ಹೈದರಾಬಾದ್ :ಪ್ರೀತಿ, ಪ್ರೇಮ, ಸಂಬಂಧಗಳಲ್ಲಿ ಹಾಗೂ ಸಂಬಂಧಗಳನ್ನು ಬೆಸೆಯುವಲ್ಲಿ ಊಟ, ತಿಂಡಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಪಿಜ್ಜಾದ ಕೊನೆಯ ತುಂಡನ್ನು ಯಾರು ತಿನ್ನುತ್ತಾರೆ ಎಂಬುದರ ಬಗ್ಗೆ ಒಡಹುಟ್ಟಿದವರ ಮಧ್ಯೆ ಸ್ಫರ್ಧೆಯಿಂದ ಹಿಡಿದು ಸ್ನೇಹಿತರೊಂದಿಗೆ ಹೊಸ ರೆಸ್ಟೋರೆಂಟ್‌ಗಳಲ್ಲಿ ಭೂರಿ ಭೋಜನ ಸವಿಯಲು ಪ್ರಯತ್ನಿಸುವವರೆಗೆ‘…ಹೀಗೆ ಸಂಬಂಧ ಬೆಸೆಯುವಲ್ಲಿ ಅದು ಊಟ, ತಿಂಡಿ ಪ್ರಮುಖ ಪಾತ್ರ ವಹಿಸುತ್ತದೆ.
ಇದನ್ನೂ ಓದಿ:ಲೈಂಗಿಕ ಕಿರುಕುಳ : ಅಧಿಕಾರಿ ಹಾಗೂ ಮಹಿಳಾ ಸಹೋದ್ಯೋಗಿಯ ಆರೋಪ – ಪ್ರತ್ಯಾರೋಪಗಳೇನು?
ಒಬ್ಬ ಮಹಿಳೆ ತನ್ನ ಅಳಿಯನಿಗೆ ಮನಮೆಚ್ಚಿಸಲು ವಿಶೇಷ ಭಕ್ಷ್ಯಗಳನ್ನು ತಯಾರಿಸಿದ್ದಾರೆ. ಅವರು 67 ಭಕ್ಷ್ಯಗಳೊಂದಿಗೆ ಐದು ಪ್ರಮುಖ ಅಡುಗೆಯನ್ನೂ ಮಾಡಿದ್ದಾರೆ. ಅಡುಗೆ ಲಿಸ್ಟ್​​​ನಲ್ಲಿ ಸ್ವಾಗತ ಪಾನೀಯಗಳು, ಸ್ಟಾರ್ಟರ್​​ಗಳು, ಚಾಟ್, ಮುಖ್ಯ ಊಟ ಮತ್ತು ಸಿಹಿತಿಂಡಿಗಳೂ ಸೇರಿವೆ.ಮಹಿಳೆ ತನ್ನ ಅಡುಗೆ ಐಟಂಗಳನ್ನು ತೋರಿಸುವ ವಿಡಿಯೋ ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಈ ವೀಡಿಯೊವನ್ನು ಟ್ವಿಟರ್ ಬಳಕೆದಾರ ಅನಂತ್ ರೂಪನಗುಡಿ ಶೇರ್ ಮಾಡಿದ್ದು ” ಮನೆಗೆ ಆಗಮಿಸಲಿರುವ ಅಳಿಯನಿಗಾಗಿ 67-ಭಕ್ಷ್ಯಗಳು, ಪ್ರಮುಖ ಐದು ಊಟವನ್ನು ಸಿದ್ಧಪಡಿಸಿದ್ದಾರೆ, ಇದರಲ್ಲಿ ಸ್ವಾಗತ ಪಾನೀಯ, ಸ್ಟಾರ್ಟರ್, ಚಾಟ್, ಪ್ರಮುಖ ಊಟ ಮತ್ತು ಸಿಹಿತಿಂಡಿಗಳು ಸೇರಿವೆ ಎಂದು ಬರೆದಿದ್ದಾರೆ.
https://twitter.com/rananth/status/1280784332144013312?s=20
ವೀಡಿಯೊ ವೈರಲ್ ಆಗಿದ್ದು, 91,300 ಬಾರಿ ವೀಕ್ಷಿಸಲ್ಪಟ್ಟಿದೆ. ಆ ಆಹಾರವನ್ನು ಹೇಗೆ ಅಳಿಯ ಹೇಗೆ ಮುಗಿಸುತ್ತಾರೆ ಎಂದು ಕೆಲವು ನೆಟ್ಟಿಗರು ಆಶ್ಚರ್ಯಪಟ್ಟರೆ, ಇತರರು ಮುಂದಿನ ಜನ್ಮದಲ್ಲಿ ಆ ಮಹಿಳೆಯ ಅಳಿಯನಾಗಿ ಹುಟ್ಟಬೇಕೆಂದು ಬಯಸಿದ್ದಾರೆ.“ಅಳಿಯ ಅದೃಷ್ಟಶಾಲಿ. ಮದುವೆಯಾದ ಪ್ರಥಮ ವರ್ಷ ಇದಾಗಿರಬೇಕು ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. ವಿಡಿಯೋಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಾಲಿಗೆಯಲ್ಲಿ ಗಡ್ಡೆ ಉಂಟಾಗಿ ನರಳುತ್ತಿದ್ದ 6ತಿಂಗಳ ಮಗುವಿಗೆ ಯಶಸ್ವಿ ಸರ್ಜರಿ; ಚೆನ್ನೈ ವೈದ್ಯರ ಸಾಧನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
