ನವದೆಹಲಿ:ಗಂಡನ ಕೊಲೆಗೆ ಸಂಚು ರೂಪಿಸಿದಲ್ಲದೆ, ಪ್ರಕರಣದ ತನಿಖೆಯನ್ನು ದಿಕ್ಕ ತಪ್ಪಿಸಲು ಯತ್ನಿಸಿದ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಪ್ರಿಯಕರನ್ನು ದೆಹಲಿ ಪೊಲೀಸರು ಕಳೆದ ಗುರುವಾರ ಬಂಧಿಸಿದ್ದಾರೆ.
41 ವರ್ಷದ ಬಬಿತಾ ಎಂಬಾಕೆ ತನಗಿಂತ ವಯಸ್ಸಿನಲ್ಲಿ 18 ವರ್ಷ ಚಿಕ್ಕವನಾದ ರೋಹನ್​ (23) ಜತೆ ವಿವಾಹೇತರ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಆರೋಪಿ ರೋಹನ್​, ದಕ್ಷಿಣ ದೆಹಲಿಯ ಆ್ಯಂಡ್ರಿವ್ಸ್​ ಗಂಜ್​ ಏರಿಯಾದಲ್ಲಿರುವ ಬಿಎಸ್​ಇಎಸ್​ ನ ಗುತ್ತಿಗೆ ಚಾಲಕ ಮೇಲೆ ಕಳೆದ ಬುಧವಾರ ಗುಂಡಿನ ದಾಳಿ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿರಿ:ಪರಿಸ್ಥಿತಿ ಕೈ ಮೀರಲು ಬಿಡಬಾರದು: ಪ್ರಶಾಂತ್​ ಸಂಬರಗಿಗೆ​ ಕಿಚ್ಚ ಸುದೀಪ್​ ಖಡಕ್​ ವಾರ್ನಿಂಗ್​..!
ಫೈರಿಂಗ್​ ಘಟನೆ ಬುಧವಾರ ಬೆಳಗ್ಗೆ ಸುಮಾರು 9 ಗಂಟೆಗೆ ನಡೆದಿತ್ತು. ಇದರ ಬೆನ್ನಲ್ಲೇ ದೆಹಲಿ ಪೊಲೀಸರಿಗೆ ದೂರವಾಣಿ ಕರೆಯೊಂದು ಬರುತ್ತದೆ. ಆ್ಯಂಡ್ರಿವ್ಸ್​ ಗಂಜ್​ನ ಡಿಫೆನ್ಸ್​ ಕಾಲನಿಯ ಎಲೆಕ್ಟ್ರಿಸಿಟಿ ಗ್ರಿಡ್​ ಬಳಿ ಕಾರಿನ ಒಳಗಿದ್ದ ವ್ಯಕ್ತಿಯೊಬ್ಬನ ಮೇಲೆ ಬೈಕ್​ ಸವಾರನೊಬ್ಬ ಗುಂಡಿನ ದಾಳಿ ಮಾಡಿದ್ದಾನೆಂಬ ತಕ್ಷಣದ ಮಾಹಿತಿ ಪೊಲೀಸರಿಗೆ ಸಿಗುತ್ತದೆ. ತಕ್ಷಣ ಘಟನಾ ಸ್ಥಳಕ್ಕೆ ತೆರಳುವ ಪೊಲೀಸರು ಫೈರಿಂಗ್​ನಿಂದ ಕುತ್ತಿಗೆ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತನನ್ನು ದೆಹಲಿ ಏಮ್ಸ್​ಗೆ ದಾಖಲಿಸುತ್ತಾರೆ.
ಸಂತ್ರಸ್ತನ ವಿರುದ್ಧ ನನಗೆ ಹಳೆಯ ದ್ವೇಷವೊಂದಿತ್ತು. ಅದರ ಪ್ರತಿಕಾರವಾಗಿ ನಾನು ಆತನಿಗೆ ಗುಂಡು ಹಾರಿಸಿದೆ ಎಂದು ಆರೋಪಿ ಹೇಳಿಕೆ ನೀಡುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸುತ್ತಾನೆ. ಆದರೆ, ಆತನ ಹೇಳಿಕೆಯಿಂದ ಸಂತೃಪ್ತಗೊಳ್ಳದ ಪೊಲೀಸರು ತನಿಖೆ ಮುಂದುವರಿಸಿದಾಗ ಆರೋಪಿಯು 45 ವರ್ಷದ ಸಂತ್ರಸ್ತ ವ್ಯಕ್ತಿಯ ಪತ್ನಿ ಬಬಿತಾಳೊಂದಿಗೆ ವಿವಾಹೇತರ ಸಂಬಂಧ ಹೊಂದಿರುವುದು ಗೊತ್ತಾಗುತ್ತದೆ.
ಇದನ್ನೂ ಓದಿರಿ:ಬಾಯ್​ಫ್ರೆಂಡ್​ ಜತೆ ಏಕಾಂತದಲ್ಲಿದ್ದ ಯುವತಿಗೆ ಹಿಗ್ಗಾಮುಗ್ಗ ಥಳಿತ: ದುಪ್ಪಟ್ಟ ಕಿತ್ತೆಸೆದ ಕಿರಾತಕರು!
ಕಳೆದ ಮೂರು ತಿಂಗಳಿಂದ ಇಬ್ಬರ ನಡುವೆ ವಿವಾಹೇತರ ಸಂಬಂಧ ಮುಂದುವರಿದುಕೊಂಡು ಬಂದಿರುತ್ತದೆ. ಜನವರಿ 1ರಂದು ಬಾಯ್​ಫ್ರೆಂಡ್​ ಜತೆ ರೆಡ್ ಹ್ಯಾಂಡ್​ ಆಗಿ ಬಬಿತಾ ಗಂಡನ ಕೈಯಲ್ಲಿ ಸಿಕ್ಕಿ ಬೀಳುತ್ತಾಳೆ. ಈ ವೇಳೆ ಸಂತ್ರಸ್ತ ತನ್ನ ಪತ್ನಿಗೆ ಹಿಗ್ಗಾಮುಗ್ಗ ಥಳಿಸಿರುತ್ತಾನೆ. ಇದಾದ ಬಳಿಕ ಬಬಿತಾ ಮತ್ತು ರೋಹನ್​ ಸಂತ್ರಸ್ತನನ್ನು ಕೊಲ್ಲಲು ಸಂಚು ರೂಪಿಸುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಪ್ರಿಯಕರನೊಂದಿಗೆ ಓಡಿ ಬಂದಿದ್ದ ಯುವತಿಯ ದುರಂತ ಅಂತ್ಯ: ನಿಗೂಢ ಸ್ಥಿತಿಯಲ್ಲಿ ಮೃತದೇಹ ಪತ್ತೆ!

ಬಾಯ್​ಫ್ರೆಂಡ್​ ಮುಖವಾಡ ಕಳಚಿಬಿದ್ದ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವತಿ..!

ಗಂಡನನ್ನು ಕುರ್ಚಿಗೆ ಕಟ್ಟಿ, ಸೆಕ್ಸ್​ ಮಾಡಿ ಕೊಲೆ ಮಾಡಿದ ಐದನೇ ಹೆಂಡತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + fourteen =
Remember me
