ಗುವಾಹಟಿ:ಮಹಿಳೆಯೊಬ್ಬಳು ತನ್ನ ಗಂಡ ಹಾಗೂ ಅತ್ತೆಯನ್ನು ಕೊಲೆ ಮಾಡಿದ್ದಲ್ಲದೆ, ಅವರ ಶವಗಳನ್ನು ತುಂಡರಿಸಿ ಪಕ್ಕದ ರಾಜ್ಯದಲ್ಲಿ ಎಸೆದ ಪ್ರಕರಣ ನಡೆದಿದೆ. ಈ ದುಷ್ಕೃತ್ಯಕ್ಕೆ ಈಕೆಯ ಗೆಳೆಯರಾದ ಟ್ಯಾಕ್ಸಿ ಡ್ರೈವರ್, ತರಕಾರಿ ವ್ಯಾಪಾರಿ ಸಹಾಯ ಮಾಡಿದ್ದು, ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.
ಜಿಮ್​ ಇನ್​ಸ್ಟ್ರಕ್ಟರ್​ ಆಗಿರುವ ಬಂದನಾ ಕಲಿತಾ (32), ಟ್ಯಾಕ್ಸಿ ಡ್ರೈವರ್​ ಧಂತಿ ದೇಕಾ, ತರಕಾರಿ ವ್ಯಾಪಾರಿ ಅರುಪ್ ದೇಕಾ ಬಂಧಿತರು. ಈಕೆಯ ಪತಿ ಅಮರ್​ಜ್ಯೋತಿ (35) ಹಾಗೂ ಅತ್ತೆ ನಿವೃತ್ತ ಉದ್ಯೋಗಿ ಶಂಕರಿ ಡೇ (62) ಕೊಲೆಯಾದವರು. ಈಕೆ ಕಳೆದ ಜುಲೈ 26ರಂದು ಅತ್ತೆಯನ್ನು, ಆ. 17ರಂದು ಕೊಲೆ ಮಾಡಿದ್ದಳು. ಕೊಲೆ ಬಳಿಕ ಶವಗಳನ್ನು ತುಂಡರಿಸಿ ಅದನ್ನು ಎಸೆಯಲೆಂದೇ ಎರಡು ಸಲ ಪಕ್ಕದ ಮೇಘಾಲಯಕ್ಕೆ ಹೋಗಿ ಬಂದಿದ್ದರು.
ಇಷ್ಟೆಲ್ಲ ಆದಮೇಲೆ ಬಂದನಾ ಕಳೆದ ಆ. 19ರಂದು ನೂನ್ಮತಿ ಪೊಲೀಸ್ ಠಾಣೆಗೆ ದೂರು ನೀಡಿ ಗಂಡ ಹಾಗೂ ಅತ್ತೆ ಕಾಣಿಸುತ್ತಿಲ್ಲ ಎಂದಿದ್ದಳು. ಈ ಮೇರೆಗೆ ತನಿಖೆಗಿಳಿದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ನ. 21ರಂದು ಕೊಲೆಯಾದ ಶಂಕರಿಯ ಸಂಬಂಧಿ ನಿರ್ಮಲಾ ಡೇ ಎಂಬಾಕೆ ಕಾಣೆಯಾದ ಇಬ್ಬರ ಖಾತೆಯಿಂದ ಎಟಿಎಂ ಮೂಲಕ ಹಣ ಡ್ರಾ ಆಗಿರುವುದನ್ನು ಪೊಲೀಸರ ಗಮನಕ್ಕೆ ತಂದಿದ್ದು, ಇಬ್ಬರ ಅಪಹರಣ ಆಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದರು.
ಮೊನ್ನೆ ಫೆ. 14ರಂದು ಮತ್ತೆ ಪೊಲೀಸರಲ್ಲಿಗೆ ಬಂದಿದ್ದ ಬಂದನಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಅದೇ ದಿನ ನಿರ್ಮಲಾ ಡೇ ಕೂಡ ಠಾಣೆಗೆ ಬಂದು ತನಿಖೆಯಲ್ಲಿ ಪ್ರಗತಿ ಆಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಪರಿಣಾಮವಾಗಿ ವಿಶೇಷ ತಂಡ ರಚಿಸಲಾಗಿದ್ದು, ಪೊಲೀಸರು ಬಂದನಾ ಮತ್ತು ನಿರ್ಮಲಾ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದರು. ಬಂದನಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಪೊಲೀಸರು ಮತ್ತಷ್ಟು ತೀಕ್ಷ್ಣವಾಗಿ ವಿಚಾರಣೆ ನಡೆಸಿದಾಗ ಇಬ್ಬರನ್ನೂ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಳು.
