ಫತೇಹಪುರ:ಉತ್ತರಪ್ರದೇಶದ ಫತೇಹಪುರದಿಂದ ಅಪಹರಣಗೊಂಡಿದ್ದ 3 ವರ್ಷದ ಹೆಣ್ಣುಮಗುವನ್ನು ಪೊಲೀಸರು ಪಂಬಾಬ್​ನ ಜಲಂಧರ್​ನಲ್ಲಿ ಪತ್ತೆ ಹಚ್ಚಿದ್ದಾರೆ. ಪ್ರೇಮಿಯೊಂದಿಗೆ ಹೋಟೆಲ್​ನಲ್ಲಿರುವಾಗ ಸಾಧಾರಣವಾದ ದಂಪತಿಯಂತೆ ಕಾಣಿಸುವ ಉದ್ದೇಶದಿಂದ ಮಗುವಿನ ಸೋದರತ್ತೆಯೇ ಮಗುವನ್ನು ಕದ್ದೊಯ್ದಿದ್ದಳು ಎನ್ನಲಾಗಿದೆ.
ಉತ್ತರ ಪ್ರದೇಶದ ಫತೇಹಪುರ ನಿವಾಸಿಯಾದ 20 ವರ್ಷದ ನಿಶು ದ್ವಿವೇದಿ, ಪಂಜಾಬ್​ನ ಜಲಂಧರ್​ನ ನವದೀಪ್ ಸಿಂಗ್ ಅಲಿಯಾಸ್ ಗಿನ್ನಿ(25) ಎಂಬುವ ಯುವಕನನ್ನು ಪ್ರೀತಿಸುತ್ತಿದ್ದಳಂತೆ. ಮನೆಯಿಂದ ಓಡಿ ಹೋಗಿ ಅವನನ್ನು ಮದುವೆ ಆಗಬೇಕೆಂದು ಪ್ಲಾನ್ ಮಾಡಿದ ಆಕೆ, ಮಾರ್ಚ್​ 2 ರಂದು ತನ್ನೊಂದಿಗೆ ಸೋದರನ 3 ವರ್ಷದ ಮಗುವನ್ನೂ ಯಾರಿಗೂ ತಿಳಿಸದೆ ಕರೆದೊಯ್ದಿದ್ದಾಳೆ.
ಇದನ್ನೂ ಓದಿ:ಬಿಜೆಪಿ ಶಾಸಕನ ಬರ್ತ್​ಡೇ ಪಾರ್ಟಿಯಲ್ಲಿ ಎರಡು ಸಾವು; ಒಬ್ಬನಿಗೆ ಗುಂಡೇಟು, ಇನ್ನೊಬ್ಬನಿಗೆ ಕಲ್ಲೇಟು..
ಮಗುವಿನ ಅಪಹರಣದ ತನಿಖೆ ಆರಂಭಿಸಿದ ಫತೇಹಪುರ ಪೊಲೀಸರು, ಶುಕ್ರವಾರ (ಮಾರ್ಚ್ 5) ಜಲಂಧರ್​ ತಲುಪಿ, ಅತ್ತೆಯ ಬಳಿಯಿದ್ದ ಮಗುವನ್ನು ಸುರಕ್ಷಿತವಾಗಿ ವಾಪಸ್ ಮನೆಗೆ ಕರೆತಂದಿದ್ದಾರೆ. ಈ ಸಂಬಂಧವಾಗಿ ಯುವಜೋಡಿಯನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆಯ ಸಮಯದಲ್ಲಿ, ನಿಶು, ತನ್ನ ಪ್ರೇಮಿ ಗಿನ್ನಿಯನ್ನು ಮದುವೆಯಾಗುವ ಉದ್ದೇಶದಿಂದ ತೆರಳಿದ್ದೆ. ಹೋಟೆಲ್​ನಲ್ಲಿ ಇಬ್ಬರೂ ಗಂಡಹೆಂಡತಿಯಂತೆ, ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ತಂಗುವ ಉದ್ದೇಶದಿಂದ, ಮಗುವನ್ನು ಜೊತೆಗೆ ಕರೆದೊಯ್ದೆ ಎಂದು ಹೇಳಿದ್ದಾಳೆ. ಮಗುವಿಗೆ ಯಾವುದೇ ರೀತಿಯ ಹಾನಿ ಮಾಡುವ ಉದ್ದೇಶ ತನಗಿರಲಿಲ್ಲ ಎಂದಿದ್ದಾಳೆ ಎಂದು ಫತೇಹಪುರ ಎಸ್ಪಿ ಸತ್ಪಾಲ್ ಅಂಟಿಲ್ ತಿಳಿಸಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಹೆದ್ದಾರಿಯಲ್ಲಿದ್ದ 12,000 ಮರಗಳ ಟ್ರಾನ್ಸ್​​ಪ್ಲಾಂಟ್ : ಸಚಿವ ಗಡ್ಕರಿ
ಅಪ್ಪನ ಹೆಸರು ಕೇಳಿದವನಿಗೆ ಕಾದಿತ್ತು ಶಾಕ್! 27 ವರ್ಷಗಳ ಹಿಂದೆ ನಡೆದಿತ್ತು ಅಪರಾಧ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + fourteen =
Remember me
