ಕೋಲ್ಕತ:ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಉದ್ರಿಕ್ತ ಮಹಿಳೆಯೊಬ್ಬಳು ಮೀನು ಕತ್ತರಿಸುವ ಚಾಕುವಿನಿಂದ ಪತಿಯ ತಲೆಗೆ ಹಲ್ಲೆ ಮಾಡಿದಲ್ಲದೆ, ಆತನ ಜನನಾಂಗವನ್ನೇ ಕತ್ತರಿಸಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ
ಘಟನೆಯು ಪಂಚ್ಲಾ ಪೊಲೀಸ್​ ಠಾಣಾ ವ್ಯಾಪ್ತಿಯ ಮಲಿಪುಕುರ್ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಮೊಹ್ಸಿನ್​ ಮಲ್ಲಿಕ್​ ಎಂದು ಗುರುತಿಸಲಾಗಿದ್ದು, ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮೃತನ ಪತ್ನಿ ಮನಿರಾ ಎಂಬಾಕೆಯನ್ನು ಬಂಧಿಸಲಾಗಿದೆ. ಹಲ್ಲೆ ಮಾಡಲು ಬಳಸಿದ ಚಾಕುವನ್ನು ಸಹ ಆರೋಪಿಯಿಂದ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಕೌನ್ಸಿಲ್​ ಸಭೆ ಮಧ್ಯೆಯೇ ಸೆಕ್ಸ್​ನಲ್ಲಿ ಬಿಜಿಯಾದ ದಂಪತಿ: ಗೊತ್ತಿದ್ರೂ ಮುಂದುವರಿದ ಚರ್ಚೆ, ವೈರಲ್​ ಆಯ್ತು ವಿಡಿಯೋ!​ಕೊಲೆಗೆ ಕೌಟಂಬಿಕ ಕಾರಣವೆಂದು ಶಂಕಿಸಲಾಗಿದ್ದು, ಆರೋಪಿ ಮನಿರಾಳ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಒಬ್ಬ ಮಗ ಪೊಲೀಸರೊಂದಿಗೆ ಮಾತನಾಡಿದ್ದು, ಭಾನುವಾರ ಬೆಳಗ್ಗೆ ಎದ್ದೆವು. ಆವಾಗ ನಮ್ಮ ತಾಯಿ ಬೆಡ್​ರೂಮ್​ಗೆ ಹೋಗಿ ನೋಡಿ ನಾನೇನು ಮಾಡಿದ್ದೇನೆ ಎಂದು ಗೊತ್ತಾಗುತ್ತದೆ ಎಂದರು. ಹೋಗಿ ನೋಡುವಷ್ಟರಲ್ಲಿ ನಮ್ಮ ತಂದೆಯ ದೇಹ ಬ್ಲಾಂಕೆಟ್​ನಲ್ಲಿ ಸುತ್ತಿ ನೆಲದ ಮೇಲೆ ಇಡಲಾಗಿತ್ತು. ಸ್ಥಳದಲ್ಲಿ ತುಂಬಾ ರಕ್ತ ಹರಿದಿತ್ತು ಎಂದಿದ್ದಾರೆ.
ಮನಿರಾಗೆ ಅನೇಕ ಬಾರಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗಿತ್ತು. ಆಲ್ಲದೆ, ಸಾಕಷ್ಟು ಬಾರಿ ದಂಪತಿ ನಡುವೆ ಜಗಳ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದೇವೆ ಎನ್ನುತ್ತಾರೆ ಪೊಲೀಸರು.(ಏಜೆನ್ಸೀಸ್​)
ಇದನ್ನೂ ಓದಿ:ವರದಕ್ಷಿಣೆ ಕಿರುಕುಳದಿಂದ ನೊಂದ ಮಹಿಳೆಗೆ ಅನುಚಿತ ಸಂದೇಶ, ವಿಡಿಯೋ ಕಳಿಸಿದ ಎಸ್​ಐ ಅಮಾನತು
ನೀವೂ ಬಳಸಬಹುದೇ ಇಂಥ ಸ್ಮಾರ್ಟ್​​ಫೋನ್ ಅನ್​ಲಾಕ್ ಪ್ಯಾಟರ್ನ್​​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 12 =
Remember me
