ಜೈಪುರ :ಎರಡು ಗುಂಪುಗಳ ನಡುವೆ ಜಗಳ ನಡೆದ ಹಿನ್ನೆಲೆಯಲ್ಲಿ ಎದುರಾಳಿಯ ಮೇಲೆ ಸುಳ್ಳು ಕೇಸು ಹಾಕಿ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಮಹಿಳೆಯೊಬ್ಬಳು ತನ್ನ 3 ವರ್ಷದ ಮೊಮ್ಮಗಳನ್ನು ಕೊಂದಿರುವ ಆಘಾತಕಾರಿ ಪ್ರಸಂಗ ವರದಿಯಾಗಿದೆ. ರಾಜಸ್ಥಾನದ ಬಾರನ್​ ಜಿಲ್ಲೆಯ ಬೊರಿನಾ ಗ್ರಾಮದ ನಿವಾಸಿ 50 ವರ್ಷದ ಕನಕ್​ಬಾಯಿ ಎಂಬಾಕೆ ಈ ಹೇಯ ಕೃತ್ಯ ಎಸಗಿರುವ ಆರೋಪಿ.
ಕನಕ್​ಬಾಯಿಯ ಮಗ ಅಮರ್​ಲಾಲ್ ಮೋಗ್ಯ ಮತ್ತು ಅದೇ ಗ್ರಾಮದ ನಿವಾಸಿ ರಾಮೇಶ್ವರ್ ಮೋಗ್ಯ ಬಣಗಳ ನಡುವೆ ಮೇ 30 ರಂದು ನೀರು ಹಿಡಿಯುವ ದಾರಿಯ ಬಗ್ಗೆ ದೊಡ್ಡ ಜಗಳ ನಡೆದಿತ್ತು. ಈ ಜಗಳದಲ್ಲಿ ಹಲವರಿಗೆ ಗಾಯಗಳಾಗಿದ್ದು, ಅಮರ್​ಲಾಲ್​ ಮೋಗ್ಯರ 3 ವರ್ಷದ ಮಗಳು ಸಾವಪ್ಪಿದ್ದಳು ಎಂದು ಕನಕ್​ಬಾಯಿ ಕುಟುಂಬದವರು ರಾಮೇಶ್ವರ್​ ಮೋಗ್ಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ:ವರದಕ್ಷಿಣೆ ಕಿರುಕುಳ: ಮದ್ವೆಯಾದ ಒಂದೇ ವರ್ಷಕ್ಕೆ ದುರಂತ ಅಂತ್ಯ ಕಂಡ 19 ವರ್ಷದ ಯುವತಿ!
ತನಿಖೆ ಕೈಗೊಂಡ ಪೊಲೀಸರಿಗೆ ತಿಳಿದುಬಂದ ವಿಷಯವೆಂದರೆ, ಅಂದಿನ ಜಗಳದಲ್ಲಿ ರಾಮೇಶ್ವರ್ ಮೋಗ್ಯ ಮಗಳಿಗೂ ಏಟು ಬಿದ್ದಿದ್ದು, ಕನಕ್​ಬಾಯಿ ಆತನ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸುವುದಾಗಿ ಹೆದರಿಸಿದಾಗ ಆತ ಸ್ಥಳದಿಂದ ಓಡಿಹೋಗಿದ್ದ. ತದನಂತರ, ಜಗಳದಲ್ಲಿ ರಾಮೇಶ್ವರ್​ ಮೋಗ್ಯನೇ ಮಗುವನ್ನು ಸಾಯಿಸಿದ ಎಂದು ಸುಳ್ಳು ಆರೋಪ ಹೊರಿಸುವುದಕ್ಕಾಗಿ, ಕನಕ್​ಬಾಯಿ ಮೊಮ್ಮಗುವನ್ನು ಸಾಯಿಸಿದ್ದಳು. ಆರೋಪಿಯ ಅನುಮಾನಾಸ್ಪದ ವರ್ತನೆ ಗಮನಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ ಎಂದು ಬಾರನ್ ಎಸ್ಪಿ ವಿನೀತ್​ಕುಮಾರ್​ ಬನ್ಸಲ್ ಹೇಳಿದ್ದಾರೆ.(ಏಜೆನ್ಸೀಸ್)
ಹಾಡುಹಗಲೇ ಬ್ಯಾಂಕ್ ದರೋಡೆ : 1.19 ಕೋಟಿ ರೂ. ಹಣ ಲೂಟಿ

8 ಜಿಲ್ಲೆಗಳಲ್ಲಿ 65,000 ಕರೊನಾ ಪ್ರಕರಣ : ಜಿಲ್ಲಾಧಿಕಾರಿಗಳಿಗೆ ಸಿಎಂ ಕ್ಲ್ಯಾಸ್!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:1 × 5 =
Remember me
