ಒಡಿಶಾ:ಭಾನುವಾರ (ಫೆ.18) ರಾತ್ರಿ ಅಕ್ರಮ ಜೂಜಾಟದ ಅಡ್ಡೆಯನ್ನು ಮುಚ್ಚಲು ಯತ್ನಿಸಲು ಮುಂದಾದ ಮಹಿಳಾ ಪೊಲೀಸ್ ಹಾಗೂ ಇತರೆ​ ಸಿಬ್ಬಂದಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳ ಗ್ಯಾಂಗ್​ವೊಂದು ಅಧಿಕಾರಿಯ ಮೇಲೆ ಹಲ್ಲೆ ನಡೆಸಿ, ಗೂಡಂಗಡಿಯೊಳಗೆ ಬೀಗ ಹಾಕಿ ಬಂಧಿಸಿಟ್ಟ ಘಟನೆ ಒಡಿಶಾದ ಬಾಲ್​ಸೋರ್​ನಲ್ಲಿ ವರದಿಯಾಗಿದೆ.
ಇದನ್ನೂ ಓದಿ:‘ಪ್ರೇಕ್ಷಕರ ದುಡ್ಡು, ಸಮಯ ವ್ಯರ್ಥ ಆಗಬಾರದು’; ಸಿನಿಪ್ರೇಕ್ಷಕರ ಬಗ್ಗೆ ಸ್ಟೈಲಿಶ್ ಸ್ಟಾರ್​ ಹೇಳಿದ್ದಿಷ್ಟು
ತಲಸರಿ ಮೆರೈನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್-ಇನ್-ಚಾರ್ಜ್ (IIC) ಚಂಪಾಬತಿ ಸೋರೆನ್, ಉದಯ್‌ಪುರ ಗ್ರಾಮದ ಅಂಗಡಿಯೊಂದರಲ್ಲಿ ಜೂಜಾಟ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕಿದ್ದಾರೆ. ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಬೇಕು ಎಂದು ಮುಂದಾದ ವೇಳೆ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ವರದಿಗಳ ಪ್ರಕಾರ, ಮಾತಿನ ಚಕಮಕಿ ದೈಹಿಕ ಘರ್ಷಣೆಗೆ ಕಾರಣವಾಗಿದ್ದು, ದುಷ್ಕರ್ಮಿಗಳು ಐಐಸಿ ಸೊರೆನ್ ಅವರನ್ನು ಹಲ್ಲೆಗೈದು, ಅಂಗಡಿಯೊಳಗೆ ಬೀಗ ಹಾಕಿ ಕೂಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಗಸ್ತು ವಾಹನದ ಚಾಲಕ ಸುಧನ್ಸು ಮೊಹಾಂತಿ ಕೂಡ ಗಾಯಗೊಂಡಿದ್ದು, ಸ್ಥಳದಲ್ಲೇ ರಕ್ತಸ್ರಾವದಿಂದ ಕುಸಿದಿದ್ದಾರೆ. ಐಐಸಿ ಸೋರೆನ್ ಮತ್ತು ಮೊಹಾಂತಿ ಅವರನ್ನು ರಕ್ಷಿಸಲು ಭೋಗರೈ ಪೊಲೀಸ್ ಠಾಣೆ ಮತ್ತು ಚಂದನೇಶ್ವರ ಪೊಲೀಸ್ ಔಟ್‌ಪೋಸ್ಟ್‌ನಿಂದ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕಳುಹಿಸಲಾಯಿತು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪರೀಕ್ಷೆ ವೇಳೆ ನಿದ್ರೆ ತಪ್ಪಿಸಲು ಉಗ್ರರು ಬಳಸುವ ಮಾತ್ರೆ ಮೊರೆ ಹೋದ ವಿದ್ಯಾರ್ಥಿಗಳು
“ತಲಸರಿ ಮೆರೈನ್ ಪೊಲೀಸ್ ಠಾಣೆಯ ಐಐಸಿ ಮತ್ತು ಅವರ ಸಿಬ್ಬಂದಿ ಅಕ್ರಮ ಜೂಜು ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ಕೂಡಲೇ ಸ್ಥಳಕ್ಕೆ ತಲುಪಿದಾಗ, ಗಲಾಟೆ ಎದುರಾಗಿ ಆರೋಪಿಗಳಿಂದ ಹಲ್ಲೆಯಾಗಿದೆ. ನಾವು ಕೂಲಂಕುಷವಾಗಿ ವಿಚಾರಣೆ ನಡೆಸುತ್ತಿದ್ದೇವೆ ಮತ್ತು ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ” ಎಂದು ಜಲೇಶ್ವರ ಎಸ್‌ಡಿಪಿಒ ದಿಲೀಪ್ ಸಾಹು ತಿಳಿಸಿದ್ದಾರೆ,(ಏಜೆನ್ಸೀಸ್).
ಈ ನಟ ಯಾರೆಂದು ಗೊತ್ತಿಲ್ಲದಿದ್ದರೂ ಇವರ ಡೈಲಾಗ್ ಮಾತ್ರ ಪಕ್ಕಾ ನೆನಪಿರುತ್ತೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 5 =
Remember me
