ಮೀರತ್​ :ಉತ್ತರಪ್ರದೇಶದ ಮೀರತ್​ನಲ್ಲಿ ಕೆಲಸ ಮಾಡುವ ಮಹಿಳಾ ಪೊಲೀಸ್​ ಪೇದೆಯೊಬ್ಬರು ಪೊಲೀಸ್​ ಅಧಿಕಾರಿಯಾದ ಮಾವನಿಂದ ರೇಪ್​ಗೊಳಗಾಗಿರುವುದು ಬೆಳಕಿಗೆ ಬಂದಿದೆ. ಇಷ್ಟು ಸಾಲದೆಂಬಂತೆ, ಈ ಸಂಗತಿ ತಿಳಿದ ಆಕೆಯ ಪೊಲೀಸ್​ ಗಂಡ, ಕಾನೂನುಬಾಹಿರವಾದ ಟ್ರಿಪಲ್ ತಲಾಖ್​ ಹೇಳಿ ಆಕೆಗೆ ವಿಚ್ಛೇದನ ನೀಡಿದ್ದಾನೆ ಎನ್ನಲಾಗಿದೆ!
ಕಳೆದ ಬುಧವಾರ ರಾತ್ರಿ ಸಂತ್ರಸ್ತ ಮಹಿಳಾ ಪೇದೆಯು ಮನೆಯಲ್ಲಿ ಒಬ್ಬಳೇ ಇದ್ದಾಗ ಪ್ರಾವಿಂಷಿಯಲ್ ಆರ್ಮ್ಸ್​ ಕಾನ್ಸಟಬುಲರಿಯ ಅಧಿಕಾರಿ ಮಾವ ನಜೀರ್​ ಅಹಮದ್​ ಬಂದು ಅತ್ಯಾಚಾರ ಎಸಗಿದ. ಈ ಬಗ್ಗೆ ಯಾರಿಗಾದರೂ ಹೇಳಿದಲ್ಲಿ ಸಾಯಿಸಿಬಿಡುವುದಾಗಿ ಬೆದರಿಕೆ ಹಾಕಿದ ಎನ್ನಲಾಗಿದೆ.
ಇದನ್ನೂ ಓದಿ:ಹೆರಿಗೆಯಾದ ಅಕ್ಕನನ್ನು ನೋಡಲು ಹೋದ ತಂಗಿಯನ್ನೇ ರೇಪ್ ಮಾಡಿದ ಭಾವ!
ತನ್ನ ಮೇಲೆ ನಡೆದ ಅತ್ಯಾಚಾರದ ವಿಷಯವನ್ನು ಪೊಲೀಸ್​ ಅಧಿಕಾರಿಯಾದ ತನ್ನ ಪತಿ ಅಬೀದ್​ಗೆ ಆಕೆ ಹೇಳಿಕೊಂಡಿದ್ದಾಳೆ. ಆದರೆ, ಅವಳಿಗೆ ಸಹಾಯ ಮಾಡುವ ಬದಲು, ಆತ ತಕ್ಷಣ ನಿಷೇಧಿತ ಟ್ರಿಪಲ್​ ತಲಾಖ್​ ಪದ್ಧತಿಯ ಮೂಲಕ ವಿಚ್ಛೇದನ ನೀಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಸಂತ್ರಸ್ತ ಪೇದೆಯು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದು, ಮೂರು ವರ್ಷ ಮುಂಚೆ ಮದುವೆಯಾದಾಗಿನಿಂದ ತನ್ನ ಅತ್ತೆಮಾವ ವರದಕ್ಷಿಣೆಗಾಗಿ ಆಗಾಗ್ಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ಕೂಡ ಹೇಳಿಕೊಂಡಿದ್ದಾಳೆ. ಘಾಜಿಯಾಬಾದ್​ನಲ್ಲಿ ನಿಯುಕ್ತಿ ಹೊಂದಿರುವ ಮುಖ್ಯ ಆರೋಪಿ ನಜೀರ್​ ಅಹ್ಮದ್​ ಮತ್ತು ಮೀರತ್​ನ ಪೊಲೀಸ್​ ಲೈನ್ಸ್​ನಲ್ಲಿ ಕೆಲಸ ಮಾಡುವ ಆತನ ಮಗ ಅಬೀದ್​ ವಿರುದ್ಧ ಕೊತ್ವಾಲಿ ಠಾಣೆ​ ಪೊಲೀಸರು ಕೇಸು ದಾಖಲಿಸಿದ್ದಾರೆ ಎಂದು ಮೀರತ್​ ನಗರ ಎಸ್ಪಿ ವಿನೀತ್​ ಭಟ್ನಾಗರ್​ ತಿಳಿಸಿದ್ದಾರೆ.(ಏಜೆನ್ಸೀಸ್)
ಲಕ್ಕಿ ಡ್ರಾನಲ್ಲಿ 16 ಕೋಟಿ ರೂ. ಔಷಧ ಪಡೆದ ಹೆಣ್ಣುಮಗು! ಬಡ ಪಾಲಕರ ಪ್ರಾರ್ಥನೆಗೆ ಒಲಿಯಿತು ಅದೃಷ್ಟ!

ಚಲಿಸುತ್ತಿದ್ದ ವಿಮಾನದಿಂದ ಹಾರಿದ ಪ್ರಯಾಣಿಕ! ಬೆಚ್ಚಿಬೀಳಿಸಿದ ವಿಚಿತ್ರ ವರ್ತನೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 + seventeen =
Remember me
