ನವದೆಹಲಿ:ಇನ್ನೇನು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿಕೊಳ್ಳಬೇಕು ಅಷ್ಟರೊಳಗೆ ಆ ವ್ಯಕ್ತಿಗೆ ಥಟ್ಟನೆ ಎಚ್ಚರವಾಗುವ ಅಥವಾ ಕಣ್ಣು ಮಿಟುಕಿಸುವ ಘಟನೆಗಳ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ ಅಲ್ಲವೇ, ಇದೀಗ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ ನಂತರ ಅವರು ಬದುಕುಳಿದ ಘಟನೆ ಒಡಿಶಾದ ಬರ್ಹಮ್‌ಪುರದಲ್ಲಿ ನಡೆದಿದೆ.
ಫೆಬ್ರವರಿ 01ರಂದು ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಬುಜ್ಜಿ ಅಮ್ಮ (52) ಶೇ. 50ರಷ್ಟು ಸುಟ್ಟ ಗಾಯಗಳಿಂದ ಎಂಕೆಸಿಜಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿತ್ತು. ತೀವ್ರ ಸುಟ್ಟ ಗಾಯಗಳಾಗಿದ್ದರಿಂದ ಆಕೆ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಆರ್ಥಿಕ ಪರಿಸ್ತಿತಿಯಿಂದಾಗಿ ಕುಟುಂಬಸ್ಥರು ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ದಾಖಲಿಸಲು ಹಿಂಜರಿಯುತ್ತಿದ್ದರು.
ಇದನ್ನೂ ಓದಿ:ರಾಹುಲ್ ಗಾಂಧಿಯದ್ದು ಮಿಶ್ರ ತಳಿ, ಬೆರಕೆ ಜಾತಿ: ಕೆ.ಎಸ್. ಈಶ್ವರಪ್ಪ ವಿವಾದ
ಫೆಬ್ರವರಿ 13ರಂದು ಆಕೆ ಉಸಿರಾಟವನ್ನು ನಿಲ್ಲಿಸಿದಾಳೆ ಎಂದು ಭಾವಿಸಿದ ಕುಟುಂಬಸ್ಥರು ಊರಿನವರಿಗೆ ವಿಚಾರವನ್ನು ಮುಟ್ಟಿಸಿ ಅಂತ್ಯಸಂಸ್ಕಾರಕ್ಕಾಗಿ ಸಕಲ ತಯಾರಿಯನ್ನು ಮಾಡಿಕೊಂಡಿದ್ದರು. ಆರ್ಥಿಕ ಮುಗ್ಗಟಿನಿಂದ ಬಳಲುತ್ತಿದ್ದ ಕುಟುಂಬಕ್ಕೆ ಗ್ರಾಮಸ್ಥರೆ ಸಹಾಯ ಮಾಡಿದ್ದು, ಅಂತಿಮ ವಿಧಿ ವಿಧಾನಕ್ಕಾಗಿ ಸಕಲ ತಯಾರಿ ಮಾಡಿಕೊಂಡಿದ್ದರು.
ಇನ್ನೇನು ಆಕೆಯ ಚಿತೆಗೆ ಅಗ್ನಿಸ್ಪರ್ಶ ಮಾಡಬೇಕು ಎನ್ನುಷ್ಟರಲ್ಲೇ ಆಕೆ ಕಣ್ಣು ತೆರೆದು ಮಾತನಾಡಲು ಪ್ರಾರಂಭಿಸಿದ್ದು, ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಹಾಗೂ ಗ್ರಾಮದವರು ಆಕೆಯನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಚಿಕಿತ್ಸೆಯನ್ನು ಮುಂದುವರೆಸಿದ್ದು, ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 2 =
Remember me
