ನವದೆಹಲಿ:ಲಾಕ್​ಡೌನ್​ ಹಿನ್ನೆಲೆಯಲ್ಲಿ ಈಗ ಎಲ್ಲಾ ಕಡೆಗಳಲ್ಲಿಯೂ ಅನ್​ಲೈನ್​ ಪರಿಪಾಠ ಶುರುವಾಗಿದೆ. ಶಾಲೆಗಳಿಂದ ಹಿಡಿದು ವಿವಿಧ ತರಬೇತಿಗಳೂ ಈಗ ಆನ್​ಲೈನ್​ನಲ್ಲಿಯೇ ನಡೆಯುತ್ತಿವೆ. ಬಹುತೇಕ ಎಲ್ಲರ ಬಳಿ ಸ್ಮಾರ್ಟ್​ಫೋನ್​ ಇರುವ ಕಾರಣ, ಆನ್​ಲೈನ್​ ತರಗತಿಗಳಿಗೆ ಎಲ್ಲರೂ ಮೊರೆ ಹೋಗಿದ್ದಾರೆ.
ಆದರೆ ದುರದೃಷ್ಟ ಎಂದರೆ, ಹೆಚ್ಚಿನವರ ಬಳಿ ಸ್ಮಾರ್ಟ್​ಫೋನ್​ ಇರುವುದು ನಿಜವಾದರೂ ಅದರಾಚೆಯೂ ಇನ್ನೊಂದು ವರ್ಗವಿದೆ. ಅವರ ಬಳಿ ಆನ್​ಲೈನ್​ ತರಬೇತಿಗೆ ಅನುಕೂಲ ಆಗುವಂಥ ದುಬಾರಿ ಫೋನ್​ಗಳು ಇರುವುದಿಲ್ಲ. ಆದರೆ ಈ ವರ್ಗದ ಬಗ್ಗೆ ಯಾರೂ ಹೆಚ್ಚಾಗಿ ಗಮನ ಕೊಡದೇ ಇರುವ ಕಾರಣ, ಇದಕ್ಕೆ ಒಂದು ಜೀವ ಬಲಿಯಾಗಿದೆ!
ಇದನ್ನೂ ಓದಿ:ಚಂಡಮಾರುತದ ಪರಿಹಾರ ಕಾರ್ಯದಲ್ಲಿ ಬಂತು ವಿಸ್ಕಿ ಬಾಟಲ್, ಸ್ನ್ಯಾಕ್ಸ್​​​: ಜನರು ತಬ್ಬಿಬ್ಬು!
ಈ ಘಟನೆ ನಡೆದಿರುವುದು ದಕ್ಷಿಣ ದೆಹಲಿಯ ಮೈದಾನ್ ಗರ್ಹಿಯಲ್ಲಿ. 29 ವರ್ಷದ ಜ್ಯೋತಿ ಮಿಶ್ರಾ ಅವರ ಮಕ್ಕಳಿಗೆ ಆನ್​ಲೈನ್​ ತರಬೇತಿ ನಡೆಯುತ್ತಿತ್ತು. ಆದರೆ ಅವರ ಬಳಿ ಸ್ಮಾರ್ಟ್​ಫೋನ್​ ಇರಲಿಲ್ಲ. ಆದರೆ ತರಗತಿ ಎಲ್ಲಿ ಮಿಸ್​ ಆಗಿಬಿಡುವುದೋ ಎಂಬ ಭಯ ಈ ಅಮ್ಮನಿಗೆ. ಆದರೆ ಅನಿವಾರ್ಯ ಕಾರಣಗಳಿಂದ ಸ್ಮಾರ್ಟ್​ಫೋನ್​ ಕೊಡಿಸಲು ಅವರ ಪತಿ ಪ್ರಮೋದ್​ ಅವರಿಗೆ ಸಾಧ್ಯವಾಗಲಿಲ್ಲ.
ಜ್ಯೋತಿ ಅವರು ಗಂಡನ ಬಳಿ ಸ್ಮಾರ್ಟ್​ಫೋನ್​ ಬೇಡಿಕೆ ಇಟ್ಟಾಗಲೆಲ್ಲಾ ಅವರು ಇನ್ನೂ ಸ್ವಲ್ಪ ದಿನ ಹೋಗಲಿ ಎಂದು ಹೇಳುತ್ತಿದ್ದರು. ನಿನ್ನೆ ಪತ್ನಿ ತೀರಾ ಪಟ್ಟು ಹಿಡಿದಾಗ ದಂಪತಿ ನಡುವೆ ಜಗಳವಾಗಿದೆ. ಫೋನ್​ ತುರ್ತಾಗಿ ಕೊಡಿಸಲು ಗಂಡ ಒಪ್ಪದಿದ್ದ ಕಾರಣ, ಮನನೊಂದುಕೊಂಡಿರುವ ಜ್ಯೋತಿ ಅವರು ದುಗುಡದ ನಿರ್ಧಾರ ತೆಗೆದುಕೊಂಡೇ ಬಿಟ್ಟರು! ಮನೆಯಲ್ಲಿ ಇದ್ದ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡರು!
ಇದನ್ನೂ ಓದಿ:ಕರೊನಾ ಭಯಕ್ಕೆ ಬಲಿಯಾದ ವೃದ್ಧ: ಬಿಸಿಲಿನಿಂದಾಗಿ ಬಿದ್ದರೂ ಎತ್ತದ ಜನ!
ಶೇಕಡಾ 90 ರಷ್ಟು ಸುಟ್ಟ ಗಾಯಗಳಾಗಿದ್ದ ಅವರ ಸ್ಥಿತಿ ಗಂಭೀರವಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟರು.
ಮೊದಲು ಗಂಡನ ಮೇಲೆ ಅನುಮಾನ ಬಂದಿತ್ತು. ಆದರೆ ಇದರಲ್ಲಿ ಅವರ ತಪ್ಪು ಏನೂ ಇಲ್ಲ ಎಂದು ಜ್ಯೋತಿ ಅವರ ಸಹೋದರ ಹೇಳಿಕೆ ನೀಡಿದ್ದಾರೆ. ಇದು ದುಗುಡದ ನಿರ್ಧಾರ ಎಂದು ಸಾಬೀತಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ದಂಪತಿಗೆ ಮದುವೆಯಾಗಿ ಏಳು ವರ್ಷಗಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ(ಏಜೆನ್ಸೀಸ್​)
ಎಲ್ಲವೂ ಮೋದಿಗಾಗಿ: 5 ಕಿ.ಮೀ ಆಟೋ ಪ್ರಯಾಣಕ್ಕೆ ಕೇವಲ ಒಂದೇ ರೂಪಾಯಿ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:four + ten =
Remember me
