ನವದೆಹಲಿ:ಜಿರಳೆ ಕಂಡರೆ ಬೆಚ್ಚಿ ಬೀಳುವ ಯುವತಿಯರು ಹಲವರಿದ್ದಾರೆ. ಆದರೆ ಇಲ್ಲೊಬ್ಬಳು ಗಟ್ಟಿಗಿತ್ತಿ ಹಾವುಗಳೊಂದಿಗೇ ವಿಮಾನದಲ್ಲಿ ಪ್ರಯಾಣ ಮಾಡಿದ್ದಾಳೆ. ಅದೂ ಒಂದೆರಡಲ್ಲ, ಬರೋಬ್ಬರಿ 22 ಹಾವುಗಳು!
ಇದನ್ನೂ ಓದಿ:ಹಾವುಗಳ ರಾಶಿ: ಇಬ್ಬರಿಗೆ ಕಡಿತ, ಕಂಗಾಲಾದ ಕಾರ್ಮಿಕರು!
ಹೀಗೆ 22 ಹಾವುಗಳೊಂದಿಗೆ ವಿಮಾನದಲ್ಲಿ ಬಂದಿಳಿದ ಮಹಿಳೆಯೊಬ್ಬಳು ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈಕೆ ಕೌಲಲಾಂಪುರದಿಂದ ನಿನ್ನೆ ವಿಮಾನದಲ್ಲಿ ಬಂದು ಚೆನ್ನೈ ಏರ್​ಪೋರ್ಟ್​ನಲ್ಲಿ ಇಳಿದಿದ್ದಳು. ಅನುಮಾನದ ಮೇರೆಗೆ ಭದ್ರತಾ ಸಿಬ್ಬಂದಿ ಈಕೆಯನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದರು.
ಇದನ್ನೂ ಓದಿ:ದ್ವಿತೀಯ ಪಿಯುಸಿ ಉತ್ತರಪತ್ರಿಕೆಗಳ ಸ್ಕ್ಯಾನ್ ಪ್ರತಿ ಡೌನ್​ಲೋಡ್​ಗೆ ಇಂದಿನಿಂದಲೇ ಅವಕಾಶ
ಕಸ್ಟಮ್ಸ್ ಅಧಿಕಾರಿಗಳು ಈಕೆಯನ್ನು ತಪಾಸಣೆ ಮಾಡಿದ ಬಳಿಕ ಈಕೆಯ ಚೆಕ್​​ಇನ್ ಬ್ಯಾಗ್ ಪರಿಶೀಲನೆ ನಡೆಸಿದಾಗ ಅವುಗಳಲ್ಲಿ ವಿವಿಧ ಪ್ರಭೇದದ 22 ಹಾವುಗಳು, ಒಂದು ಗೋಸುಂಬೆ ಇರುವುದು ಕಂಡುಬಂದಿತ್ತು. ಕಸ್ಟಮ್ಸ್ ಆ್ಯಕ್ಟ್ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಈಕೆಯನ್ನು ಇಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಸಹೋದರಿಯರಿಬ್ಬರ ಸಾವು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 18 =
Remember me
