ನವದೆಹಲಿ:ಯಾರಿಗೋ ಸೇರಿದ ಸೈಟನ್ನು ಇನ್ಯಾರಿಗೋ ತೋರಿಸಿ ಹಣ ಪಡೆದು ಮೋಸ ಮಾಡಿದ ಉದಾಹರಣೆಗಳು ಬೇಕಾದಷ್ಟಿವೆ. ಇದು ಕೂಡ ಅಂಥದ್ದೇ ಪ್ರಕರಣವಾಗಿದ್ದರೂ ಸ್ವಲ್ಪ ವಿಭಿನ್ನವಾಗಿದೆ. ಅರ್ಥಾತ್ ಕುದುರೆಯ ಫೋಟೋ ತೋರಿಸಿ ಇದು ಸಲ್ಮಾನ್​ ಖಾನ್​ ಕುದುರೆ ಎಂದು ನಂಬಿಸಿದ್ದ ವಂಚಕರು, ಮಹಿಳೆಯೊಬ್ಬರಿಂದ 12 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ್ದಾರೆ.
ರಾಜಸ್ಥಾನದ ಜೋಧಪುರದ ಸಂತೋಷ ಭಾಟಿ ಎಂಬಾಕೆಗೆ ಕುದುರೆಯೊಂದರ ಜತೆ ಸಲ್ಮಾನ್​ ಖಾನ್​ ಇರುವ ಫೋಟೋ ತೋರಿಸಿದ್ದ ಮೂವರು, ಖಾನ್​ ಈ ಕುದುರೆ ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ತಾವು ಸಲ್ಮಾನ್​ ಖಾನ್​ಗೆ ಆಪ್ತರು ಎಂಬಂತೆ ಬಿಂಬಿಸಿಕೊಂಡಿರುವ ಅವರು ಈ ಹಿಂದೆಯೂ ಸಲ್ಮಾನ್​​ ಖಾನ್​ಗೆ ಸೇರಿದ್ದ ಹಲವಾರು ಕುದುರೆಗಳನ್ನು ಮಾರಾಟ ಮಾಡಿದ್ದಾಗಿಯೂ ಹೇಳಿದ್ದಾರೆ.
ಇದನ್ನು ನಂಬಿದ ಮಹಿಳೆ 11 ಲಕ್ಷ ರೂ. ನಗದು ಹಾಗೂ 1 ಲಕ್ಷ ರೂ. ಚೆಕ್​ ಸೇರಿ ಒಟ್ಟು 12 ಲಕ್ಷ ರೂ. ನೀಡಿದ್ದರು. ಆಗಸ್ಟ್​ನಲ್ಲಿ ಈ ಹಣ ನೀಡಲಾಗಿದ್ದರೂ ಕುದುರೆಯನ್ನು ನೀಡದ್ದರಿಂದ ಪೊಲೀಸರ ಮೊರೆಹೋದ ಮಹಿಳೆ ದೂರು ನೀಡಿದ್ದರು. ಆದರೆ ಪೊಲೀಸರು ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳದ್ದರಿಂದ ತೀವ್ರ ಅಸಮಾಧಾನಕ್ಕೆ ಒಳಗಾಗಿರುವ ಮಹಿಳೆ, ಪ್ರಕರಣ ಸಂಬಂಧ ಸೂಕ್ತ ತನಿಖೆಗೆ ಆದೇಶಿಸುವಂತೆ ಕೋರಿ ರಾಜಸ್ಥಾನ ಹೈಕೋರ್ಟ್​ ಮೊರೆ ಹೋಗಿದ್ದರು. ಈ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಇತ್ಯರ್ಥಗೊಳಿಸಿರುವ ಹೈಕೋರ್ಟ್, ಕಾನೂನು ಪ್ರಕಾರ ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಿತ ಡಿಸಿಪಿಗೆ ಸೂಚನೆ ನೀಡಿದೆ. (ಏಜೆನ್ಸೀಸ್)
ತುಂಬು ಗರ್ಭಿಣಿಯನ್ನು ಜೀವಂತ ಸುಟ್ಟ, ಮಾಡಬಾರದ್ದನ್ನು ಮಾಡಿದ್ದ ಗಂಡ!

ನನ್ನಿಂದ ಯಾರಿಗೂ ಮೋಸ ಆಗಲ್ಲ, ದಯವಿಟ್ಟು ನನ್ನ ನಂಬಿ ಎಂದು ಗೋಗರೆದವ ಕಿಡ್ನಿಯನ್ನೇ ಮಾರಾಟಕ್ಕಿಟ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + fifteen =
Remember me
