
ತಿರುವನಂತಪುರಂ: ಪತಿಯ ಒತ್ತಾಯಕ್ಕೆ ಮಣಿದು ಗರ್ಭಿಣಿ ಪತ್ನಿಯೊಬ್ಬಳು ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡ ಪರಿಣಾಮ ಆಕೆ ಮತ್ತು ಶಿಶು ದುರಂತ ಅಂತ್ಯ ಕಂಡ ವಿಲಕ್ಷಣ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಶೆಮೀರಾ ಎಂದು ಗುರುತಿಸಲಾಗಿದೆ. ನಯಾಸ್‌ಗೆ ಎರಡನೇ ಪತ್ನಿಯಾಗಿರುವ ಶೆಮೀರಾಗೆ ಈಗಾಗಲೇ ಮೂರು ಬಾರಿ ಸಿಸೇರಿಯನ್‌ ಕೂಡ ಆಗಿದೆ. ಕೊನೆಯ ಹೆರಿಗೆಯಾಗಿ ಕೇವಲ ಒಂದು ವರ್ಷವಾಗಿದೆ. ಪತಿಯ ಹಠಕ್ಕೆ ಶೆಮೀರಾ ಬಲಿಯಾಗಿದ್ದಾಳೆ.
ತುಂಬು ಗರ್ಭಿಣಿಯಾಗಿದ್ದ ಶೆಮೀರಾಗೆ ಚಿಕಿತ್ಸೆ ಕೊಡಿಸಲು ಸ್ಥಳೀಯ ನಿವಾಸಿಗಳು, ಆಶಾ ಕಾರ್ಯಕರ್ತೆಯರು, ವಾರ್ಡ್ ಕೌನ್ಸಿಲರ್‌ಗಳು ಹರಸಾಹಸ ಪಟ್ಟರೂ ಪತಿ ಒಪ್ಪಲಿಲ್ಲ ಎಂಬುದು ತಿಳಿದುಬಂದಿದೆ. ಶೆಮೀರಾಗೆ ಮನೆಯಲ್ಲಿ ಹೆರಿಗೆ ಆಗಲು ಇಷ್ಟವಿರಲಿಲ್ಲ. ಆದರೆ ಪತಿಯ ಮಾತನ್ನು ಧಿಕ್ಕರಿಸಿ ಹೋಗಲು ಆಕೆ ಹಿಂಜರಿಯುತ್ತಿದ್ದಳು. ಯಾಕೆಂದರೆ ಈಕೆಗೆ ಪತಿ ತನ್ನನ್ನು ಬಿಟ್ಟು ಹೋಗುವನೆಂಬ ಭಯವಿತ್ತು. ಹೀಗಾಗಿ ಮನೆಯಲ್ಲೇ ಹೆರಿಗೆ ಮಾಡಿಕೊಳ್ಳಲು ಒಪ್ಪಿದ್ದಳು ಎಂದು ಶೆಮೀರಾಳನ್ನು ನೋಡಿಕೊಳ್ಳುತ್ತಿದ್ದ ದೀಪಿಕಾ ಎನ್ನುವವರು ತಿಳಿಸಿದ್ದಾರೆ.
ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಂತೆ ನೆರೆಹೊರೆಯವರು ಹಾಗೂ ಆರೋಗ್ಯ ಕಾರ್ಯಕರ್ತೆಯವರು ಒತ್ತಾಯಿಸಿದಾಗ, ʼಹೆಂಡತಿಯನ್ನು ಹೇಗೆ ನೋಡಿಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ’ ಎಂದು ನಯಾಸ್ ಗರಂ ಆಗಿದ್ದಾನಂತೆ.
ಇತ್ತ ಮನೆಯಲ್ಲಿಯೇ ಶೆಮೀರಾ ಸುಮಾರು 3 ಗಂಟೆಗಳ ಕಾಲ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದಳು. ಈ ನಡುವೆ ಆಕೆಗೆ ತೀವ್ರ ರಕ್ತಸ್ರಾವವಾಗಿದೆ. ಕೊನೆಗೆ ನೆರೆಹೊರೆಯವರು ಬಂದು ಬಲವಂತವಾಗಿ ಅಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕಳುಹಿಸಿದರು. ಆದರೆ ಅಲ್ಲಿ ತಾಯಿ- ಮಗು ಇಬ್ಬರೂ ಮೃತಪಟ್ಟಿದ್ದಾರೆ.
ಶೆಮೀರಾ ಹಿರಿಯ ಮಗನಿಗೆ 18 ವರ್ಷ ವಯಸ್ಸಾಗಿದೆ. ಮೂವರು ಮಕ್ಕಳನ್ನು ಕೆಲಕಾಲ ಮೊದಲ ಪತ್ನಿಯೊಂದಿಗೆ ಬಿಟ್ಟಿದ್ದಳು. ತೀರಾ ಬಡ ಕುಟುಂಬಕ್ಕೆ ಸೇರಿದವಳಾಗಿದ್ದರಿಂದ ಪತಿ ತನ್ನನ್ನು ಬಿಟ್ಟು ಹೋದರೆ ತಾನು ಮತ್ತು ತನ್ನ ಮಕ್ಕಳ ಗತಿ ಏನು ಎಂಬ ಆತಂಕ ಆಕೆಗಿತ್ತು ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
