ಆಲಪ್ಪುಳ (ಕೇರಳ):ದೇವಸ್ಥಾನಕ್ಕೆಂದು ಮನೆಯಿಂದ ಹೊರಟ ಮಹಿಳೆಯೊಬ್ಬಳು ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಆಲಪ್ಪುಳದ ಥಾಮರಕ್ಕುಳಂ ಬಳಿಯ ಪುತುಚಿರಾದಲ್ಲಿ ನಡೆದಿದೆ.
ವಿಜಯಲಕ್ಷ್ಮೀ (33) ಮೃತ ದುರ್ದೈವಿ. ಥಾರಮಕ್ಕುಳಂ ನಿವಾಸಿ ಪ್ರದೀಪ್​ ಎಂಬುವರ ಪತ್ನಿ. ವಿಜಯಲಕ್ಷ್ಮೀ ಗುರುವಾರ ಬೆಳಗ್ಗೆ 5.30ಕ್ಕೆ ಮನೆಯಿಂದ ಹೊರಟಳು. ಹೋಗುವ ಮುನ್ನ ಚಿರಾಕ್ಕಲ್​ನಲ್ಲಿರುವ ದೇವಸ್ಥಾನಕ್ಕೆ ತೆರಳುತ್ತಿರುವುದಾಗಿ ತಿಳಿಸಿದಳು. ಆದರೆ, ಯಾವಾಗ ಸರಿಯಾದ ಸಮಯಕ್ಕೆ ಮನೆಗೆ ಮಹಿಳೆ ಹಿಂದಿರುಗಲಿಲ್ಲ ಆಕೆಯ ಕುಟುಂಬ ಹುಡುಕಾಡಲು ಆರಂಭಿಸಿತು.
ದೇವಸ್ಥಾನದ ಮುಂದೆ ಸ್ಕೂಟರ್​ ನಿಲ್ಲಿಸಿ, ಕೊಳವೊಂದರ ಬಳಿ ಚಪ್ಪಲಿ ಬಿಟ್ಟಿರುವುದು ಪತ್ತೆಯಾಯಿತು. ಅಲ್ಲದೆ, ಅದೇ ದಿನ 7.30ರ ಸುಮಾರಿಗೆ ವಿಜಯಲಕ್ಷ್ಮೀ ಮೃತದೇಹವು ಸಹ ಕೊಳದಲ್ಲಿ ಪತ್ತೆಯಾಯಿತು.
ಇದನ್ನೂ ಓದಿರಿ:Web Exclusive | ಕಾಲ ಬದಲಾದರೂ ಕತ್ತೆಯ ಕಾಲು ಹಿಡಿಯೋದು ತಪ್ಪಲಿಲ್ಲ; ಈ ಊರಿನ ಜನ ರಸ್ತೆ ಬಿಟ್ಟು ಬೇರೇನೂ ‘ವರ’ ಕೇಳುವುದಿಲ್ಲ!
ವಿಜಯಲಕ್ಷ್ಮೀ ಕಳೆದ 4 ವರ್ಷಗಳಿಂದ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಅನೇಕ ಸರ ಎಗರಿಸಿದ ಪ್ರಕರಣಗಳಲ್ಲಿ ಪ್ರದೀಪ್​ನನ್ನು ಪೊಲೀಸರು ಬಂಧಿಸಿದ ನಂತರ ವಿಜಯಲಕ್ಷ್ಮೀ ತನ್ನ ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳಿದ್ದಳು. ಪ್ರದೀಪ್​ನನ್ನು ಮತ್ತೆ ಪೊಲೀಸರು ಸರಗಳ್ಳತನ ಪ್ರಕರಣದಲ್ಲಿ ಬಂಧಿಸಿದಾಗ ಕಳೆದ ತಿಂಗಳಷ್ಟೇ ತವರಿಗೆ ಮರಳಿದ್ದಳು.
ಆಲಪ್ಪುಳದ ಪವುಂಬಾದಲ್ಲಿರುವ ತನ್ನ ಮನೆಯಲ್ಲಿ ವಿಜಯಲಕ್ಷ್ಮೀ ಉಳಿದುಕೊಂಡಿದ್ದಳು. ವಿಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ಬಾಗಲಕೋಟೆ: ಎಸಿಬಿ ದಾಳಿಯಿಂದ ಕಳಚಿಬಿತ್ತು ಎಫ್​ಡಿಎ ಸಿಬ್ಬಂದಿ, ಅಧಿಕಾರಿಗಳ ಮುಖವಾಡ!

VIDEO| ಇಂಥಾ ಅಂಪೈರ್​ ನೀವು ಎಲ್ಲೂ ನೋಡಿರಲ್ಲ: ವಾವ್​ ಎನಿಸುವ ವಿಡಿಯೋ ಇದು!

ಗಿನ್ನೆಸ್ ದಾಖಲೆಯ ಹಾದಿಯಲ್ಲಿ ಹುಬ್ಬಳ್ಳಿಯ ಬ್ಯೂಟಿಷಿಯನ್ ಶೈಲಜಾ ಬಗಾಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + fourteen =
Remember me
