ಅಯೋಧ್ಯೆ:ಇತ್ತೀಚಿನ ದಿನಗಳಲ್ಲಿ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಸಿದ್ದಿ ಪಡೆಯುವ ಗೀಳಿಗೆ ಬಿದ್ದಿದ್ದು, ವಿಭಿನ್ನ, ವಿಚಿತ್ರ ಪ್ರಯತ್ನಗಳನ್ನು ಮಾಡುತ್ತ ಸಂಕಷ್ಟಕ್ಕೆ ಸಿಲುಕಿರುವವರನ್ನು ನಾವು ನೋಡಿದ್ದೇವೆ.
ಇದೀಗ ಯುವತಿ ಒಬ್ಬಳು ಅಯೋಧ್ಯೆಯ ಸರಯೂ ನದಿಯಲ್ಲಿ ರೀಲ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ.
ಇದನ್ನೂ ಓದಿ:ಸ್ಕೂಟರ್​ಗೆ ಗುದ್ದಿದ ಲಾರಿ;​ ಇಬ್ಬರು ಯುವಕರು ಮೃತ್ಯು
ಯುವತಿ ನದಿಯಲ್ಲಿ ನಿಂತು ರೀಲ್ಸ್​ ಮಾಡಿರುವ ವಿಡಿಯೋವನ್ನು ಟ್ವಿಟರ್​ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ಧಾರೆ. ಪ್ರತಿನಿತ್ಯ ಅಯೋಧ್ಯೆಗೆ ಸಾವಿರಾರು ಮಂದಿ ಭೇಟಿ ನೀಡಿ ಶ್ರೀರಾಮನ ಪಾದದ ಮೇಲೆ ಹರಿಯುವ ಸರಯೂ ನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಾರೆ.
ಇಂತಹ ಧಾರ್ಮಿಕ ಕ್ಷೇತ್ರಗಳಲ್ಲಿ ಈ ರೀತಿ ರೀಲ್ಸ್​ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ದಯವಿಟ್ಟು ಕಠಿಣ ಕ್ರಮವನ್ನು ಜರುಗಿಸಿ ಎಂದು ಟ್ವೀಟ್​ ಮಾಡಿ ಆಗ್ರಹಿಸಿದ್ದಾರೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಅಯೋಧ್ಯೆ ಪೊಲೀಸರು ರೀಲ್ಸ್​ ಮಾಡಿದ ಯುವತಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

प्रभारी निरीक्षक कोतवाली अयोध्या को नियमानुसार आवश्यक कार्यवाही हेतु निर्देशित किया गया।
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + three =
Remember me
