ಚೆನ್ನೈ:ತಾನು ನೋಡಿದ ಯುವಕನನ್ನು ಮದುವೆಯಾಗಲು ಒಪ್ಪದ ಮಗಳನ್ನು ತಾಯಿಯೊಬ್ಬಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಿನ್ನೆ (ನ.23) ನಡೆದಿದೆ.
ಪಿ. ಅರುಣಾ (19) ಕೊಲೆಯಾದ ಯುವತಿ. ಈಕೆ ಪಿಚೈ ಮತ್ತು ಆರುಮುಗ ಖಣಿ ದಂಪತಿಯ ಪುತ್ರಿ. ಮಗಳನ್ನು ಕೊಲೆ ಮಾಡಿದ ಬಳಿಕ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮೃತ ಅರುಣಾಳ ತಂದೆ ಮತ್ತು ಸಹೋದರ ಚೆನ್ನೈನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅರುಣಾ ಕೊಯಮತ್ತೂರಿನಲ್ಲಿ ನರ್ಸಿಂಗ್​ ಓದುತ್ತಿದ್ದಳು. ಆರು ತಿಂಗಳ ಹಿಂದೆ ಮನೆಗೆ ಮರಳಿದ್ದಳು. ಈ ವೇಳೆ ಕುಟುಂಬ ಅರುಣಾಗೆ ವರನನ್ನು ನೋಡಿದ್ದರು. ಆಕೆಯ ತಾಯಿಯೇ ವರನನ್ನು ಗೊತ್ತುಪಡಿಸಿದ್ದರು. ಆದರೆ, ಮದುವೆ ಆಗಲು ಅರುಣಾ ವಿರೋಧಿಸಿದ್ದಳು.
ಮದುವೆಗೆ ವಿರೋಧಿಸಿದ ಬಳಿಕ ತಾಯಿ ಮತ್ತು ಮಗಳ ನಡುವೆ ವಾಗ್ವಾದ ನಡೆದಿದೆ. ತಾಳ್ಮೆ ಕಳೆದುಕೊಂಡ ತಾಯಿ, ಮಗಳ ಕುತ್ತಿಗೆ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಇದಾದ ಬಳಿ ತಾನೂ ವಿಷಕಾರಿ ಪೌಡರ್​ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ, ಸ್ಥಳೀಯರು ಆಕೆಯನ್ನು ತಡೆದು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)

ಅನಾಥ ಮಕ್ಕಳ ಶಿಕ್ಷಣಕ್ಕೆ ಉಳಿತಾಯ ಹಣ ನೀಡಿದ ಬಾಲಕ! ಜಿಲ್ಲಾಧಿಕಾರಿ ಅಭಿನಂದಿಸಿದ ರೀತಿಗೆ ನೆಟ್ಟಿಗರು ಫಿದಾ

ಒಟಿಟಿಯಲ್ಲಿ ಬದಲಾದ ‘ವರಾಹ ರೂಪಂ…’ ಹಾಡಿನ ಟ್ಯೂನ್; ಕೇಳುಗರಿಂದ ಮಿಶ್ರ ಪ್ರತಿಕ್ರಿಯೆ!

ವಿಚ್ಛೇದಿತ ಉದ್ಯಮಿ ಜತೆ ಮಾನುಷಿ ಚಿಲ್ಲರ್​ ಡೇಟಿಂಗ್​! ಸಂಬಂಧ ಗುಟ್ಟಾಗಿ ಇಡುವ ವಿಶ್ವ ಸುಂದರಿಯ ಪ್ರಯತ್ನ ವಿಫಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 16 =
Remember me
