ಮುಂಬೈ :ಕರೊನಾದಿಂದ ಪತಿಯನ್ನು ಕಳೆದುಕೊಂಡಿದ್ದ ಮಹಿಳೆ ತನ್ನ ಏಳು ವರ್ಷದ ಮಗನೊಂದಿಗೆ 12ನೇ ಮಹಡಿಯ ಮನೆಯಿಂದ ನೆಲಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮುಂಬೈನಿಂದ ವರದಿಯಾಗಿದೆ. ಮೃತ ಮಹಿಳೆಯು ಸಾಯುವ ಮುನ್ನ ತಮ್ಮ ಕೆಳಗಡೆ ಮನೆಯವರು ಮಗು ಗಲಾಟೆ ಮಾಡುತ್ತದೆ ಎಂದು ದೂರು ನೀಡಿ ಕಿರುಕುಳ ಕೊಡುತ್ತಿದ್ದ ಬಗ್ಗೆ ಪತ್ರದಲ್ಲಿ ಬರೆದಿಟ್ಟಿದ್ದಾರೆ.
ರೇಷ್ಮಾ ಟ್ರೆಂಚಿಲ್(44) ಎಂಬಾಕೆ ಏಪ್ರಿಲ್​ ತಿಂಗಳಿಂದ ಚಾಂದಿವಲಿಯ ಅಪಾರ್ಟ್​​ಮೆಂಟ್​ ಕಟ್ಟಡದಲ್ಲಿನ ಫ್ಲ್ಯಾಟ್​ನಲ್ಲಿ ವಾಸಿಸುತ್ತಿದ್ದರು. ಆಕೆಯ ಗಂಡ ಸರತ್ ಮುಲುಕುತ್ಲ ಕರೊನಾ ಸೋಂಕು ತಗುಲಿದ್ದ ತಮ್ಮ ತಂದೆತಾಯಿಯನ್ನು ನೋಡಿಕೊಳ್ಳಲು ಹೋಗಿದ್ದು, ಅವರಿಗೂ ಸೋಂಕು ತಾಗಿ ಮೇ 23 ರಂದು ಮೃತಪಟ್ಟಿದ್ದರು.
ಇದನ್ನೂ ಓದಿ:ಟಿಕ್​ಟಾಕ್​ನಲ್ಲಿ ಹಣ ಗಳಿಸುವ ಮಾರ್ಗ ಹೇಳಿಕೊಟ್ಟ ಯುವತಿಗೆ 10 ವರ್ಷ ಜೈಲುಶಿಕ್ಷೆ!
ತನ್ನ ಗಂಡನನ್ನು ಕಳೆದುಕೊಂಡ ದುಃಖದಲ್ಲಿದ್ದ ಆಕೆ ಮಗುವಿನೊಂದಿಗೆ ವಾಸವಾಗಿದ್ದರು. ಕೆಳಗಿನ ಫ್ಲ್ಯಾಟ್​ನಲ್ಲಿ ವಾಸವಾಗಿದ್ದ ಆಯೂಬ್​ ಖಾನ್​ ದಂಪತಿ ಮತ್ತು ಅವರ ಪುತ್ರ ಶಾದಾಬ್​ ಎನ್ನುವವರು ಮಗು ತುಂಬಾ ಗದ್ದಲ ಮಾಡುತ್ತದೆ ಎಂದು ಸತತವಾಗಿ ದೂರು ನೀಡಿ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಕೇಸು ದಾಖಲಿಸಿರುವ ಮುಂಬೈ ಪೊಲೀಸರು, 33 ವರ್ಷದ ಶಾದಾಬ್​ನನ್ನು ಬಂಧಿಸಿದ್ದಾರೆ.(ಏಜೆನ್ಸೀಸ್)
ಹೊಟೆಲ್​-ರೆಸಾರ್ಟ್​ ಮಾಲೀಕರು, ಕಾರ್ಮಿಕರಿಗೆ ನೆರವು ನೀಡಿ: ಸಿದ್ದರಾಮಯ್ಯ

ಚೀನಾ ಲಸಿಕೆ ನೀಡಿದ ದೇಶಗಳಲ್ಲಿ ಕರೊನಾ ಸೋಂಕು ಹೆಚ್ಚಳ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + seven =
Remember me
