ಕನೌಜ್​:ಓರ್ವ ಮಹಿಳೆ ಮತ್ತು ವಿಕಲಾಂಗ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ತಲೆ ಬೋಳಿಸಿ, ಚಪ್ಪಲಿಯಿಂದ ಮಾಡಿದ ಹಾರವನ್ನು ಹಾಕಿ ಮೆರವಣಿಗೆ ಮಾಡಿ ಅವಮಾನಿಸಿರುವ ಘಟನೆ ಉತ್ತರ ಪ್ರದೇಶದ ಕನೌಜ್​​​​ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
37 ವರ್ಷದ ಸಂತ್ರಸ್ತ ಮಹಿಳೆಯ ಸಂಬಂಧಿಕರಿಂದಲೇ ಬುಧವಾರ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ಎರಡು ತಿಂಗಳ ಹಿಂದೆ ಸಂತ್ರಸ್ತ ಮಹಿಳೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಾದ ಬಳಿಕ ಮಹಿಳೆಯ ಸ್ನೇಹಿತನಾಗಿದ್ದ 40 ವರ್ಷ ವಿಕಲಾಂಗ ವ್ಯಕ್ತಿ ಆಕೆ ಸಹಾಯ ಮಾಡುತ್ತಿದ್ದ. ಆದರೆ, ಇಬ್ಬರ ಸ್ನೇಹ ಮಹಿಳೆಯ ಕುಟುಂಬಕ್ಕೆ ಇಷ್ಟವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಇನ್ಮುಂದೆ ನಾವು ಇಬ್ಬರಲ್ಲ ಮೂವರು: ಮೊದಲ ಮಗುವಿನ ನಿರೀಕ್ಷೆಯಲ್ಲಿ ವಿರೂಷ್ಕಾ ದಂಪತಿ
ಇಷ್ಟಕ್ಕೆ ಸುಮ್ಮನಾಗದ ಮಹಿಳೆಯ ಸಂಬಂಧಿಕರು ಇಬ್ಬರನ್ನು ಸೆರೆಹಿಡಿದು ತಲೆ ಬೋಳಿಸಿ, ಮೆರವಣಿಗೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮಹಿಳೆಯ ಇಬ್ಬರು ಸಂಬಂಧಿಕರನ್ನು ಬಂಧಿಸಲಾಗಿದ್ದು, ಒಟ್ಟು 8 ಮಂದಿಯ ವಿರುದ್ಧ ಎಫ್​ಐಆರ್​ ದಾಖಲಾಗಿದೆ.(ಏಜೆನ್ಸೀಸ್​)
ಡ್ರಗ್ಸ್‌ ನಂಟಲ್ಲಿ ಸ್ಯಾಂಡಲ್‌ವುಡ್‌! ಕೆಲ ನಟರು, ಸಂಗೀತ ನಿರ್ದೇಶಕರ ಮೇಲೆ ಎನ್‌ಸಿಬಿ ನಿಗಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
