ಸೇಲಂ:ಮಗನ ಕಾಲೇಜು ಶುಲ್ಕ ಪಾವತಿಗಾಗಿ ತಾಯಿಯೊಬ್ಬಳು ತನ್ನ ಪ್ರಾಣವನ್ನೇ ತ್ಯಾಗ ಮಾಡಿರುವ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.ಇದನ್ನೂ ಓದಿ:ಮೋಜಿಗಾಗಿ ವಿದ್ಯಾರ್ಥಿನಿಯರಿಗೆ ಪದೇ ಪದೇ ವಿದ್ಯುತ್ ಶಾಕ್ ನೀಡಿದ ಎಲೆಕ್ಟ್ರಿಷಿಯನ್…ಮೃತಳನ್ನು ಪಾಪತಿ (46) ಎಂದು ಗುರುತಿಸಲಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ನೈರ್ಮಲ್ಯ ಕಾರ್ಯಕರ್ತಳಾಗಿ ಕೆಲಸ ಮಾಡುತ್ತಿದ್ದಳು. ಪಾಪತಿ ಪತಿಯನ್ನು ಕಳೆದುಕೊಂಡಿದ್ದು, ಪುತ್ರಿ ಹಾಗೂ ಪುತ್ರನೊಂದಿಗೆ ಸೇಲಂನಲ್ಲಿ ವಾಸವಾಗಿದ್ದಳು. ತನ್ನ ಮಗನ ಕಾಲೇಜು ಶುಲ್ಕವನ್ನು ಪಾವತಿಸಲು ಆಕೆಗೆ 45,000 ರೂ ಅಗತ್ಯವಿದ್ದು, ಅದಕ್ಕಾಗಿ ಆಕೆ ಹತ್ತಿರದ ಸಂಬಂಧಿ ಹಾಗೂ ಸ್ನೇಹಿತರ ಬಳಿಯು ಸಾಲವನ್ನು ಕೇಳಿದ್ದಳು.ಆದರೆ ಈ ನಡುವೆ ಆಕೆಗೆ ಯಾರೋ ಸ್ವಚ್ಛತಾ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೆ, ಕುಟುಂಬದವರಿಗೆ ಸರ್ಕಾರ ಪರಿಹಾರ ನೀಡಲಿದೆ ಎಂಬ ಮಾತನ್ನು ಹೇಳಿದ್ದರು. ಒಂದು ಕಡೆ ಮಗನ ಶಾಲೆಯ ಶುಲ್ಕ ಭರಿಸದೇ ಒದ್ದಾಡುತ್ತಿದ್ದ ಪಾಪತಿ, ಈ ಮಾತನ್ನು ಕೇಳಿ ಖಿನ್ನತೆಗೆ ಒಳಗಾಗಿ ಕೊನೆಗೆ ತನ್ನ ಪ್ರಾಣವನ್ನು ಬಿಡಲು ನಿರ್ಧರಿಸಿದ್ದಳು.ಇದನ್ನೂ ಓದಿ:ರೈತರನ್ನು ಚಿಂತೆಗೀಡು ಮಾಡಿದ ರಾಸುಗಳ ಮಾರಕ ಕಾಯಿಲೆ: ಲಕ್ಷಣ, ಮುಂಜಾಗ್ರತಾ ಕ್ರಮಗಳು ಇಲ್ಲಿವೆ…ಕೊನೆಗೆ ಪಾಪಾತಿ ಚಲಿಸುತ್ತಿದ್ದ ಬಸ್ಸಿನ ಮುಂದೆ ಜಿಗಿಯಲು ಪ್ರಯತ್ನಿಸಿದ್ದು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಿದ್ದಿದ್ದಳು. ನಂತರ ಕೆಲವು ನಿಮಿಷಗಳ ನಂತರ ಮತ್ತೊಂದು ಬಸ್ ತನ್ನ ಬಳಿಗೆ ಬಂದು ಅದೇ ಕೃತ್ಯವನ್ನು ಮುಂದುವರೆಸಿ ಪ್ರಾಣವನ್ನು ಬಿಟ್ಟಿದ್ದಳು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಾಗ ಪೊಲೀಸರೂ ಕೂಡ ವಿಡಿಯೋ ನೋಡಿ ಆಘಾತಕ್ಕೆ ಒಳಗಾಗಿದ್ದು, ಈ ಬಗ್ಗೆ ತನಿಖೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − one =
Remember me
