ಬೆಂಗಳೂರು:ಚಿಕ್ಕ ವಯಸ್ಸಿನಲ್ಲಿ ಇಂಜೆಕ್ಷನ್​ ತೆಗೆದುಕೊಳ್ಳಲು ಅದೆಷ್ಟು ಭಯ ಪಡುತ್ತಿದ್ದಿರಿ ಎನ್ನುವುದು ನೆನಪಿದೆಯೇ? ದೊಡ್ಡವರಾದ ಮೇಲೆ ಇಂಜೆಕ್ಷನ್​ ಯಾವ ಮಹಾ ಎಂದೆನಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ಇಂಜೆಕ್ಷನ್​ ತೆಗೆದುಕೊಳ್ಳಲು ಮಾಡಿದ ಸಾಹಸವನ್ನು ನೀವು ನೋಡಲೇಬೇಕು.
ಸುಕೃತಿ ತಲ್ವಾರ್​ ಹೆಸರಿನ ಮಹಿಳೆ ಕರೊನಾ ಲಸಿಕೆ ಪಡೆಯಲೆಂದು ಆಸ್ಪತ್ರೆಗೆ ಬಂದಿರುತ್ತಾರೆ. ಆ ವೇಳೆ ನರ್ಸ್​ ಅವರಿಗೆ ಲಸಿಕೆ ನೀಡಲು ಮುಂದಾಗುತ್ತಾರೆ. ಆದರೆ ಇಂಜೆಕ್ಷನ್​ ಎಂದರೆ ಸಾಕಷ್ಟು ಹೆದರಿಕೆಯಿದ್ದ ಸುಕೃತಿ ಕುತ್ತಲ್ಲಿದ್ದ ಎದ್ದು ನಿಲ್ಲುತ್ತಾರೆ. ಒಂದು ನಿಮಿಷ ಕೊಡಿ ಎಂದು ಬೇಡುತ್ತಾರೆ. ಅದನ್ನು ಕೇಳದ ನರ್ಸ್​ ಕೂರಲು ಹೇಳುತ್ತಾರೆ. ಕೂತ ಮೇಲೂ ಸುಕೃತಿ ಮಮ್ಮೀ ಎಂದು ಕೂಗಲಾರಂಭಿಸುತ್ತಾರೆ.
ಮಮ್ಮೀ ಎಂದು ಕೂಗಿದ ತಕ್ಷಣ ನರ್ಸ್​ ಹೀಗೆ ಮಾಡುವುದಾದರೆ ಇಲ್ಲಿಂದ ಎದ್ದು ಹೋಗಿ, ನಾನು ಇಂಜೆಕ್ಷನ್ ಕೊಡುವುದಿಲ್ಲ ಎಂದು ಹೇಳುತ್ತಾರೆ. ಇಲ್ಲ, ಸಾರಿ ಎಂದು ಕೇಳುವ ಸುಕೃತಿ ಕನಿಷ್ಠ ಮಮ್ಮೀ ಎಂದು ಹೇಳಲು ಅವಕಾಶ ಕೊಡಿ ಎನ್ನುತ್ತಾರೆ. ಇಲ್ಲ ಒಂದೂ ಪದವನ್ನೂ ಹೇಳಬಾರದು ಎಂದ ನರ್ಸ್​ ಹಾಗೆಯೇ ನಿಧಾನವಾಗಿ ಇಂಜೆಕ್ಷನ್​ ಕೊಟ್ಟು ಬಿಡುತ್ತಾರೆ.
ಸುಕೃತಿ ಇಂಜೆಕ್ಷನ್​ ಪಡೆಯಲು ಮಾಡಿದ ಒದ್ದಾಟವನ್ನು ಆಕೆಯ ಜತೆ ಹೋದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ನೆಟ್ಟಿಗರು ತಾವು ಬಾಲ್ಯದಲ್ಲಿ ಇಂಜೆಕ್ಷನ್​ಗೆ ಹೆದರುತ್ತಿದ್ದದ್ದನ್ನು ನೆನಪಿಸಿಕೊಂಡು ನಗು ಬೀರಿದ್ದಾರೆ. (ಏಜೆನ್ಸೀಸ್)
ಅಯ್ಯಯ್ಯೋ… ಅಮ್ಮಮ್ಮಾ.. ಈ ವಿಡಿಯೋ ನೋಡಿದ್ರೆ ಬಾಲ್ಯ ನೆನಪಾಗೋದು ಗ್ಯಾರಂಟಿ..ಬಾಲ್ಯದಲ್ಲಿ ಇಂಜೆಕ್ಷನ್​ ಹೆದರಿ ಅತ್ತಿದ ನೆನಪು ನಿಮಗಿದಿಯೇ? ಹಾಗಾದರೆ ಈ ವಿಡಿಯೋ ನಿಮಗಾಗಿಯೇ. ಕರೊನಾ ಲಸಿಕೆಯ ಮೊದಲನೇ ಡೋಸೇಜ್​ ಪಡೆಯಲು ಹೋದ ಸುಕೃತಿ ಹೆಸರಿನ ಮಹಿಳೆ ಇಂಜೆಕ್ಷನ್​ಗೆ ಹೆದರಿ ಒದ್ದಾಡಿದ ವಿಡಿಯೋ ಇದು.pic.twitter.com/uYvPlstOHa

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
