ನವದೆಹಲಿ:ನಾರಿ ಮುನಿದರೆ ಮಾರಿ ಎಂಬ ಮಾತಿಗೆ ನೋಯ್ಡಾದ ಮಹಿಳೆಯೊಬ್ಬರು ಉತ್ತಮ ಉದಾಹರಣೆ ಆಗಿದ್ದಾರೆ. ಮಹಿಳೆಯ ಮೇಲೆ ದೌರ್ಜನ್ಯ ನಡೆದಾಗ ಕೆಲವರು ದೂರು ನೀಡುತ್ತಾರೆ. ಇನ್ನು ಕೆಲವರು ಮರ್ಯಾದೆಗೆ ಅಂಜಿ ಸುಮ್ಮನಾಗುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ಈ ರೀತಿ ಮಾಡದೇ ತಮ್ಮದೇ ಶೈಲಿಯಲ್ಲಿ ಘಟನೆಯನ್ನು ನಿರ್ವಹಿಸಿದ್ದು, ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಹೌದು. ಸಾರ್ವಜನಿಕ ಪ್ರದೇಶದಲ್ಲಿ ಮೈಕೈ ಮುಟ್ಟಿ ಅಶ್ಲೀಲವಾಗಿ ವರ್ತಿಸಿದ ಕಾಮುಕನನ್ನು ಸಂತ್ರಸ್ತ ಮಹಿಳೆ ಜನರ ಮುಂದೆಯೇ ಹಿಡಿದು ಅಟ್ಟಾಡಿಸಿಕೊಂಡು ಹೊಡೆದಿದ್ದಾಳೆ. ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ನೋಯ್ಡಾ ಸೆಕ್ಟರ್​-12ರ ಪೆಟ್ರೋಲ್​ ಪಂಪ್​ನಲ್ಲಿ ಕೆಲಸ ಮಾಡುವ 24 ವರ್ಷದ ಮಹಿಳೆ ಬಂಕ್​ಗೆ ಹೋಗುವಾಗ ಮಾರ್ಗ ಮಧ್ಯೆ ಘಟನೆ ಜರುಗಿದೆ.
ಇದನ್ನೂ ಓದಿರಿ:ಚಿಕ್ಕಪ್ಪನ ಅಂತ್ಯಕ್ರಿಯೆಗೆ ಹೂವು ತರಲು ಹೋದ ಸಹೋದರರು ಮರಳಿದ್ದು ಹೆಣವಾಗಿ!
ಮಹಿಳೆ ನಡೆದು ಹೋಗುವಾಗ ಬೈಸಿಕಲ್​ ಸವಾರನೊಬ್ಬ ಸ್ವಲ್ಪ ದೂರದಲ್ಲಿ ಸೈಕಲ್​ ನಿಲ್ಲಿಸಿ ಆಕೆಯನ್ನು ದಿಟ್ಟಿಸಿ ನೋಡಲು ಆರಂಭಿಸುತ್ತಾನೆ. ಮಹಿಳೆ ಸಹರಾ ರೆಡ್​ ಲೈಟ್​ ಬಳಿ ಹೋಗುತ್ತಿದ್ದಂತೆ ಆಕೆಯ ಮೇಲೆ ಎರಗುವ ಆರೋಪಿ ಆಕೆಯನ್ನು ಎಳೆದಾಡಿ ಮೈಯೆಲ್ಲಾ ಮುಟ್ಟಿ ಬೈಸಿಕಲ್​ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಾನೆ. ಏನು ನಡೆದಿದೆ ಎಂಬುದು ದಾರಿಹೋಕರಿಗೂ ತಿಳಿಯುವುದಿಲ್ಲ. ಆದರೆ, ಸುಮ್ಮನಾಗದ ಮಹಿಳೆ ಆತನ ಬೆನ್ನತ್ತಿ ಹಿಡಿಯುತ್ತಾಳೆ.
ಇದಾದ ಬಳಿಕ ಆತನನ್ನು ಚೆನ್ನಾಗಿ ಥಳಿಸಿ ಕೆಳಕ್ಕುರುಳಿಸುತ್ತಾಳೆ. ಈ ವೇಳೆ ಆತನು ಸಹ ಮಹಿಳೆಯ ಮೇಲೆ ಹಲ್ಲೆಗೆ ಮುಂದಾಗುತ್ತಾನೆ. ಇದನ್ನು ದಾರಿಹೋಕರು ನೋಡಿದರು ಯಾರೊಬ್ಬರು ಬಿಡಸಲು ಮುಂದಾಗದೇ ತಮ್ಮ ಮೊಬೈಲ್​ ಫೋನ್​ಗಳಲ್ಲಿ ಇಬ್ಬರ ಕಿತ್ತಾಟವನ್ನು ವಿಡಿಯೋ ಮಾಡಿಕೊಳ್ಳುತ್ತಾರೆ.
ಈ ಬಗ್ಗೆ ಮಾತನಾಡಿರುವ ಮಹಿಳೆ ಕಳೆದ ಆರು ವರ್ಷಗಳಿಂದ ನಾನಿಲ್ಲ ವಾಸವಿದ್ದೇನೆ. ಒಮ್ಮೆಯು ಈ ರೀತಿ ಆಗಿಲ್ಲ. ಇದೇ ಮೊದಲ ಬಾರಿ ನಾನು ಅಸುರಕ್ಷಿತಳು ಎಂದು ಅನಿಸಿತು ಎಂದಿದ್ದಾರೆ.
ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುವುದಾಗಿ ಪೊಲೀಸರು ಮಹಿಳೆಗೆ ಭರವಸೆ ನೀಡಿದ್ದಾರೆ.(ಏಜೆನ್ಸೀಸ್​)
VIDEO | ಐಪಿಎಲ್‌ಗೆ ಮುನ್ನ ಸನ್ಯಾಸಿ ಅವತಾರದಲ್ಲಿ ಎಂಎಸ್ ಧೋನಿ ಪ್ರತ್ಯಕ್ಷ!

8ನೇ ತರಗತಿ ವಿದ್ಯಾರ್ಥಿ ಜತೆ ಓಡಿಹೋದ ಮೂರು ಮಕ್ಕಳ ತಾಯಿ! 1 ವರ್ಷದ ರಹಸ್ಯ ಬಿಚ್ಚಿಟ್ಟ ಪಾಲಕರು

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳು! ಕರುಗೆ ಹಾಲುಣಿಸಲಾಗದೆ ನರಳುತ್ತಿದೆ ಮೂಕಜೀವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
