ಮಯೂರ್​ಭಂಜ್​:ಮಹಿಳೆಯೊಬ್ಬಳು ಹೆತ್ತ ಮಗುವನ್ನ ಕೇವಲ 800 ರೂ.ಗೆ ಮಾರಾಟ ಮಾಡಿರುವ ಅಮಾನವೀಯ ಘಟನೆ ಒಡಿಶಾದ ಮಯೂರ್​ಭಂಜ್​ ಬಳಿ ನಡೆದಿದೆ.ಇದನ್ನೂ ಓದಿ:ಇನ್​​ಸ್ಟಾಗ್ರಾಮ್​​ ಖಾತೆ ತೆರೆದ ನಟ ಪವನ್​ ಕಲ್ಯಾಣ್​; ಒಂದೇ ದಿನದಲ್ಲಿ ಅಧಿಕ ಫಾಲೋವರ್ಸ್!​​ಮಹಿಳೆಯನ್ನು ಕರಾಮಿ ಮುರ್ಮ ಎಂದು ಗುರುತಿಸಲಾಗಿದ್ದು, ಬಡತನ ಹಾಗೂ ಎರಡನೇ ಮಗುವು ಕೂಡ ಹೆಣ್ಣು ಹುಟ್ಟಿದ ನಿರಾಶೆಯಿಂದಾಗಿ ಈ ಕೃತ್ಯವನ್ನು ಎಸಗಿದ್ದಾಳೆ. ಆಕೆ ಪತಿಯು ಎಂದಿನಂತೆ ಕೆಲಸವನ್ನು ಮುಗಿಸಿಕೊಂಡು ಮನೆಗೆ ಬಂದಿದ್ದು, ಈ ವೇಳೆ ಮಗು ಕಾಣದೇ ಇದ್ದಾಗ ಘಟನೆಯು ಬೆಳಕಿಗೆ ಬಂದಿದೆ.ಘಟನೆಯಿಂದ ತೀವ್ರವಾಗಿ ನೊಂದಿರುವ ಗಂಡ ಕೂಡಲೇ ಕುಂಟಾ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಈ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರು, ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ಕರಾಮಿ ಮುರ್ಮು, ಮಧ್ಯವರ್ತಿ ಕೆಲಸಕ್ಕಾಗಿ ಮಾಹಿ ಮುರ್ಮ ಹಾಗೂ ಮಗುವನ್ನು ಖರೀದಿಸಿದ ಆರೋಪದಲ್ಲಿ ಫುಲ್ಮಂಡಿ ಮರಂಡಿ ಹಾಗೂ ತುಡುಕುಡ್​ ಎಂಬ ದಂಪತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
