ನವದೆಹಲಿ:ಗಂಡನಿಂದ ಬೇರೆಯಾಗುವ ಬಗೆಗಿನ ಕಳವಳದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಲೋಕವನ್ನೇ ತ್ಯಜಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ನಗರದ ಮುಖರ್ಜಿನಗರದ ನಿವಾಸಿಯಾದ 52 ವರ್ಷ ವಯಸ್ಸಿನ ನೇಹಾ ವರ್ಮಾ ಮೃತಪಟ್ಟ ಮಹಿಳೆ.
ನೇಹಾ ಮತ್ತು ಆಕೆಯ ಗಂಡ ಧರಂ ವರ್ಮ ನಿರಂಕಾರಿ ಕಾಲೋನಿಯ ಅಪಾರ್ಟ್​ಮೆಂಟಿನಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಪರಸ್ಪರರಿಂದ ಬೇರೆಯಾಗುವ ಪ್ರಯತ್ನದಲ್ಲಿದ್ದರು. ಅವರ ಮಗ ಮತ್ತು ಮಗಳು ಅಮೆರಿಕದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಅಕ್ಬೋಬರ್‌ನಲ್ಲಿ ಬ್ಯಾಂಕ್‌ಗೆ 10 ದಿನ ರಜೆ- ಇಲ್ಲಿದೆ ಸಂಪೂರ್ಣ ವಿವರ
ಮಂಗಳವಾರ(ಸೆ.21) ಸಂಜೆ ನೇಹಾ, ತಮ್ಮ ಪತಿ ಮನೆಗೆ ಬರುವ ಸಮಯಕ್ಕೆ ಸರಿಯಾಗಿ, ಅವರಿಗೆ ಐ ಲವ್​ ಯು ಎಂದು ಸಂದೇಶ ಕಳುಹಿಸಿ, ತಾವು ವಾಸಿಸುತ್ತಿದ್ದ ಅಪಾರ್ಟ್​ಮೆಂಟ್​ ಕಟ್ಟಡದ 5ನೇ ಮಹಡಿಯಿಂದ ಕೆಳಗೆ ಹಾರಿದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಆಕೆ ಅದಕ್ಕೂ ಮುಂಚೆಯೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೃತ್ಯವು ಅಪಾರ್ಟ್​ಮೆಂಟಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಸಿಸಿಟಿವಿ ಫೂಟೇಜ್​ ಮತ್ತು ಮಹಿಳೆಯ ಮೊಬೈಲ್​ ಫೋನ್​ಗಳ ವಿಶ್ಲೇಷಣೆ ನಡೆಸಿ ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ಮಕ್ಕಳು ದೆಹಲಿಗೆ ಬಂದ ನಂತರ ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎನ್ನಲಾಗಿದೆ.(ಏಜೆನ್ಸೀಸ್)
ಸಿಧು ‘ಸೂಪರ್​ ಸಿಎಂ’ ಆಗಲು ಪ್ರಯತ್ನಿಸಿದರೆ ಕಾಂಗ್ರೆಸ್​ಗೆ ಕುತ್ತು ಎಂದ ಕ್ಯಾಪ್ಟನ್!

ಹೆಂಡತಿಗೆ ಲಸಿಕೆ ನೀಡಿದ್ದಕ್ಕೆ ನರ್ಸ್ ಮುಖಕ್ಕೆ ಪಂಚ್​ ಮಾಡಿದ ಭೂಪ!

ತಡರಾತ್ರಿ ಮನೆಗೆ ಹಿಂತಿರುಗುತ್ತಿದ್ದ ಯುವತಿಯನ್ನು ರೇಪ್​ ಮಾಡಿದ ಕ್ಯಾಬ್​ ಡ್ರೈವರ್; ಮದ್ಯಪಾನವೇ ಮುಳುವಾಯ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 1 =
Remember me
