ಗುರುಗ್ರಾಮ:ಸತತ 13 ಗಂಟೆಗಳ ಕಾಲ ಮಹಿಳೆಯೊಬ್ಬರು ಕ್ಯಾಬಿನಲ್ಲಿ ತಿರುಗಾಡಿ ಹಣ ಪಾವತಿಸಲು ನಿರಾಕರಿಸಿ ಚಾಲಕನ ಮೇಲೆ ಲೈಂಗಿಕ ಕಿರುಕುಳದ ದೂರು ನೀಡುವುದಾಗಿ ಬೆದರಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆ ಕ್ಯಾಬ್ ಚಾಲಕ ಹಾಗೂ ಪೊಲೀಸ್​ ಅಧಿಕಾರಿಗಳಿಗೆ ಅವಾಜ್​ ಹಾಕುತ್ತಿರುವುದು ಕಂಡು ಬರುತ್ತದೆ.
ಈ ಕುರಿತು ಪ್ರತಿಕ್ರಿಯಸಿರುವ ಗುರುಗ್ರಾಮ ಪೊಲೀಸರು ಜ್ಯೋತಿ ಎಂಬ ಮಹಿಳೆಯೂ ದೀಪಕ್​ ಎಂಬುವವರ ಕಾರನ್ನು ಬಾಡಿಗೆಗೆ ಪಡೆದು 13 ಘಂಟೆಗಳ ಕಾಲ ಎಲ್ಲಿಗೆ ಹೋಗಬೇಕು ಎಂದು ಹೇಳದೆ ಸುತ್ತಾಡಿಸಿದ್ದಾರೆ. ಬಳಿಕ ಕ್ಯಾಬ್​ ಚಾಲಕ ಎಲ್ಲಿಗೆ ಹೋಗಬೇಕು ಎಂದು ಕೇಳಿದಾಗ ಕುಪಿತಗೊಂಡ ಮಹಿಳೆ ಆತನ ಮೇಲೆ ಸುಳ್ಳು ಮೊಕದ್ದಮೆಯನ್ನು ದಾಖಲಿಸುವುದಾಗಿ ಬೆದರಿಕೆ ಹಾಕಿದ್ಧಾರೆ.
Apparently, she takes cab rides & then refuses to pay driver, threatening to then file Harrassment or Molestation case. Another video where she did same with someone else. Heights of misuse of laws by women who don't spare even poor men 😞 please take action@gurgaonpolicepic.twitter.com/8vSRx2Rwf0
ಇದನ್ನೂ ಓದಿ:ಇನ್ಸ್​​ಟಾಗ್ರಾಂನಲ್ಲಿ ಪರಿಚಯವಾಗಿದ್ದ ಯುವಕನನ್ನು ಭೇಟಿಯಾಗಲು ಬಂದ ಮಹಿಳೆಗೆ ಕಾದಿತ್ತು ಶಾಕ್​
ಈ ಸಂಬಂಧ ಕ್ಯಾಬ್​ ಚಾಲಕ ದೀಪಕ್​ ಹಾಗೂ ಜ್ಯೋತಿ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಇಬ್ಬರ ನಡುವೆ ವಾಗ್ವಾದವೇ ನಡೆದು ಹೋಗಿದೆ. ವಿಚಾರ ತಿಳಿದು ಸ್ಥಳಕ್ಕೆ ಹೋದ ಪೊಲೀಸ್​ ಅಧಿಕಾರಿಗಳ ಜೊತೆ ಮಹಿಳೆ ಅಸಭ್ಯವಾಗಿ ವರ್ತಿಸಿದ್ದು, ಬಳಿಕ ಆಕೆ ಸ್ಥಳದಿಂದ ಪರಾರಿಯಾಗಿದ್ದಾಳೆ.
ಜ್ಯೋತಿ ಎಂಬ ಮಹಿಳೆಯೂ ಇದೇ ಮೊದಲ ಬಾರಿ ಈಗೆ ಮಾಡುತ್ತಿಲ್ಲ. ಪ್ರತಿಬಾರಿಯೂ ಕ್ಯಾಬ್​ಗಳನ್ನು ಬುಕ್​ ಮಾಡಿ ಹಣ ಪಾವತಿ ಮಾಡುವ ಸಮಯಕ್ಕೆ ಚಾಲಕರ ಜೊತೆ ಗಲಾಟೆ ತೆಗೆದು ಸುಳ್ಳು ಮೊಕದ್ದಮೆಗಳನ್ನು ದಾಖಲಿಸುವುದಾಗಿ ಬೆದರಿಸಿ ಪರಾರಿಯಾಗುತ್ತಿದ್ದರು. ಈ ಸಂಬಂಧ ಕ್ಯಾಬ್​ ಚಾಲಕದ ದೀಪಕ್​ ದೂರು ದಾಖಲಸಿದ್ದು, ತಲೆಮಾರಿಸಿಕೊಂಡಿರುವ ಮಹಿಳೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಗುರುಗ್ರಾಮ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + sixteen =
Remember me
