ಲಖನೌ:ಚಲಿಸುತ್ತಿದ್ದ ಬಸ್​ನಲ್ಲಿಯೇ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಗೌತಮ ಬುದ್ಧ ನಗರದ ಪೊಲೀಸರು ಗುರುವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಇಬ್ಬರು ಆರೋಪಿ ಚಾಲಕರಲ್ಲಿ ಬುಧವಾರ ಓರ್ವ ಆರೋಪಿಯನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳ ಹೆಸರು ಕೇಳಿಬಂದಿದ್ದು, ನಾಪತ್ತೆಯಾಗಿರುವ ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ:40ರ ವೈದ್ಯನನ್ನು ಹನಿಟ್ರ್ಯಾಪ್​ಗೆ ಕೆಡವಿದ್ದ​ ಆರೋಪಿಗಳು ಪೊಲೀಸ್​ ಬಲೆಗೆ ಬಿದ್ದಿದ್ಹೇಗೆ?
ಘಟನೆ ಹಿನ್ನೆಲೆ ಏನು?: 25 ವರ್ಷದ ಮಹಿಳೆಯೊಬ್ಬಳು ಪ್ರತಾಪಗಢದಿಂದ ನೋಯ್ಡಾಗೆ ಖಾಸಗಿ ಹವಾನಿಯಂತ್ರಿತ ಬಸ್​ನಲ್ಲಿ ಪ್ರಯಾಣಿಸುವಾಗ ಬುಧವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಚಾಲಕರಿಬ್ಬರು ಅತ್ಯಾಚಾರ ಮಾಡಿದ್ದರು. ಆಘಾತಕಾರಿ ವಿಚಾರವೆಂದರೆ ಬಸ್​ನಲ್ಲಿ 12 ಮಂದಿ ಪ್ರಯಾಣಿಕರು ಸಹ ಇದ್ದರು ಎಂದು ತಿಳಿದುಬಂದಿದೆ.
ಕ್ಷಣ ಕ್ಷಣದ ಮಾಹಿತಿ ಹಾಗೂ ಕುತೂಹಲಕಾರಿ ಸುದ್ದಿಗಳಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಫಾಲೋ ಮಾಡಲು ಇಲ್ಲಿ ಕ್ಲಿಕ್ಕಿಸಿ
ನೋಯ್ಡಾದಲ್ಲಿ ತರಕಾರಿ ವ್ಯಾಪಾರಿಯಾಗಿರುವ ಪತಿಯ ಬಳಿಗೆ ಹೋಗಲು ತನ್ನಿಬ್ಬರು ಮಕ್ಕಳೊಂದಿಗೆ ಮಹಿಳೆ ಬಸ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಲಖನೌ ಮತ್ತು ಮಥುರಾ ನಡುವಿನ ಹೆದ್ದಾರಿಯಲ್ಲಿ ಚಾಲಕರಿಬ್ಬರು ಕೃತ್ಯವೆಸಗಿದ್ದಾರೆ. ಸಹ ಪ್ರಯಾಣಿಕರಿಗೆ ಗೊತ್ತಾಗುವಂತೆ ಕೂಗಾಡಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೆದರಿಸಿ ಬಸ್ಸಿನ ಹಿಂಬದಿಯ ಸೀಟಿನಲ್ಲಿ ಚಾಲಕರಿಬ್ಬರು ರೇಪ್​ ಮಾಡಿದ್ದಾರೆ. ಇವರ ಕೃತ್ಯಕ್ಕೆ ಇನ್ನಿಬ್ಬರು ಸೇರಿ ನೆರವು ನೀಡಿದ್ದಾರೆ.
ನೋಯ್ಡಾ ವ್ಯಾಪ್ತಿಯಲ್ಲಿ ಬರುವ 20ನೇ ವಲಯ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್​ 376 (ಅತ್ಯಾಚಾರ), 506 (ಅಪರಾಧ ಬೆದರಿಕೆ), 201 (ಅಪರಾಧದ ಪುರಾವೆಗಳ ಕಣ್ಮರೆಗೆ ಕಾರಣವಾಗುವುದು) ಮತ್ತು 212 (ಅಪರಾಧಿಯನ್ನು ಆಶ್ರಯಿಸುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)ಇದನ್ನೂ ಓದಿ:ಹಳೆಯ ಕಾಲದ ಚೊಂಬೆಂದು ನಂಬಿಸಿ ಟ್ರಾವೆಲ್ಸ್ ಉದ್ಯಮಿಗೆ 2 ಕೋಟಿ ರೂ. ಚೊಂಬು!
29ನೇ ಮಹಡಿಯಿಂದ ಬಿದ್ದರೂ ಬದುಕುಳಿದ 3 ವರ್ಷದ ಬಾಲಕ: ನಡೆಯಿತು ಪವಾಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 12 =
Remember me
