ಮುಂಬೈ:ರಸ್ತೆಬದಿ ನಿಲ್ಲಿಸಿದ್ದ ಟೆಂಪೋದೊಳಗೆ 34 ವರ್ಷ ವಯಸ್ಸಿನ ಮಹಿಳೆಯನ್ನು ರೇಪ್​ ಮಾಡಿ, ಕಬ್ಬಿಣದ ಸಲಾಕೆಯಿಂದ ಹಿಂಸಿಸಿರುವ ಭಯಾನಕ ಘಟನೆ ಮುಂಬೈನಿಂದ ವರದಿಯಾಗಿದೆ. ಕೃತ್ಯದ ಸುಳಿವು ಸಿಕ್ಕ ಕೆಲವೇ ಗಂಟೆಗಳಲ್ಲಿ ಆರೋಪಿ ಮೋಹನ್​ ಚೌಹಾನ್​(45) ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಬೆಳಗಿನ ಜಾವ, ಮುಂಬೈನ ಸಾಕಿನಾಕ ಸಬ್​ಅರ್ಬನ್​ ಪ್ರದೇಶದಲ್ಲಿ ಈ ಅಪರಾಧ ನಡೆದಿದೆ. ಖೈರಾನಿ ರಸ್ತೆಯ ಬದಿಯಲ್ಲಿ ಮಹಿಳೆಯೊಬ್ಬಳು ಟೆಂಪೋದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದಾಗಿ ಪೊಲೀಸ್​ ಕಂಟ್ರೋಲ್​ ರೂಮ್​ಗೆ ಬೆಳ್ಳಂಬೆಳಿಗ್ಗೆ ಕರೆ ಬಂತು. ಪೊಲೀಸರು ಸ್ಥಳಕ್ಕೆ ಧಾವಿಸಿ ಆಕೆಯನ್ನು ತಕ್ಷಣ ರಾಜವಾಡಿ ಆಸ್ಪತ್ರೆಗೆ ಶುಶ್ರೂಷೆಗಾಗಿ ಕರೆದೊಯ್ದರು ಎನ್ನಲಾಗಿದೆ.
ಇದನ್ನೂ ಓದಿ:ಪಣಂಬೂರು ಕಡಲಲ್ಲಿ ದೋಣಿ ಅವಗಢ, ಓರ್ವ ನಾಪತ್ತೆ
ಆರಂಭಿಕ ತನಿಖೆಯಿಂದ ಮಹಿಳೆಯ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿ, ನಂತರ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿ ಖಾಸಗಿ ಅಂಗಗಳಿಗೆ ಮತ್ತು ಇತರೆಡೆ ಗಾಯಗೊಳಿಸಿರುವುದು ತಿಳಿದುಬಂದಿದೆ. ಕೃತ್ಯ ನಡೆದ ವಾಹನದೊಳಗೆಲ್ಲಾ ರಕ್ತದ ಕಲೆಗಳು ಕಂಡುಬಂದಿವೆ.
ತುರ್ತು ಕಾರ್ಯಾಚರಣೆ ಕೈಗೊಂಡ ಪೊಲೀಸರು, ಮೋಹನ್​ ಚೌಹಾನ್​ಅನ್ನು ಕೊಲೆ ಯತ್ನ(ಐಪಿಸಿ ಸೆಕ್ಷನ್​ 307) ಮತ್ತು ರೇಪ್​ (ಸೆಕ್ಷನ್ 376) ಮಾಡಿರುವ ಆರೋಪಗಳಡಿ ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.(ಏಜೆನ್ಸೀಸ್)
ಗಣಪ ಮೂರ್ತಿ ಎತ್ತರ: ಸರ್ಕಾರಿ ಆದೇಶಕ್ಕೆ ಸೆಡ್ಡು ಹೊಡೆದ ವಿಶ್ವ ಹಿಂದೂ ಪರಿಷತ್!
ಮೆನೋಪಾಸ್​ ಸಮಸ್ಯೆಗಳ ನಿಯಂತ್ರಣಕ್ಕೆ ಉಪಯುಕ್ತ, ಈ ಯೋಗಾಸನ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + seven =
Remember me
