನಸ್ತಾಪ ಉಂಟಾಗಿ ಆತನಿಂದ ದೂರಾಗಿ ಬೇರೊಬ್ಬ ಗಂಡಸಿನೊಂದಿಗೆ ಲೀವ್​ ಇನ್​ ರಿಲೇಷನ್​ಶಿಪ್​ ಆರಂಭಿಸಿದ ಮಹಿಳೆ ಇದೀಗ ಪೇಚಿಗೆ ಸಿಲುಕಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ. ಮಹಿಳೆಯ ಮಗಳ ಮೇಲೆ ತಾಯಿಯ ಪ್ರಿಯತಮನೇ ಅತ್ಯಾಚಾರವೆಸಗಿರುವುದಾಗಿ ದೂರು ದಾಖಲಾಗಿದೆ.
ಆ ಮಹಿಳೆಗೆ 2000 ಇಸವಿಯಲ್ಲಿ ಮದುವೆಯಾಗಿತ್ತು. ಇದೀಗ 14 ವರ್ಷದ ಮಗಳೂ ಇದ್ದಾಳೆ. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಗಂಡ ಹೆಂಡತಿ ನಡುವೆ ಜಗಳ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಆಕೆ ಗಂಡನನ್ನು ಬಿಟ್ಟು ಮಗಳೊಂದಿಗೆ ಪ್ರತ್ಯೇಕ ಜೀವನ ನಡೆಸುತ್ತಿದ್ದಳು. ಆ ಮಹಿಳೆಗೆ ಇತ್ತೀಚೆಗೆ ಲುಧಿಯಾನಾ ಮೂಲದ ರೈತ ಯುವಕನೊಬ್ಬನ ಪರಿಚಯವಾಗಿದೆ. ಕೇವಲ 27 ವರ್ಷದವನಾಗಿರುವ ಆತನ ಮೇಲೆ ಮಹಿಳೆಗೆ ಪ್ರೀತಿ ಹುಟ್ಟಿದೆ. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಲಿವ್​ ಇನ್​ ರಿಲೇಷನ್​ಶಿಪ್​ ಆರಂಭಿಸಿದ್ದಾರೆ.
ಆದರೆ ಇತ್ತೀಚೆಗೆ ಒಂದು ದಿನ ಆ ಯುವಕ ತನ್ನ ನಿಜಬಣ್ಣ ತೋರಿಸಿದ್ದಾನೆ. ಮಹಿಳೆ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆಕೆಯ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಮನೆಗೆ ಬಂದ ಮಹಿಳೆಗೆ ಈ ವಿಚಾರ ತಿಳಿದುಬಂದಿದ್ದು ಆತನೊಂದಿಗೆ ಜಗಳ ಆರಂಭಿಸಿದ್ದಾಳೆ. ಆಗ ಮಹಿಳೆಗೆ ಮನಸೋಇಚ್ಛೆ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾನೆ.
ಈ ವಿಚಾರವಾಗಿ ಮಹಿಳೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. ಇದೀಗ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. (ಏಜೆನ್ಸೀಸ್​)
ರಾಜಧಾನಿಗೆ ಲಾಕ್​ಡೌನ್​ ಶಾಕ್​! ಏನಿರತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ​ ಮಾಹಿತಿ

ಆನ್​ಲೈನ್​ ತರಗತಿಯನ್ನೇ ದುಡಿಮೆಯ ಮೂಲವಾಗಿಸಿಕೊಂಡ ಕಳ್ಳ! ಅಡ್ಡದಾರಿ ಹಿಡಿದು ಸಿಕ್ಕಿಬಿದ್ದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
