ಚಂಡೀಗಢ :ಕಾಂಗ್ರೆಸ್ ಕಾರ್ಯಕರ್ತನೊಬ್ಬ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ್ದು, ಈ ವಿಚಾರವಾಗಿ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿದ್ದ ಮಹಿಳೆಯ ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಜಾಗೊಳಿಸಿದೆ. ಅಷ್ಟೇ ಅಲ್ಲ, ಸುಳ್ಳು ಮತ್ತು ಕ್ಷುಲ್ಲಕವಾದ ಮೊಕದ್ದಮೆ ಹೂಡಿದ್ದಕ್ಕೆ 1 ಲಕ್ಷ ರೂ.ಗಳ ದಂಡ ವಿಧಿಸಿದೆ.
ಪಂಜಾಬ್​ನ ಮೋಗ ಜಿಲ್ಲೆಯ ಡಿಸ್ಪೆನ್ಸರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ ಪರಪುರುಷರೊಂದಿಗೆ ಇದ್ದ ತನ್ನ ಕೆಲವು ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. 4 ಲಕ್ಷ ರೂ. ಹಣ ನೀಡಿದ್ದರೂ, ಇನ್ನೂ ಹಣ ಕೇಳುತ್ತಾ ಏಪ್ರಿಲ್ 25, 2020 ರಂದು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ರೇಪ್ ಮಾಡಿದ ಎಂದು ಆರೋಪಿಸಿ ನಿಹಾಲ್ ಸಿಂಗ್​ ವಾಲಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು. ಆರೋಪಿಯು ಆಡಳಿತಾರೂಢ ಪಕ್ಷಕ್ಕೆ ಸೇರಿದವನಾದ್ದರಿಂದ ತನಿಖೆ ನಡೆಸುತ್ತಿರುವ ಎಸ್​ಐಟಿ ನ್ಯಾಯಯುತವಾಗಿ ವರದಿ ನೀಡುತ್ತಿಲ್ಲ ಎಂದು ಆರೋಪಿಸಿ, ಸಿಬಿಐ ತನಿಖೆ ಕೋರಿದ್ದಳು.
ಇದನ್ನೂ ಓದಿ:ರವಿಕೆ ಖರೀದಿಗೆ ಹೋಗಿದ್ದ ವಿಧಾನ ಪರಿಷತ್ ಸದಸ್ಯೆ ಪರ್ಸ್ ಕಳವು!
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹರನರೇಶ್ ಸಿಂಗ್ ಗಿಲ್​ ಅವರು, ಮಹಿಳೆ ಮತ್ತು ಆರೋಪಿ ಇಬ್ಬರೂ ಪರಿಚಯಸ್ಥರಾಗಿದ್ದರು. ಆಕೆಯ ಗಂಡನ ಮೇಲೆ ಪಂಚಾಯ್ತಿಯಲ್ಲಿ ಆರೋಪಿಯು ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಸುಳ್ಳು ಆಪಾದನೆ ಮಾಡಿದ್ದಳು ಎಂಬ ಪೊಲೀಸ್ ವರದಿಯನ್ನು ಪರಿಗಣಿಸಿ, ಅರ್ಜಿಯನ್ನು ವಜಾಗೊಳಿಸಿದರು. ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡುವ ಪ್ರಯತ್ನ ನಡೆದಿದೆ ಎಂದು ಅಭಿಪ್ರಾಯಪಟ್ಟು, 1 ಲಕ್ಷ ರೂ.ಗಳನ್ನು ದಂಡವಾಗಿ ಚಂಡೀಗಢದ ಇನ್ಸ್​ಟಿಟ್ಯೂಟ್ ಆಫ್ ಬ್ಲೈಂಡ್​ಗೆ ಜಮಾ ಮಾಡಬೇಕೆಂದು ಆದೇಶಿಸಿದರು.(ಏಜೆನ್ಸೀಸ್)
ಎಸ್​ಐಟಿ ವಿರುದ್ಧ ಸಿಡಿದೆದ್ದ ಸಿಡಿ ಲೇಡಿ: ವಿಚಾರಣೆ ನಡುವೆಯೇ ಕಮಿಷನರ್​ಗೆ ದೂರು ಪತ್ರ ಬರೆದಿದ್ದೇಕೆ?
ಬಾಲಿವುಡ್​ ನಟರ ಬೆನ್ನು ಹತ್ತಿದ ಕರೊನಾ : ಗೋವಿಂದ ಪಾಸಿಟೀವ್
ಹಠಾತ್ತನೇ ಭಾಷಣ ನಿಲ್ಲಿಸಿದ ಮೋದಿ! ವೈದ್ಯರ ತಂಡವನ್ನು ಕರೆದಿದ್ದೇಕೆ ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × 4 =
Remember me
