ಭದ್ರಕ್​:ಜಾತ್ರೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಅಶ್ಲೀಲವಾಗಿ ಡಾನ್ಸ್​ ಮಾಡುತ್ತಿದ್ದ ಐಟಂ ಡಾನ್ಸರ್​ ಮೇಲೆ ಮಹಿಳೆಯೊಬ್ಬರು ಶೂ ಎಸೆದಿರುವ ಘಟನೆ ಒಡಿಶಾದ ಭದ್ರಕ್​ ಜಿಲ್ಲೆಯ ಚರಂಪಾ ಏರಿಯಾದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ವರದಿಗಳ ಪ್ರಕಾರ ಕಾಳಿ ದೇವಿಯ ಹಬ್ಬದ ಹಿನ್ನೆಲೆಯಲ್ಲಿ ಚರಂಪಾ ಏರಿಯಾದಲ್ಲಿ ಮೂರು ದಿನಗಳ ಕಾಲ ರಾಜನಂದಿನಿ ಜಾತ್ರೆ ಹಮ್ಮಿಕೊಳ್ಳಲಾಗಿತ್ತು. ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ರಾಣಿ ಹೆಸರಿನ ಐಟಂ ಡಾನ್ಸರ್​ ಒಡಿಶಾದ ಐಟಂ ಹಾಡೊಂದಕ್ಕೆ ವೇದಿಕೆ ಮೇಲೆ ಡಾನ್ಸ್​ ಮಾಡುತ್ತಿದ್ದರು. ತುಂಬಾ ಅಶ್ಲೀಲವಾಗಿ ಡಾನ್ಸ್​ ಮಾಡುತ್ತಿದ್ದರಿಂದ ಆಕ್ರೋಶಗೊಂಡ ಮಹಿಳೆಯೊಬ್ಬರು, ತಕ್ಷಣ ತಮ್ಮ ಕಾಲಿನಲ್ಲಿದ್ದ ಶೂ ತೆಗೆದುಕೊಂಡು ವೇದಿಕೆ ಮೇಲಿದ್ದ ಡಾನ್ಸರ್​ ಕಡೆಗೆ ತೂರಿದರು.
ಶೂ ತೂರಿದ್ದಲ್ಲದೆ, ವೇದಿಕೆಗೆ ಹತ್ತಿ ಅಶ್ಲೀಲ ಪ್ರದರ್ಶನದ ವಿರುದ್ಧ ಕೂಗಾಡಿದ್ದಾಳೆ ಎಂದು ವರದಿಯಾಗಿದೆ. ಸಂಘಟಕರು ಆಕೆಯ ಬಳಿ ತೆರಳಿ ಸಮಾಧಾನಪಡಿಸಲು ಯತ್ನಿಸಿದರಾದರೂ ಆಕೆ ಕೆಲಕಾಲ ಪ್ರತಿಭಟನೆಗೆ ಮುಂದಾದರು. ಕೆಲ ಕಾಲ ಕಾರ್ಯಕ್ರಮವೇ ಸ್ಥಗಿತಗೊಂಡಿತ್ತು. ಬಳಿಕ ಮತ್ತೆ ಕಾರ್ಯಕ್ರಮ ಆರಂಭವಾಯಿತು ಎಂದು ತಿಳಿದುಬಂದಿದೆ.(ಏಜೆನ್ಸೀಸ್​​)
(ವಿಡಿಯೋ ಕೃಪೆ:ಕೆನ್ಯೂಸ್​ ಒಡಿಶಾ)

6 ವರ್ಷದ ಹಿಂದಿನ ನಕಲಿ ಮಿ. ಬೀನ್ ಪ್ರಕರಣ: ಟಿ20 ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಸೇಡು ತೀರಿಸಿಕೊಂಡ ಜಿಂಬಾಬ್ವೆ!

ಅಪ್ಪುವಿನ ಬಹುದೊಡ್ಡ ಕನಸನ್ನು ಬಹಿರಂಗಪಡಿಸುತ್ತಲೇ ಭಾವುಕರಾದ ನಿರ್ದೇಶಕ ಚೇತನ್​ ಕುಮಾರ್​

ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ: ಕಂಠೀರವ ಸ್ಟುಡಿಯೋ ಬಳಿ ಬಿಗಿ ಬಂದೋಬಸ್ತ್, ಇಡೀ​ ದಿನ ಅನ್ನಸಂತರ್ಪಣೆ, ವಿಶೇಷ ಕಾರ್ಯಕ್ರಮಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 10 =
Remember me
