ನೊಯ್ಡಾ:ಮಹಿಳಾ ಪ್ರೊಫೆಸರ್​ ಒಬ್ಬರು ಸೆಕ್ಯೂರಿಟಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಪ್ರೊ. ಸುತಾಪಾ ದಾಸ್ ಕಾರಿನಿಂದ ಇಳಿದು ಬಂದು, ಸೆಕ್ಯೂರಿಟಿ ಸಿಬ್ಬಂದಿ ಸಚಿನ್​ನ ಕಪಾಳಕ್ಕೆ ಬಾರಿಸಿದ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.
ಕಾರು ಬಂದಾಗ ಗೇಟು ತೆರೆಯಲು ಸೆಕ್ಯೂರಿಟಿ ಸಿಬ್ಬಂದಿ ತಡ ಮಾಡಿದ್ದಾರೆ. ಈ ಕಾರಣಕ್ಕಾಗಿ ಹಲ್ಲೆ ಮಾಡಬೇಕಾಯಿತು ಎಂದು ಪ್ರೊ. ಸುತಾಪಾ ದಾಸ್ ಸಮರ್ಥಿಸಿಕೊಂಡಿದ್ದಾರೆ.
ಆದರೆ ಸೆಕ್ಯೂರಿಟಿ ಸಿಬ್ಬಂದಿ ಹೇಳುವುದೇ ಬೇರೆ. ಕಾರಿನ ನಂಬರ್ ಕಾಣುತ್ತಿದ್ದಂತೆ ನಮ್ಮಲ್ಲಿ ಸೆನ್ಸರ್ ಮೂಲಕ ಗೇಟು ತೆರೆಯುತ್ತದೆ. ಆದರೆ ಈ ಬಾರಿ ಕಾರಿನ ನಂಬರ್ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಇದರಿಂದ ಗೇಟ್ ತನ್ನಿಂತಾನೇ ತೆರೆಯಲಿಲ್ಲ. ಈ ವೇಳೆ ನಾವೇ ಗೇಟ್ ತೆರೆದು ಕಾರು ಒಳ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಹೀಗಿದ್ದರೂ ಮಹಿಳೆ ಬಂದು ಥಳಿಸಿದ್ದಾರೆ. ಈ ಸಂದರ್ಭದಲ್ಲಿ ನಾವು ಪೊಲೀಸರಿಗೆ ಕರೆ ಮಾಡಿದ್ದೇವೆ ಎಂದು ಸೆಕ್ಯೂರಿಟಿ ಸಚಿನ್ ತಿಳಿಸಿದ್ದಾರೆ.
ಪ್ರೊಫೆಸರ್ ಹಲ್ಲೆ ಮಾಡುತ್ತಿರುವುದನ್ನು ಇನ್ನೋರ್ವ ಸೆಕ್ಯೂರಿಟಿ ಸಿಬ್ಬಂದಿ ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸಿಸಿಟಿವಿಯಲ್ಲೂ ದಾಖಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಜಾಮೀನು ಲಭಿಸಿದೆ.(ಏಜೆನ್ಸೀಸ್)
ವಿಡಿಯೋ ಇಲ್ಲಿದೆ ನೋಡಿ:
Woman Repeatedly Slaps Security Guard At Noida High-Rise Societyhttps://t.co/Ai8L3XMtW5pic.twitter.com/OH9864OQfl
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 2 =
Remember me
