ಭೋಪಾಲ/ಬೇತುಲ್​: ಹಣ ಹೂಡಿಕೆ ವಿಚಾರಕ್ಕೆ ಮನಸ್ತಾಪ ಏರ್ಪಟ್ಟ ಕಾರಣ ಮಹಿಳೆಯೊಬ್ಬಳು ಜಿಲ್ಲಾ ನ್ಯಾಯಾಧೀಶರೊಬ್ಬರ ಕುಟುಂಬಕ್ಕೆ ವಿಷಪ್ರಾಶನ ಮಾಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಜಡ್ಜ್ ಮತ್ತು ಅವರ ಪುತ್ರ ಮೃತರಾಗಿದ್ದು, ಇನ್ನೊಬ್ಬ ಪುತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಮಹಿಳೆ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಛಿಂದ್ವಾರಾದ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಮಹೇಂದ್ರ ತ್ರಿಪಾಠಿ(56), ಅವರ ಪುತ್ರ ಅಭ್ಯಂಜರಾಜ್​ ತ್ರಿಪಾಠಿ(33) ಎಂದು ಗುರುತಿಸಲಾಗಿದೆ. ಇನ್ನೋರ್ವ ಪುತ್ರ ಆಶೀಶ್ ರಾಜ್​(25) ಆರೋಗ್ಯ ಸ್ಥಿತಿ ಸುಧಾರಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮಹೇಂದ್ರ ತ್ರಿಪಾಠಿ ಮತ್ತು ಎನ್​ಜಿಒ ನಡೆಸುತ್ತಿದ್ದ ಸಂಧ್ಯಾ ಸಿಂಗ್(45) ಮಧ್ಯೆ ಸ್ನೇಹವಿತ್ತು. ತ್ರಿಪಾಠಿ ಜಡ್ಜ್ ಆಗುವುದಕ್ಕಿಂತ ಮೊದಲಿನ ಪರಿಚಯವದು. ಅವರ ನಡುವೆ ಹಣಕಾಸಿನ ವ್ಯವಹಾರವೂ ಇತ್ತು. ನಾಲ್ಕು ತಿಂಗಳ ಹಿಂದೆ ಮಹೇಂದ್ರ ಅವರ ಕುಟುಂಬವೂ ಬೆತುಲ್ ನಗರಕ್ಕೆ ಬಂದು ವಾಸಿಸಲಾರಂಭಿಸಿದೆ. ಆಗಿನಿಂದ ಮಹೇಂದ್ರ ಅವರನ್ನು ಭೇಟಿ ಮಾಡಲು ಸಂಧ್ಯಾಗೆ ಸಾಧ್ಯವಾಗಿಲ್ಲ. ಹೂಡಿಕೆ ಸಂಬಂಧ ಏರ್ಪಟ್ಟಿರುವ ಮನಸ್ತಾಪ ಬಗೆಹರಿದಿರಲಿಲ್ಲ. ಅದೇ ಸಿಟ್ಟಿನಿಂದ ತ್ರಿಪಾಠಿ ಕುಟುಂಬವನ್ನೇ ನಾಶಮಾಡುವ ನಿರ್ಧಾರವನ್ನು ಸಂಧ್ಯಾ ತೆಗೆದುಕೊಂಡಿದ್ದಳು.
ಇದನ್ನೂ ಓದಿ:ಬಹು ನಿರೀಕ್ಷಿತ ಯುಪಿಎಸ್​ಸಿ -ಸಿಎಂಎಸ್ ಪರೀಕ್ಷಾ ಅಧಿಸೂಚನೆ ಪ್ರಕಟ
ಜುಲೈ 20ರಂದು ಮನೆಯಲ್ಲಿ ಪೂಜೆಯೆಂದು ಕರೆದು, ಮಹೇಂದ್ರಗೆ ಗೋಧಿ ಹಿಟ್ಟನ್ನು ಸಂಧ್ಯಾ ಕೊಟ್ಟಿದ್ದಾರೆ. ಅದೇ ದಿನ ರಾತ್ರಿ ಆ ಹಿಟ್ಟಿನಲ್ಲಿ ಚಪಾತಿ ಮಾಡಿ ಮಹೇಂದ್ರ, ಮತ್ತವರ ಇಬ್ಬರು ಮಕ್ಕಳು ತಿಂದಿದ್ದಾರೆ. ಅದಾದ ನಂತರ ಕೆಲವೇ ಹೊತ್ತಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಕೂಡಲೇ ಔಷಧೋಪಚಾರ ಮಾಡಲಾಗಿದೆ. ಮಹೇಂದ್ರ ಅವರ ಪತ್ನಿ ಭಾಗ್ಯ ಆ ದಿನ ಆಹಾರ ಸೇವಿಸಿರಲಿಲ್ಲ. ಹಾಗಾಗಿ ಅವರು ಅನಾರೋಗ್ಯಕ್ಕೆ ಈಡಾಗಲಿಲ್ಲ. ಎರಡು ದಿನಗಳ ನಂತರವೂ ಆರೋಗ್ಯ ಸುಧಾರಿಸದ ಕಾರಣ ಮೂವರನ್ನು ಜುಲೈ 23ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜುಲೈ 25ರಂದು ಮಹೇಂದ್ರರ ಹಿರಿಯ ಮಗ ಮತ್ತು ಜುಲೈ 26ರಂದು ಮಹೇಂದ್ರ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಅಂತಿಮ ವರ್ಷದ ಪದವಿ ಪರೀಕ್ಷೆ ಬಗ್ಗೆ ಸುಪ್ರೀಂ ಕೋರ್ಟ್​ಗೆ ಯುಜಿಸಿ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಏನಿದೆ?
ಆಶೀಶ್​ರಾಜ್ ಪೊಲೀಸ್ ವಿಚಾರಣೆ ವೇಳೆ ಸಂಧ್ಯಾ ಸಿಂಗ್ ಗೋಧಿ ಹುಡಿ ಕೊಟ್ಟ ವಿಚಾರ ತಿಳಿಸಿದ್ದರು. ಅಲ್ಲದೆ, ಆ ಗೋಧಿ ಹುಡಿಯಲ್ಲಿ ಸಂಧ್ಯಾ ಏನೋ ಮಿಕ್ಸ್ ಮಾಡಿದ್ದಾಳೆ ಎಂದು ಹೇಳಿದ್ದಾಗಿ ತಿಳಿಸಿದ್ದರು. ಈ ಸುಳಿವಿನ ಮೇರೆಗೆ ಪೊಲೀಸರು ಆರೋಪಿ ಸಂಧ್ಯಾ, ಅವರ ಡ್ರೈವರ್ ಸಂಜು ಮತ್ತು ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಅಸಲಿ ವಿಷುಯ ಬಹಿರಂಗವಾಗಿದೆ. (ಏಜೆನ್ಸೀಸ್)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − seven =
Remember me
