ಮುಂಬೈ:ಮುಂಬೈನ ಸಾಕಿನಾಕ ಪ್ರದೇಶದಲ್ಲಿ ರೇಪ್​ ಮತ್ತು ದೈಹಿಕ ಹಿಂಸೆಗೊಳಗಾಗಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದ ಮಹಿಳೆಯು ಇಂದು ಆಸ್ಪತ್ರೆಯಲ್ಲಿ ಸಾವಪ್ಪಿದ್ದಾಳೆ. ಕಾಮುಕನ ಕ್ರೂರ ಚಿತ್ರಹಿಂಸೆಗೆ ಒಳಗಾಗಿದ್ದ 32 ವರ್ಷದ ಸಂತ್ರಸ್ತೆಯು ಆಸ್ಪತ್ರೆಯಲ್ಲಿ ಕಳೆದ 33 ಗಂಟೆಗಳಿಂದ ಜೀವಕ್ಕಾಗಿ ಹೋರಾಟ ನಡೆಸುತ್ತಿದ್ದಳು.
ಶುಕ್ರವಾರ ಬೆಳಗಿನ ಜಾವ ನಿಲ್ಲಿಸಿದ್ದ ಟೆಂಪೋ ಒಂದರಲ್ಲಿ ಮಹಿಳೆಯೊಬ್ಬಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಸೆಕ್ಯುರಿಟಿ ಗಾರ್ಡ್​ ಒಬ್ಬ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದ. ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಆಕೆಯನ್ನು ರಾಜವಾಡಿ ಆಸ್ಪತ್ರೆಗೆ ಸೇರಿಸಿದ್ದರು. ವೈದ್ಯರ ಪರೀಕ್ಷೆಯ ನಂತರ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಕಬ್ಬಿಣದ ಸಲಾಕೆಯನ್ನು ಖಾಸಗಿ ಅಂಗದೊಳಕ್ಕೆ ತೂರಿಸಿ ವಿಕೃತಗೊಳಿಸಲಾಗಿದ್ದುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ:‘ಹಿಂದು’ ಹುಡುಗಿಯರ ತಂಟೆಗೆ ಬಂದ್ರೆ ಸುಮ್ಮನಿರಲ್ಲ: ಗುಜರಾತ್ ಸಿಎಂ ಖಡಕ್ ಎಚ್ಚರಿಕೆ
ಈ ಹೀನಾಯ ಕೃತ್ಯವನ್ನು ಎಸಗಿದ ರಾಜಸ್ತಾನ ಮೂಲದ ಮೋಹನ್​ ಚೌಹಾನ್​(45) ಎಂಬುವವನನ್ನು ಸಿಸಿಟಿವಿ ಫೂಟೇಜ್​​​ಗಳ ಸಹಾಯದಿಂದ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಯತ್ನದ ಆರೋಪಗಳು ದಾಖಲಾಗಿದ್ದವು. ಇದೀಗ, ಈ ಕೇಸು ಅತ್ಯಾಚಾರ ಮತ್ತು ಕೊಲೆಯ ಪ್ರಕರಣವಾಗಿ ಬದಲಾಗಿದೆ.(ಏಜೆನ್ಸೀಸ್)
ಭಾರತದಲ್ಲಿ ಕರೊನಾ ಚೇತರಿಕೆ ದರ ಎಷ್ಟು ಗೊತ್ತೆ?

ಮೆನೋಪಾಸ್​ ಸಮಸ್ಯೆಗಳ ನಿಯಂತ್ರಣಕ್ಕೆ ಉಪಯುಕ್ತ, ಈ ಯೋಗಾಸನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + seven =
Remember me
