ಹೈದರಾಬಾದ್​:ಮಹಿಳೆಯೊಬ್ಬಳು ತನ್ನ ಎಂಟು ತಿಂಗಳ ಮಗವಿನೊಂದಿಗೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೈದರಾಬಾದ್​ನ ಜುಬಿಲಿ ಹಿಲ್ಸ್​ನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಆರತಿ (22) ಮೃತ ದುರ್ದೈವಿ. ಕಟ್ಟಡದ ಎರಡನೇ ಅಂತಸ್ತಿನಿಂದ ಜಿಗಿದು ಒದ್ದಾಡುತ್ತಿದ್ದ ಆರತಿ ಮತ್ತು ಮಗುವನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆರತಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಆದರೆ, ಮಗುವಿನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಇದನ್ನೂ ಓದಿರಿ:ಟ್ರಸ್ಟ್​ಗಾಗಿ ಸಂಗ್ರಹಿಸಿದ ಹಳೇ ಶರ್ಟ್​ನಲ್ಲಿದ್ದ ಪಾಕೆಟ್ ನೋಡಿದ ಕೂಡಲೇ ಮೈಸೂರಿನಿಂದ ಕೇರಳಕ್ಕೆ ದೌಡು!
ಪೊಲೀಸ್​ ಅಧಿಕಾರಿ ಹೇಳುವ ಪ್ರಕಾರ ಬಿಹಾರ ಮೂಲದ ಬಿಮಲ್​ ಕುಮಾರ್ ಎಂಬಾತ ಕೆಲವು ವರ್ಷಗಳ ಹಿಂದೆ ತನ್ನ ಪತ್ನಿ ಆರತಿ ಜತೆ ಹೈದರಾಬಾದ್​ಗೆ ವಲಸೆ ಬಂದಿದ್ದ. ದಂಪತಿ ಆಗಾಗ ಜಗಳವಾಡುತ್ತಿದ್ದರು. ಅದೇ ರೀತಿ ಸೋಮವಾರ ರಾತ್ರಿ ಇಬ್ಬರ ನಡುವೆ ತೀವ್ರ ವಾಗ್ವಾದ ಜರುಗಿತ್ತು. ಜಗಳ ವಿಕೋಪಕ್ಕೆ ತಿರುಗಿ, ಅದರಿಂದ ಮನನೊಂದ ಆರತಿ ತನ್ನ ಮಗುವಿನ ಜತೆ ಕಟ್ಟದಿಂದ ಜಿಗಿದಳು.
ಆರತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಗಂಡ-ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಏನು ಅರಿಯದ ಕಂದಮ್ಮ ಗಂಭೀರ ಗಾಯಗೊಂಡು ಅದೃಷ್ಟವಶಾತ್​ ಬದುಕುಳಿದಿದೆ. ಸದ್ಯ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರಿದಿದೆ.
ಇದನ್ನೂ ಓದಿರಿ:ಪಾಲಕರಿಗೆ ಸುಳ್ಳು ಹೇಳಿ ಲಾಡ್ಜ್​ ಸೇರಿದ್ದ ಸರ್ಕಾರಿ ನೌಕರರಿಬ್ಬರ ಸ್ಥಿತಿ ನೋಡಿ ಬೆಚ್ಚಿಬಿದ್ದ ಪೊಲೀಸರು!
ಈ ಸಂಬಂಧ ಹೈದರಾಬಾದ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಆರಂಭಿಸಿದ್ದಾರೆ.(ಏಜೆನ್ಸೀಸ್​)
ರೈತ ಹೋರಾಟದ ಬೆಂಬಲಕ್ಕೆ ನಿಂತ ನೀಲಿ ತಾರೆ ಮಿಯಾ ಖಲೀಫಾ! ಟ್ರೋಲಿಗರು ಫುಲ್​ ಖುಷ್​

ಹೆಂಡತಿ-ಮಗನಿಗೆ ಗುಂಡಿಕ್ಕಿ, ಆತ್ಮಹತ್ಯೆ ಮಾಡಿಕೊಂಡ ಗಂಡ! ಸುಖ ಸಂಸಾರ ಅಂತ್ಯವಾಗಿದ್ದಕ್ಕೆ ಕಾರಣವೇನು?

ಮುಗ್ಧ ತಮ್ಮನ ಹೆಂಡತಿ ಮೇಲೆ ಬಿತ್ತು ಅಣ್ಣನ ಕಾಮದೃಷ್ಟಿ: ನಡದೇ ಹೋಯ್ತು ದುರಂತ ಘಟನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
