ನಾಸಿಕ್:ಅಪರಿಚಿತರಿಂದ ಲಿಫ್ಟ್​ ಪಡೆದ ಮಹಿಳೆ ಹದಿಮೂರು ಗ್ರಾಮ್​ ಚಿನ್ನದ ಸರವನ್ನು ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್​ನಲ್ಲಿ ನಡೆದಿದೆ.ಸುನೀತಾ ಶಿವದಾಸ್ ಎಂಬಾಕೆಯ ಚಿನ್ನದ ಸರವು ಕಳ್ಳತನವಾಗಿದ್ದು, ಈಕೆ ತನ್ನ ಸಹೋದರನ ವಾರ್ಷಿಕೋತ್ಸವಕ್ಕೆ ಸಂಗಮ್ನೇರ್‌ನಿಂದ ಹೋಗುತ್ತಿದ್ದಳು. ಈ ವೇಳೆ ನಂದೂರಶಿಂಗೋಟೆಯಲ್ಲಿ ಇಳಿದುಕೊಂಡು ತನ್ನ ಮುಂದಿನ ಪ್ರಯಾಣಕ್ಕಾಗಿ ಖಾಸಗಿ ವಾಹನಗಳಿಗಾಗಿ ಕಾಯುತ್ತಿದ್ದಳು. ಈ ವೇಳೆ ಚಾಕಲೇಟ್ ಬಣ್ಣದ ಕಾರು ಚಾಲಕನೊಬ್ಬ ಆಕೆಗೆ ಲಿಫ್ಟ್ ಕೊಡುವ ನೆಪದಲ್ಲಿ ಕಾರನ್ನು ಹತ್ತಿಸಿಕೊಂಡಿದ್ದು, ಹಿಂಬದಿಯಲ್ಲಿ ಓರ್ವ ಮಹಿಳೆ ಕೂಡ ಕುಳಿತಿದ್ದಳು.ಇದನ್ನೂ ಓದಿ:ಜ್ವರದಿಂದ ಬಳಲುತ್ತಿರುವ ಮಗುವಿಗೆ ರೇಬೀಸ್ ಲಸಿಕೆ ನೀಡಿದ ನರ್ಸ್: ಮುಂದೆ ನಡೆದಿದ್ದಿಷ್ಟು..ಪ್ರಯಾಣದ ವೇಳೆ ಸುನೀತಾ ಕಾರಿನ ಬಾಗಿಲಿನ ಗಾಜನ್ನು ಕೆಳಗಿಳಿಸಿದ್ದಳು. ಈ ವೇಳೆ ಹಿಂದೆ ಕುಳಿತಿದ್ದ ಮಹಿಳೆ ಗಾಜನ್ನು ಮುಚ್ಚುವಂತೆ ಹೇಳಿ, ಸುನೀತಾ ಕುಳಿತಿದ್ದ ಸೀಟಿನ ಬಳಿ ಕೈ ಹಾಕಿ ತಾನೇ ಕಿಟಕಿ ಮುಚ್ಚಿದ್ದಾಳೆ. ಈ ನಡುವೆಯೇ ಕಾರಿನಲ್ಲಿದ್ದ ಮಹಿಳೆ ಸುನೀತಾಳ ಕತ್ತಿನಲ್ಲಿದ್ದ ಹದಿಮೂರು ಗ್ರಾಂ ತೂಕದ ಸರವನ್ನು ಗಾಜನ್ನು ಇಳಿಸುವ ನೆಪದಲ್ಲಿ ಕೈ ಹಾಕಿ ತೆಗೆದಿದ್ದಾಳೆ.ಕೊನೆಗೆ ಸುನೀತಾ ಕಾರಿನಿಂದ ಇಳಿದ ಸ್ವಲ್ಪ ಸಮಯದ ನಂತರ ಸ್ವಲ್ಪ ದೂರ ಹೋದ ಬಳಿಕ ತನ್ನ ಸರ ಕಳ್ಳತನವಾಗಿರುವುದು ಅರಿವಿಗೆ ಬಂದಿದೆ. ಆದರೆ, ಅಷ್ಟರಲ್ಲಾಗಲೇ ಕಾರು ಹೋಗಿತ್ತು. ಬಳಿಕ ಆಕೆ ವಾವಿ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕ ಹಾಗೂ ಕಾರಿನಲ್ಲಿದ್ದ ಅಪರಿಚಿತ ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾಳೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − two =
Remember me
