ನವದೆಹಲಿ:ಮಾಧವಿ ಪುರಿ ಬುಚ್ ಅವರನ್ನು ಸೆಕ್ಯುರಿಟೀಸ್ ಆಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ನೂತನ ಅಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರ ಸೋಮವಾರ ನೇಮಿಸಿದೆ. ಮಹಿಳೆಯೊಬ್ಬರು ಸೆಬಿ ಮುಖ್ಯಸ್ಥರಾಗಿದ್ದು ಇದೇ ಮೊದಲ ಸಲವಾಗಿದೆ. ಅವರ ಅಧಿಕಾರಾವಧಿ ಮೂರು ವರ್ಷವಾಗಿರುತ್ತದೆ. ಸೆಬಿಯ ಹಾಲಿ ಅಧ್ಯಕ್ಷ ಅಜಯ್ ತ್ಯಾಗಿ ಅವರ ಅಧಿಕಾರಾವಧಿ ಫೆಬ್ರವರಿ 28ರಂದು ಮುಕ್ತಾಯವಾಗಿದ್ದು ಮಾಧವಿ ನೂತನ ಸಾರಥಿಯಾಗಿದ್ದಾರೆ.
ಐಸಿಐಸಿಐ ಸೆಕ್ಯುರಿಟೀಸ್​ನ ಮಾಜಿ ಮುಖ್ಯಸ್ಥರಾದ ಮಾಧವಿ, 2017-2021ರ ನಡುವೆ ಸೆಬಿಯ ಪೂರ್ಣಾವಧಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ಹಿಮಾಚಲ ಪ್ರದೇಶ ಕೇಡರ್​ನ 1984 ಬ್ಯಾಚ್​ನ ಐಎಎಸ್ ಅಧಿಕಾರಿ ತ್ಯಾಗಿ, 2017 ಮಾರ್ಚ್ 1ರಂದು ಸೆಬಿ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದರು. ನಂತರ ಅವರ ಸೇವಾವಧಿಯನ್ನು ಎರಡು ಬಾರಿ ವಿಸ್ತರಿಸಲಾಗಿತ್ತು.
2021ರ ಅಕ್ಟೋಬರ್​ನಲ್ಲಿ ಸೆಬಿ ಅಧ್ಯಕ್ಷ ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸಂಪುಟ ಕಾರ್ಯದರ್ಶಿ ನೇತೃತ್ವದ ಫೈನಾನ್ಶಿಯಲ್ ಸೆಕ್ಟರ್ ರೆಗ್ಯುಲೇಟರಿ ಅಪಾೖಂಟ್ಮೆಂಟ್ಸ್ ಕಮಿಟಿ (ಎಫ್​ಎಸ್​ಆರ್​ಎಎಸ್​ಸಿ) ಅಭ್ಯರ್ಥಿಗಳನ್ನು ಶಾರ್ಟ್​ಲಿಸ್ಟ್ ಮಾಡಿತ್ತು.
ವೈವಿಧ್ಯ ಸೇವೆ:ಮಾರುಕಟ್ಟೆ ನಿಯಂತ್ರಣ ಸಂಸ್ಥೆಯ ನೂತನ ತಂತ್ರಜ್ಞಾನ ಸಮಿತಿಯ ಮುಖ್ಯಸ್ಥರಾಗಿಯೂ ಮಾಧವಿ ಕಾರ್ಯ ನಿರ್ವಹಿಸಿದ್ದಾರೆ. ಐಸಿಐಸಿಐ ಬ್ಯಾಂಕ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದ ಮಾಧವಿ, ಅದರ ಆಡಳಿತ ನಿರ್ದೇಶಕಿ ಹುದ್ದೆಗೆ ಏರಿದ್ದರು. ಐಸಿಐಸಿಐ ಸೆಕ್ಯುರಿಟೀಸ್​ನ ಸಿಇಒ ಕೂಡ ಆಗಿದ್ದರು. ಗ್ರೇಟರ್ ಪೆಸಿಫಿಕ್ ಕ್ಯಾಫಿಟಲ್ ಎಲ್​ಎಲ್​ಪಿ ಸೇರಲು 2011ರಲ್ಲಿ ಸಿಂಗಾಪುರಕ್ಕೆ ತೆರಳಿದ್ದರು. ಷಾಂಘಾಯ್ನ ನ್ಯೂ ಡೆವಲಪ್​ವೆುಂಟ್ ಬ್ಯಾಂಕ್​ನಲ್ಲಿಯೂ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ.
70ಕ್ಕೂ ಹೆಚ್ಚು ದಂಪತಿಗಳಿಗೆ ಮೋಸ; ಖತರ್​ನಾಕ್​ ಗಂಡ-ಹೆಂಡ್ತಿಯ ಬಂಧನ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + 1 =
Remember me