ಅತ್ತೆಯನ್ನು ಉಸಿರು ಕಟ್ಟಿಸಿ ಸಾಯಿತಿ ಬಳಿಕ ರುಂಡ ಕತ್ತರಿಸಿ ದೇಹವನ್ನು ಮೂರು ತುಂಡಾಗಿಸಿದ್ದರು. ಪತಿಯ ತಲೆಗೆ ಸರಳಿನಿಂದ ಹೊಡೆದು ಕೊಂದು ನಂತರ ದೇಹವನ್ನು ಐದು ಭಾಗಗಳಾಗಿ ಕತ್ತರಿಸಿದ್ದರು. ದೇಹದ ಭಾಗಗಳನ್ನು ಪ್ಯಾಕ್ ಮಾಡಿ ಟ್ಯಾಕ್ಸಿಯಲ್ಲಿ ಮೇಘಾಲಯಕ್ಕೆ ಕೊಂಡೊಯ್ದು ಬೇರೆ ಬೇರೆ ಪ್ರದೇಶದಲ್ಲಿ ಎಸೆದಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ.ಬಂದನಾ-ಅಮರಜ್ಯೋತಿ ಮನೆಯವರ ವಿರೋಧದ ನಡುವೆಯೂ ಹನ್ನೆರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಕೆಲವು ವರ್ಷಗಳ ಬಳಿಕ ಶಂಕರಿ ಆಕೆಯನ್ನು ಸೊಸೆ ಎಂದು ಒಪ್ಪಿ ಮೂವರೂ ಒಂದೇ ಮನೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಆತ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಗಲಾಟೆಯಾಗಿ ಶಂಕರಿ ಬೇರೆಡೆ ತನ್ನ ಸ್ವಂತ ಫ್ಲ್ಯಾಟ್​ನಲ್ಲಿ ಇರಲಾರಂಭಿಸಿದ್ದರು. ಆ ಬಳಿಕ ಈ ಕೃತ್ಯವಾಗಿದ್ದು, ಕೊಲೆಗೆ ನಿಖರ ಕಾರಣ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಮಗುವಿಗೆ ಹಾಲು ಕುಡಿಸುತ್ತಿದ್ದ ಬಾಣಂತಿ ಕುಸಿದು ಬಿದ್ದು ಸಾವು!

ಶೂಟ್ ಮಾಡಿ ಮಗನನ್ನೇ ಕೊಂದ; ತಂದೆಯ ಈ ದುಷ್ಕೃತ್ಯಕ್ಕೆ ಕಾರಣ ಇದಾ?

ಅಳಿಯನನ್ನೇ ಅಪಹರಿಸಿ ಮಾನಸಿಕ ಅಸ್ವಸ್ಥ ಎಂದು ಬಿಂಬಿಸಿದ ಅತ್ತೆ; ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಮತ್ತು ಕುಟುಂಬಸ್ಥರ ವಿರುದ್ಧ ಕೇಸ್​

ಬಿಲ್ಲವ/ಈಡಿಗ, ಗಾಣಿಗ ಸಮುದಾಯಗಳಿಗೆ ಸರ್ಕಾರದ ಕೊಡುಗೆ; ನಿಗಮ ಸ್ಥಾಪನೆ ಬೇಡಿಕೆ ಈಡೇರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
