ಲಖನೌ:ಮಹಿಳಾ ಕಾರ್ಮಿಕ ಅಧಿಕಾರಿಯೊಬ್ಬರ ವಿರುದ್ಧ ಬರೋಬ್ಬರಿ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆಯುವುದರೊಂದಿಗೆ ಅಧಿಕಾರಿಯ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿವೆ.
ಇದೇ ಸಂದರ್ಭದಲ್ಲಿ ಮಹಿಳಾ ಅಧಿಕಾರಿ ತಾಳ್ಮೆ ಕಳೆದುಕೊಂಡು, ರೆಕಾರ್ಡ್​ ಮಾಡುತ್ತಿದ್ದ ಮೊಬೈಲ್​ ಫೋನ್​ ಅನ್ನು ಕಸಿದುಕೊಂಡು ಒಡೆದು ಹಾಕಿದ್ದಾರೆ. ಅಲ್ಲದೆ, ಅವಾಚ್ಯ ಪದಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಅಧಿಕಾರಿಯ ವರ್ತನೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಆಕೆಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.
ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ನಡೆಯಿತು. ಅಧಿಕಾರಿಯ ಗುರುತನ್ನು ಬಹಿರಂಗಪಡಿಸಿಲ್ಲ. ಆದರೆ, ಆಕೆಯ ಅನುಚಿತ ವರ್ತನೆ 37 ಸೆಕೆಂಡ್​ ವಿಡಿಯೋದಲ್ಲಿ ಸೆರೆಯಾಗಿದೆ. ಸರ್ಕಾರಿ ಕೆಲಸ ಮಾಡಿಕೊಡಲು ಮಹಿಳಾ ಅಧಿಕಾರಿಯು ಹಣಕ್ಕೆ ಬೇಡಿಕೆ ಇಡುತ್ತಿರುವ ದೃಶ್ಯವನ್ನು ಗೂಡು ವ್ಯಾಪಾರಿ ಒಬ್ಬ ರೆಕಾರ್ಡ್​ ಮಾಡುತ್ತಿದ್ದರು. ಈ ವೇಳೆ ವಿಡಿಯೋ ಏಕೆ ಮಾಡುತ್ತೀಯ ಎಂದು ಅಧಿಕಾರಿ ಪ್ರಶ್ನೆ ಮಾಡಿದ್ದಾರೆ. ಆದರೂ, ವಿಡಿಯೋ ರೆಕಾರ್ಡ್​ ಮುಂದುವರಿಸಿದ್ದಕ್ಕೆ ಆಕ್ರೋಶಗೊಂಡ ಅಧಿಕಾರಿ ಮೊಬೈಲ್​ ಕಸಿದುಕೊಂಡು ಪೀಸ್​ ಪೀಸ್​ ಮಾಡಿದ್ದಾರೆ.
Meet Labour Officer Binita Singh frm Baghpat UP who snatched the phone of one Upendra Chauhan for recording video of the alleged demand of 1 lakh bribe by the team of the Labour Office who arrived at his premises for an inspection.pic.twitter.com/ZgEAwJQlhR
— NCMIndia Council For Men Affairs (@NCMIndiaa)June 8, 2023

ಈ ಘಟನೆಯ ನಂತರ, ಗೂಡು ವ್ಯಾಪಾರಿ ತಕ್ಷಣವೇ ಬಾಗ್​ಪತ್​ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಗೆ ದೂರು ಸಲ್ಲಿಸಿದ್ದಾರೆ. ಮಹಿಳಾ ಕಾರ್ಮಿಕ ಅಧಿಕಾರಿ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಲಂಚದ ಯತ್ನ ಮತ್ತು ಸಾಕ್ಷ್ಯ ನಾಶ ಪ್ರಕರಣ ದಾಖಲಾಗಿದೆ. ಆರೋಪಗಳ ಸತ್ಯಾಸತ್ಯತೆ ತಿಳಿಯಲು ಅಧಿಕಾರಿಗಳು ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವುದು ಅನಿವಾರ್ಯವಾಗಿದೆ. ಆಡಳಿತದಲ್ಲಿ ಸಾರ್ವಜನಿಕ ನಂಬಿಕೆಯನ್ನು ಪುನಃಸ್ಥಾಪಿಸಲು ಮತ್ತು ಭ್ರಷ್ಟಾಚಾರವನ್ನು ಎದುರಿಸುವ ಬದ್ಧತೆಯನ್ನು ಪ್ರದರ್ಶಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್​ ಕಚೇರಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕಿದೆ.(ಏಜೆನ್ಸೀಸ್​)
27 ವರ್ಷಗಳ ಬಳಿಕ ಭಾರತಕ್ಕೆ ಲಭಿಸಿದ ವಿಶ್ವ ಸುಂದರಿ ಸ್ಪರ್ಧೆ ಆತಿಥ್ಯ

ಅಪ್ರಾಪ್ತ ವಯಸ್ಸಿನ ಸಹೋದರಿಯರನ್ನು ಮದುವೆಯಾಗಲು ಗುರುತು ಮರೆಮಾಚಿದ ಯುವಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 8 =
Remember me
